ಯುಗಾದಿ ಹಬ್ಬದಂದು ಕರ್ನಾಟಕದಲ್ಲಿ ಕೊರೋನಾ ಮಹಾಸ್ಫೋಟ!

By Suvarna NewsFirst Published Apr 13, 2021, 8:01 PM IST
Highlights

ರಾಜ್ಯದಲ್ಲಿ ಕೊರೋನಾ ಎರಡನೇ ಅಬ್ಬರ ಮುಂದುವರೆದಿದ್ದು, ಪಾಸಿಟಿವ್ ಪ್ರಕರಣಗಳು ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. 

ಬೆಂಗಳೂರು, (ಏ.13): ಕರ್ನಾಟಕದಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಇಂದು (ಮಂಗಳವಾರ) ಒಂದೇ ದಿನ 8,778 ಪ್ರಕರಣಗಳು ಪತ್ತೆಯಾಗಿವೆ. ಇನ್ನು ಸೋಂಕಿಗೆ 67 ಜನರು ಬಲಿಯಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 10,83,647 ಕ್ಕೇರಿದರೆ, ಸಾವಿನ ಸಂಖ್ಯೆ 13,008ಕ್ಕೆ  ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಕಂಟ್ರೋಲ್‌ಗೆ ಮತ್ತೊಂದೆಜ್ಜೆ ಮುಂದಿಟ್ಟ ಸರ್ಕಾರ!

ಬೆಂಗಳೂರು ಮಹಾನಗರದಲ್ಲಿ ಕಳೆದ 24ಗಂಟೆಗಳಲ್ಲಿ 5500 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 55 ಜನ ಸೋಂಕಿತರು ಮೃತಪಟ್ಟಿದ್ದಾರೆ. ಪ್ರಸ್ತುತ ಒಟ್ಟು 57575 ಸಕ್ರಿಯ ಪ್ರಕರಣಗಳು ಇವೆ.

ರಾಜ್ಯದಲ್ಲಿ ಮಂಗಳವಾರ 6079 ಜನ ಗುಣಮುಖರಾಗಿದ್ದಾರೆ. ಇದರೊಂದಿಗೆ ಇದುವರೆಗೆ 9,92,003 ಜನ ಗುಣಮುಖರಾಗಿದ್ದಾರೆ. ಸದ್ಯ 78,617 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 474 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

click me!