ಕನ್ನಡ ವಿವಿಗೂ ಶಾಕ್ ಕೊಟ್ಟ ಸರ್ಕಾರ: ಬರೋಬ್ಬರಿ 85 ಲಕ್ಷರೂ ಬಿಲ್!

By Ravi JanekalFirst Published Jun 18, 2023, 8:43 AM IST
Highlights

ಇಷ್ಟು ದಿನ ವಿದ್ಯುತ್ ಬಿಲ್ ನೋಡಿ ಮನೆಮಂದಿ ಹೌಹಾರಿದ್ದಾಯ್ತು, ವ್ಯಾಪಾರಸ್ಥರು ಮಳಿಗೆ ವಿದ್ಯುತ್ ಬಿಲ್ ನೋಡಿ ತಲೆತಿರುಗಿದ್ದಾಯ್ತು.ಇದೀಗ ಯೂನಿವರ್ಸಿಟಿಗೆ ಶಾಕ್ ಕೊಟ್ಟಿರೋ ಸರ್ಕಾರ. ಈ ಯುನಿವರ್ಸಿಟಿ ಬಿಲ್ ನೋಡಿದರೆ ನೀವು ಶಾಕ್ ಆಗೋದು ಗ್ಯಾರಂಟಿ!

ವಿಜಯನಗರ (ಜೂ18): ಇಷ್ಟು ದಿನ ವಿದ್ಯುತ್ ಬಿಲ್ ನೋಡಿ ಮನೆಮಂದಿ ಹೌಹಾರಿದ್ದಾಯ್ತು, ವ್ಯಾಪಾರಸ್ಥರು ಮಳಿಗೆ ವಿದ್ಯುತ್ ಬಿಲ್ ನೋಡಿ ತಲೆತಿರುಗಿದ್ದಾಯ್ತು.ಇದೀಗ ಯೂನಿವರ್ಸಿಟಿಗೆ ಶಾಕ್ ಕೊಟ್ಟಿರೋ ಸರ್ಕಾರ. ಈ ಯುನಿವರ್ಸಿಟಿ ಬಿಲ್ ನೋಡಿದರೆ ನೀವು ಶಾಕ್ ಆಗೋದು ಗ್ಯಾರಂಟಿ!

ಹಂಪಿ ವಿವಿಗೆ ಬಾಕಿ ಉಳಿಸಿಕೊಂಡಿರು ಬಾಕಿ ಬಿಲ್ ಸೇರಿ 85ಲಕ್ಷ ರೂ. ಬಿಲ್ ಬಂದಿದೆ. ಅಧಿಕಮಾಸದಲ್ಲಿ ದುರ್ಭಿಕ್ಷಂ ಎಂಬಂತಾಗಿದೆ. ಮೊದಲೇ ಪ್ರತಿಷ್ಟಿತ ಹಂಪಿ ವಿವಿ ಕರೆಂಟು ಬಿಲ್ ಕಟ್ಟಲು ಹಣವಿಲ್ಲ. ಈಗ ಬಾಕಿ ಬಿಲ್ ಸೇರಿ ಲಕ್ಷಾಂತರ ರೂ. ಹಣ ಕೊಡುದು ಅಸಾಧ್ಯವಾಗಿದೆ.

ಶಾಸಕರ ಪ್ರತಿಭಟನೆ ಓಕೆ, ಕಲ್ಲು ಹೊಡೆದಿದ್ದು ಯಾಕೆ? ಆಯನೂರು ಮಂಜುನಾಥ ಪ್ರಶ್ನೆ

ಹಳೆಯ ಬಾಕಿ ಮತ್ತು‌ ಈಗ ಹೆಚ್ಚಳವಾಗಿರೋ ಬಿಲ್ ಸೇರಿ ಕೊಟ್ಟಿರುವ ಬಿಲ್ ನೋಡಿ ಚಿಂತೆಗೀಡುಮಾಡಿದೆ. ಕನ್ನಡದ ಸಂಶೋಧನೆಗಾಗಿ ಜನ್ಮ ತಾಳಿರೋ ರಾಜ್ಯದ ಏಕೈಕ ಕನ್ನಡ ವಿಶ್ವವಿದ್ಯಾಲಯವಾಗಿರುವ ಹಂಪಿ ವಿವಿ ಇದೀಗ  ಕರೆಂಟ್ ಬಿಲ್ ಕಟ್ಟಲು ಹಣವಿಲ್ಲದೇ, ಪರದಾಡುತ್ತಿದೆ.

ಕರೆಂಟು ಬಿಲ್ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ:

ಹೌದು ಮೊದಲೇ ಸಾಕಷ್ಟು ಆರ್ಥಿಕ ಸಂಪೂನ್ಮೂಲಗಳ ಕೊರತೆಯಿಂದ ಹೈರಾಣಾಗಿರುವ ಹಂಪಿ ವಿಶ್ವವಿದ್ಯಾಲಯ. ಇಂಥ ಪರಿಸ್ಥಿತಿಯಲ್ಲಿ 85 ಲಕ್ಷ ರೂ. ಬಿಲ್ ಬಂದಿರುವುದು ನಿಜಕ್ಕೂ ಶಾಕ್ ಆಗಿದೆ. ಹೀಗಾಗಿ ಕರೆಂಟು ಬಿಲ್ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಕುಲಪತಿ. ಹಂಪಿ ವಿವಿಯ ಕುಲಪತಿ ಡಾ. ಪರಮಶಿವಮೂರ್ತಿ ಅವರಿಂದ ಸರ್ಕಾರಕ್ಕೆ ಪತ್ರ. ವಿದ್ಯುತ್ ಬಿಲ್ ಕಟ್ಟಲು ಸಾಕಷ್ಟು ಹಣ ಇಲ್ಲ. ಸರ್ಕಾರದಿಂದಲೂ ಸಕಾಲಕ್ಕೆ ಅನುದಾನವೂ ಬಂದಿಲ್ಲ. ಸಿಬ್ಬಂದಿಗಳಿಗೆ ಸಂಬಳ ಕೊಡಲಾಗದೆ ಪರದಾಡುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಲಕ್ಷಾಂತರ ವಿದ್ಯುತ್ ಬಿಲ್ ಪಾವತಿಸುವುದು ಅಸಾಧ್ಯ. ಹೀಗಾಗಿ ಹಂಪಿ ವಿವಿ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ವಿವಿ ಕುಲಪತಿ ಪತ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. 

video viral: ಕರೆಂಟ್‌ ಬಿಲ್‌ ಕಟ್ಟಬೇಡಿರೆಂದು ಪಂಚಾಯ್ತಿ ಸದಸ್ಯರಿಂದ್ಲೇ ಅಭಿಯಾನ; ಇಕ್ಕಟ್ಟಿಗೆ ಸಿಲುಕಿರುವ ಕಾಂಗ್ರೆಸ್

ಕರೆಂಟ್‌ ಬಿಲ್ ಮನ್ನಾ ಮಾಡುವಂತೆ ವಿವಿ ಕುಲಪತಿ ರಾಜ್ಯ ಸರ್ಕಾರಕ್ಕೆ ಬರೆದಿರೋ ಪತ್ರ ಸುವರ್ಣ ನ್ಯೂಸ್‌ಗೆ ಲಭ್ಯವಾದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕರೆಂಟ್ ಬಿಲ್ ಮನ್ನಾ ಮಾಡುತ್ತಾ ರಾಜ್ಯ ಸರ್ಕಾರ..?

click me!