ರಾಜ್ಯದಲ್ಲಿ ಮಂಗಳವಾರ 2362 ಕೇಸ್, 20 ಸಾವು| ಮಂಗಳವಾರ 1.09 ಲಕ್ಷ ಕೊರೋನಾ ಪರೀಕ್ಷೆ| ಈವೆಗೆ ಒಟ್ಟು 89.32 ಲಕ್ಷ ಜನರಿಗೆ ಕೋವಿಡ್ ಟೆಸ್ಟ್| ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ 869 ಮಂದಿ|
ಬೆಂಗಳೂರುನ.11): ರಾಜ್ಯದಲ್ಲಿ ನಿತ್ಯ ಲಕ್ಷದ ಮೇಲೆ ಕೊರೋನಾ ಪರೀಕ್ಷೆಗಳು ನಡೆಯುತ್ತಿದ್ದರೂ ಎರಡು ಸಾವಿರದ ಅಸುಪಾಸಿನಲ್ಲಿ ಪ್ರಕರಣಗಳು ವರದಿಯಾಗುವ ಪ್ರವೃತ್ತಿ ಮುಂದುವರಿದಿದೆ. ಮಂಗಳವಾರ 2,362 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 4,215 ಮಂದಿ ಗುಣಮುಖರಾಗಿದ್ದಾರೆ. ಇದೇ ವೇಳೆ 20 ಮಂದಿ ಮೃತರಾಗಿದ್ದಾರೆ.
ಗುಣಮುಖರ ಸಂಖ್ಯೆ ನಿತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 31,063ಕ್ಕೆ ಇಳಿದಿದೆ. ಸದ್ಯ 869 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾದಗಿರಿ ಮತ್ತು ರಾಮನಗರ ಜಿಲ್ಲೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಕೊರೋನಾ ಸೋಂಕಿತರು ದಾಖಲಾಗಿಲ್ಲ. ಈವರೆಗೆ ಒಟ್ಟು 8.51 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 8.08 ಲಕ್ಷ ಜನರು ಗುಣಮುಖರಾಗಿದ್ದಾರೆ. ಈವರೆಗೆ 19 ಮಂದಿ ಕೊರೋನಾ ಸೋಂಕಿತರು ಅನ್ಯ ಕಾರಣದಿಂದ ಹಾಗೂ ಸೋಂಕಿನ ಕಾರಣದಿಂದ ಈವರೆಗೆ 11,430 ಮಂದಿ ಮರಣವನ್ನಪ್ಪಿದ್ದಾರೆ. ಮಂಗಳವಾರ 1.09 ಲಕ್ಷ ಕೊರೋನಾ ಪರೀಕ್ಷೆ ನಡೆಸಲಾಗಿದ್ದು ಈವೆಗೆ ಒಟ್ಟು 89.32 ಲಕ್ಷ ಜನರಿಗೆ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರಲ್ಲಿ 3.5 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!
ಬೆಂಗಳೂರಲ್ಲೇ ಹೆಚ್ಚು:
ಬೆಂಗಳೂರು ನಗರ ಜಿಲ್ಲೆಯಲ್ಲಿ 8, ಬೆಂಗಳೂರು ಗ್ರಾಮಾಂತರ 3, ಬಳ್ಳಾರಿ 2, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಹಾಸನ, ತುಮಕೂರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ. ಉಳಿದ ಇಪ್ಪತ್ತು ಜಿಲ್ಲೆಗಳಲ್ಲಿ ಯಾರೂ ಮೃತರಾಗಿಲ್ಲ
ಬೆಂಗಳೂರು ನಗರ ಜಿಲ್ಲೆಯಲ್ಲಿ 1,176 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಬಾಗಲಕೋಟೆ 11, ಬಳ್ಳಾರಿ 34, ಬೆಳಗಾವಿ 30, ಬೆಂಗಳೂರು ಗ್ರಾಮಾಂತರ 55, ಬೀದರ್ 10, ಚಾಮರಾಜ ನಗರ 13, ಚಿಕ್ಕಬಳ್ಳಾಪುರ 57, ಚಿಕ್ಕಮಗಳೂರು 42, ಚಿತ್ರದುರ್ಗ 31, ದಕ್ಷಿಣ ಕನ್ನಡ 87, ದಾವಣಗೆರೆ 29, ಧಾರವಾಡ 18, ಗದಗ 6, ಹಾಸನ 110, ಹಾವೇರಿ 13, ಕಲಬುರಗಿ 9, ಕೊಡಗು 7, ಕೋಲಾರ 25, ಕೊಪ್ಪಳ 16, ಮಂಡ್ಯ 86, ಮೈಸೂರು 135, ರಾಯಚೂರು 24, ರಾಮನಗರ 27, ಶಿವಮೊಗ್ಗ 25, ತುಮಕೂರು 136, ಉಡುಪಿ 27, ಉತ್ತರ ಕನ್ನಡ 20, ವಿಜಯಪುರ 78 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 25 ಹೊಸ ಪ್ರಕರಣಗಳು ಧೃಢ ಪಟ್ಟಿವೆ.