84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಗೊಂದಲಕ್ಕೆ ತೆರೆ..!

By Web DeskFirst Published Nov 19, 2018, 9:25 PM IST
Highlights

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧಾರವಾಡದಲ್ಲಿ ಯಾವ ಸ್ಥಳದಲ್ಲಿ ನಡೆಸಬೇಕೆಂಬ ಜಾಗದ ಗೊಂದಲಕ್ಕೆ ತೆರೆಬಿದ್ದಿದೆ.

ಧಾರವಾಡ, (ನ.19): 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧಾರವಾಡದ ಯಾವ ಸ್ಥಳದಲ್ಲಿ ನಡೆಸಬೇಕೆನ್ನುವ ಗೊಂದಲ ಬಗೆಹರಿದಿದೆ.

ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲು ನಿರ್ಧಾರಿಸಲಾಗಿದೆ. ಇಂದು [ಸೋಮವಾರ] ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಸಾಹಿತಿಗಳು, ಉಪ ಸಮಿತಿಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.

ಧಾರವಾಡ ಸಾಹಿತ್ಯ ಸಮ್ಮೇ​ಳ​ನದ ಲಾಂಛನ, ವೆಬ್‌ಸೈಟ್‌ ಬಿಡು​ಗ​ಡೆ

ಧಾರವಾಡದ ಸ್ಥಳೀಯ ಸಾಹಿತಿಗಳು, ಸಂಸ್ಕೃತಿ ಚಿಂತಕರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಸಮ್ಮೇಳನಕ್ಕೆ ಕೃಷಿ ವಿವಿಯ ಆವರಣ ಸೂಕ್ತ ಸ್ಥಳ ಎಂದು ಅಂತಿಮಗೊಳಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಸ್ಪಷ್ಟಡಿಸಿದ್ದಾರೆ.

ಸಮ್ಮೇಳನ ಆಯೋಜಿಸುವ ಸ್ಥಳದ ಕುರಿತು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಮುಖ್ಯ ವೇದಿಕೆ, ಪುಸ್ತಕ, ವಾಣಿಜ್ಯ ಮಳಿಗೆ, ಸಾರಿಗೆ ಸಂಚಾರ ನಿಯಂತ್ರಣ, ಆಹಾರ ವ್ಯವಸ್ಥೆ ಮೊದಲಾದ 15 ಅಂಶಗಳನ್ನು ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಜನವರಿ 4, 5 ಮತ್ತು 6ರಂದು ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

click me!