ಮಂಡ್ಯದಲ್ಲಿ ಡಿ.20ರಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಸಿಎಂ ಸಿದ್ದರಾಮಯ್ಯ

By Sathish Kumar KH  |  First Published Jun 25, 2024, 1:19 PM IST

ಮಂಡ್ಯದಲ್ಲಿ ಡಿಸೆಂಬರ್ 20, 21 ಹಾಗೂ 22ರಂದು ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುತ್ತದೆ. ಸಮ್ಮೇಳನಾಧ್ಯಕ್ಷರು ಯಾರು ಗೊತ್ತಾ?

ಬೆಂಗಳೂರು (ಜೂ.25): ಮಂಡ್ಯದಲ್ಲಿ ಡಿಸೆಂಬರ್ 20, 21 ಹಾಗೂ 22ರಂದು ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುತ್ತದೆ. ಆದರೆ, ಇನ್ನೂ ಸಮ್ಮೇಳನಾಧ್ಯಕ್ಷರನ್ನು ನೇಮಕ ಮಾಡಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ತಿಂಗಳಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಈ ಬಾರಿ ನಡೆಯಲಿದೆ ಈ ಸಮ್ಮೇಳನ ನಡೆಸಲಾಗುತ್ತದೆ. ಡಿಸೆಂಬರ್ 20,21,22 ರಂದು ಸಮ್ಮೇಳನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸುತ್ತಾರೆ ಎಂಬ ನೀರಿಕ್ಷೆ ಇದೆ. ನಾನು ಬಂದು ಭಾಗವಹಿಸಿ ಎಂದು ಮನವಿ ಮಾಡ್ತೀನಿ. ಸರ್ಕಾರ ಎಲ್ಲಾ ರೀತಿಯ ಸಹಕರವನ್ನ‌ ನೀಡಲಿದೆ. ಈವರೆಗೆ ಸಮ್ಮೇಳನದ ಅಧ್ಯಕ್ಷರನ್ನ‌ ನೇಮಕ ಮಾಡಿಲ್ಲ. ಇನ್ನೊಂದು ಸುತ್ತಿನ ಸಭೆ ಬಳಿಕ  ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

Latest Videos

undefined

ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾಡಳಿತ ಹಾಗೂ ಸರ್ಕಾರದ ನೇತೃತ್ವದಲ್ಲಿ ಇನ್ನೊಮ್ಮೆ ಚರ್ಚೆ ಮಾಡಿ ಸಮ್ಮೇಳನಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಎಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡುತ್ತೇವೆ. ಕನ್ನಡಿಗರ ಜೊತೆಗೆ ಎಲ್ಲ ಪತ್ರಿಕೆ ಹಾಗೂ ಮಧ್ಯಮಗಳಿಗೂ ಕೂಡ ಸಮ್ಮೇಳನಕ್ಕೆ ಆಹ್ವಾನ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. 

ಹಾಲಿನ ದರ ಏರಿಕೆ ವಿಚಾರ ಕರ್ನಾಟಕ ಹಾಲು ಮಂಡಳಿಯಿಂದ ಮಾಡಲಾಗಿದೆ. ಹಾಲಿನ ದರ ಹೆಚ್ಚಳದ ಬಗ್ಗೆ ಈಗಲೇ ಕೆಎಂಎಫ್ ಅವರೊಂದಿಗೆ ಮಾತನಾಡುತ್ತೇನೆ. ನನಗೆ ತಿಳಿದಿರುವ ಮಟ್ಟಿಗೆ ಬೇರೆ ಬೇರೆ ರಾಜ್ಯಗಳಲ್ಲಿ ನಮ್ಮ ರಾಜ್ಯಕ್ಕಿಂತಲೂ ಹಾಲಿನ ದರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡಿರುತ್ತಾರೆ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

ಅಶ್ಲೀಲ ವಿಡಿಯೋ ಸರೆ ಮತ್ತು ವೈರಲ್ ಮಾಡಿದ್ದಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್‌ಐಆರ್

click me!