ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ಇಲ್ಲಿದೆ ಸೆ.07ರ ಅಂಕಿ-ಸಂಖ್ಯೆ

By Suvarna News  |  First Published Sep 7, 2021, 7:43 PM IST

* ಕರ್ನಾಟಕದಲ್ಲಿ ಮತ್ತಷ್ಟು ಕೊರೋನಾ ಇಳಿಕೆ
* 851 ಜನರಿಗೆ ಸೋಂಕು, , 15 ಮಂದಿ ಬಲಿ
* ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ


ಬೆಂಗಳೂರು, (ಸೆ.07): ರಾಜ್ಯದಲ್ಲಿ ಇಂದು (ಸೆ.07) ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ಹೊಸದಾಗಿ 851 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 15 ಮಂದಿ ಬಲಿಯಾಗಿದ್ದಾರೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,56,988 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 37,441 ಸೋಂಕಿತರು ಮೃತಪಟ್ಟಿದ್ದಾರೆ.  ಇನ್ನು ಇದುವರೆಗೆ 29,02,089 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

Tap to resize

Latest Videos

ಎಲ್ಲ ಜಿಲ್ಲೆಗಳ ಪಾಸಿಟಿವಿಟಿ ದರ 2%ಗಿಂತ ಕೆಳಕ್ಕೆ

ರಾಜ್ಯದಲ್ಲಿ 17,432 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.71 ರಷ್ಟಿದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 248 ಜನರಿಗೆ ಸೋಂಕು ತಗುಲಿದ್ದು, ಮೂವರು ಸೋಂಕಿತರು ಮೃತಪಟ್ಟಿದ್ದಾರೆ. 362 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7063 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೋಂಕಿನ ಸಂಖ್ಯೆ:
ಬೆಂಗಳೂರು ನಗರ 248, ದಕ್ಷಿಣಕನ್ನಡ 227, ಚಿಕ್ಕಮಗಳೂರು 49, ಕೊಡಗು 31, ಮೈಸೂರು 53, ತುಮಕೂರು 44, ಉಡುಪಿ 74 ಹೊಸ ಪ್ರಕರಣ ವರದಿಯಾಗಿದೆ. ಬಾಗಲಕೋಟೆ 0, ಬಳ್ಳಾರಿ 3, ಬೀದರ್ 1, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 4, ಧಾರವಾಡ 0, ಗದಗ 0, ಹಾವೇರಿ 1, ಕಲ್ಬುರ್ಗಿ 3, ಕೊಪ್ಪಳ 0, ರಾಯಚೂರು 2, ರಾಮನಗರ 1, ವಿಜಯಪುರ 0, ಯಾದಗಿರಿ 1.

click me!