ರಾಜ್ಯದ 8 ಜಿಲ್ಲೆಗಳಲ್ಲಿ ಈಗ ಕೊರೋನಾ ಶತಕ!

By Kannadaprabha News  |  First Published May 26, 2020, 7:09 AM IST

ರಾಜ್ಯದ 8 ಜಿಲ್ಲೆಗಳಲ್ಲಿ ಈಗ ಕೊರೋನಾ ಶತಕ!| ಮಂಡ್ಯದಲ್ಲಿ 227 ಸಕ್ರಿಯ ಸೋಂಕು| ರಾಜ್ಯದಲ್ಲಿ ನಂ.1| ಮಹಾರಾಷ್ಟ್ರ ಎಫೆಕ್ಟ್ನಿಂದಾಗಿ ಸೋಂಕು ತೀವ್ರವಾಗಿ ಹೆಚ್ಚಳ


ಬೆಂಗಳೂರು(ಮೇ.26): ಕಳೆದ ಒಂದು ವಾರದಿಂದ ಮಹಾರಾಷ್ಟ್ರದಿಂದ ಆಗಮಿಸುವವರಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಆರು ಹೊಸ ಜಿಲ್ಲೆಗಳಲ್ಲಿ ಸೋಂಕು ಪ್ರಕರಣ ಶತಕ ದಾಟಿದ್ದು, ಒಟ್ಟು 8 ಜಿಲ್ಲೆಗಳು ಸೋಂಕಿನಲ್ಲಿ ಶತಕ ಬಾರಿಸಿದಂತಾಗಿದೆ.

ಮೇ 17ಕ್ಕೆ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ 100ಕ್ಕೂ ಹೆಚ್ಚು ಸೋಂಕು ವರದಿಯಾಗಿತ್ತು. ಕಳೆದ 8 ದಿನದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲೇ ಬರೋಬ್ಬರಿ 700ಕ್ಕೂ ಹೆಚ್ಚು ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಆರು ಜಿಲ್ಲೆಗಳು 100ಕ್ಕೂ ಹೆಚ್ಚು ಸೋಂಕು ದಾಖಲಿಸಿವೆ.

Tap to resize

Latest Videos

ಅದರಲ್ಲೂ ಮೇ 17ಕ್ಕೆ ಕೇವಲ 50 ಸೋಂಕು ಹೊಂದಿದ್ದ ಮಂಡ್ಯದಲ್ಲಿ ಕಳೆದ 1 ವಾರದಲ್ಲೇ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗುವ ಮೂಲಕ ಸೋಂಕಿನ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ಬೆಂಗಳೂರಿಗೆ (114) ದುಪ್ಪಟ್ಟು ಸಕ್ರಿಯ ಸೋಂಕು ಹೊಂದಿರುವ ಮಂಡ್ಯ (227) ಸಕ್ರಿಯ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರತಿಯೊಬ್ಬ ಕಾರ್ಮಿಕ ಮನೆ ತಲುಪುವವರೆಗೆ ವಿಶ್ರಾಂತಿ ಪಡೆಯಲ್ಲ: ಸೋನು ಸೂದ್!

8 ಜಿಲ್ಲೆಯಲ್ಲಿ ಶತಕ ದಾಟಿದ ಸೋಂಕು:

ಮೊದಲಿಗೆ ದಾವಣಗೆರೆ, ಮಂಡ್ಯ, ಕಲಬುರಗಿ ಸೋಂಕಿನಲ್ಲಿ ಶತಕ ದಾಖಲಿಸಿತ್ತು. ಭಾನುವಾರ ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ಸೋಂಕಿನ ಪ್ರಕರಣದಲ್ಲಿ ಶತಕದ ಗಡಿ ದಾಟಿದ್ದವು. ಸೋಮವಾರ ಉಡುಪಿ ಗಡಿ ದಾಟಿದೆ. ಉಡುಪಿಯಲ್ಲಿ 108 ಪ್ರಕರಣ ದಾಖಲಾಗುತ್ತಿದ್ದಂತೆ 100ಕ್ಕೂ ಹೆಚ್ಚು ಸೋಂಕು ದೃಢಪಟ್ಟಜಿಲ್ಲೆಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ (274), ಮಂಡ್ಯ (254), ಕಲಬುರಗಿ (157), ಬೆಳಗಾವಿ (128), ಚಿಕ್ಕಬಳ್ಳಾಪುರ (126), ಯಾದಗಿರಿ (126), ದಾವಣಗೆರೆ (125), ಉಡುಪಿಯಲ್ಲಿ (108) ಸೋಂಕು ಶತಕದ ಗಡಿ ದಾಟಿದೆ.

ಬೆಂಗಳೂರು ನಗರ 274

ಮಂಡ್ಯ 254

ಕಲಬುರಗಿ 157

ಬೆಳಗಾವಿ 128

ಚಿಕ್ಕಬಳ್ಳಾಪುರ 126

ಯಾದಗಿರಿ 126

ದಾವಣಗೆರೆ 125

ಉಡುಪಿ 108

click me!