ಕರ್ನಾಟಕದ 30 ಜಿಲ್ಲೆಗಳಲ್ಲೂ ಕೊರೋನಾ: ಇಲ್ಲಿದೆ ಶುಕ್ರವಾರದ ಜಿಲ್ಲಾವಾರು ಸಂಖ್ಯೆ

By Suvarna News  |  First Published Aug 28, 2020, 8:51 PM IST

ಗುರುವಾರ ಸಾಯಂಕಾಲದಿಂದ ಶುಕ್ರವಾರ ಸಾಯಂಕಾಲದವರೆಗಿನ ಗಂಟೆಗಳಲ್ಲಿ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಅಬ್ಬರಿ ಬೊಬ್ಬಿರಿದಿದೆ.


ಬೆಂಗಳೂರು, (ಆ.28): ರಾಜ್ಯದಲ್ಲಿ ಇಂದು (ಶುಕ್ರವಾರ) ಒಟ್ಟು 8960 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,18,752ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ  136 ಸೋಂಕಿತರು ಮೃತಪಟ್ಟಿದ್ದು, ಇದರೊಂದಿಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 5368ಕ್ಕೇರಿದೆ. ಈ  ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7464 ಸೋಂಕಿತರು ಗುಣಮುಖರಾಗಿದ್ದಾರೆ.  ರಾಜ್ಯದಲ್ಲಿ ಇದೀಗ ಒಟ್ಟು 2,27,018 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ಒಟ್ಟು 86,347 ಸಕ್ರಿಯ ಸೋಂಕು ಪ್ರಕರಣಗಳಿವೆ.

Latest Videos

undefined

ಕಾಂಗ್ರೆಸ್‌ ವಿರುದ್ಧ ನಾಯಕರ ಅಸಮಾಧಾನ, ಬಿಟೌನ್ ಮಾಫಿಯಾ ಬಿಚ್ಚಿಟ್ಟ ಕಂಗನಾ: ಆ.28ರ ಟಾಪ್ 10 ಸುದ್ದಿ!

754 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನು ಇಂದು (ಶುಕ್ರವಾರ) ಬೆಂಗಳೂರು ನಗರ ಜಿಲ್ಲೆಯಲ್ಲಿ 2721 ಕೋವಿಡ್ 19 ಸೊಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದೆ.

ಜಿಲ್ಲಾವಾರಿ ಕೇಸ್
ಬೆಂಗಳೂರು ನಗರ 2721, ಮೈಸೂರು 726, ಬಳ್ಳಾರಿ 484, ದಕ್ಷಿಣಕನ್ನಡ 448, ದಾವಣಗೆರೆ 379, ಹಾಸನ 357, ಶಿವಮೊಗ್ಗ 314, ಧಾರವಾಡ 299, ಬೆಳಗಾವಿ 290, ಕಲಬುರಗಿ 222, ಬೆಂಗಳೂರು ಗ್ರಾಮಾಂತರ 214,  ತುಮಕೂರು 250, ಕೊಪ್ಪಳ 217, ಮಂಡ್ಯ 188, ರಾಯಚೂರು 178, ಉಡುಪಿ 176,  ಚಿಕ್ಕಮಗಳೂರು 136, ಗದಗ 169, ಬಾಗಲಕೋಟೆ 148, ಉತ್ತರಕನ್ನಡ 147, ವಿಜಯಪುರ 139, ಹಾವೇರಿ 132, ಚಿಕ್ಕಬಳ್ಳಾಪುರ 124, ಚಿತ್ರದುರ್ಗ 150 , ರಾಮನಗರ 87, ಕೋಲಾರ 74, ಯಾದಗಿರಿ 66, ಬೀದರ್ 60, ಚಾಮರಾಜನಗರ 37, ಕೊಡಗು 28.

ಸೆಪ್ಟಂಬರ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6 ಲಕ್ಷ!

"

click me!