ಬುಧವಾರ ರಾಜ್ಯದಲ್ಲಿ ಕೊರೋನಾ ಕೇಸ್ ದಾಖಲೆ: ನಿಮ್ಮ ಜಿಲ್ಲೆಯ ಸೋಂಕಿತರ ಸಂಖ್ಯೆ ತಿಳಿಯಿರಿ

By Suvarna NewsFirst Published Aug 12, 2020, 7:52 PM IST
Highlights

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೋನಾ ಮಹಾಸ್ಫೋಟವಗಿದ್ದು, 30 ಜಿಲ್ಲೆಗಳಲ್ಲೂ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಹಾಗಾದ್ರೆ, ನಿಮ್ಮ ಜಿಲ್ಲೆಯ ಪ್ರಕರಣಗಳೆಷ್ಟು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಆ.12): ರಾಜ್ಯದಲ್ಲಿ ಮತ್ತೊಮ್ಮೆ ಕೊರೋನಾ ಸೋಂಕು ಪ್ರಕರಣಗಳು ಸ್ಫೋಟಗೊಂಡಿದ್ದು ಕಳೆದ 24 ಗಂಟೆಯಲ್ಲಿ 7883 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ಇದುವರೆಗಿನ ದಾಖಲಾಗಿದೆ. 

ರಾಜ್ಯ ಆರೋಗ್ಯ ಇಲಾಖೆ ಮಾಧ್ಯಮಗಳಿಗೆ ಬುಧವಾರ ಈ ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,96,494 ಕ್ಕೆ ಏರಿಕೆಯಾಗಿದ್ದು, 113 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೆ  3510 ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ತಯಾರಿಸಿದೆ ರಷ್ಯಾ; ಹುಟ್ಟಿಕೊಂಡಿದೆ ಭಯ, ಅನುಮಾನ..!

ಇನ್ನು ಡಿಸ್ಜಾರ್ಜ್ ಸಂಖ್ಯೆಯಲ್ಲೂ ಏರಿಕೆಯಾಗಿದ್ದು ಬುಧವಾರ  7034 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಈವರೆಗೂ ಒಟ್ಟು 1,12,633 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲಾವಾರು ಕೇಸ್
ಬೆಂಗಳೂರು ನಗರ - 2802, ಬಳ್ಳಾರಿ -635, ಮೈಸೂರು 544,  ಬೆಳಗಾವಿ 314,ಧಾರವಾಡ 269, ಉಡುಪಿ 263, ಹಾಸನ 258, ದಾವಣಗೆ 239, ಕೊಪ್ಪಳ 202, ರಾಯಚೂರು 191, ಬೆಂಗಳೂರು ಗ್ರಾಮಾಂತರ 182, ಬಾಗಲಕೋಟಿ 170, ಗದಗ 148, ಕಲಬುರಗಿ 144, ಹಾವೇರಿ 132, ವಿಜಯಪುರ 212, ಮಂಡ್ಯ 212, ತುಮಕೂರು  121, ಚಿಕ್ಕಬಳ್ಳಾಪುರ 112, ಯಾದಗಿರಿ 107, ಬೀದರ್  91, ಉತ್ತರ ಕನ್ನಡ 84, ಚಿಕ್ಕಬಳ್ಳಾಪುರ 81, ಶಿವಮೊಗ್ಗ 69, ಚಾಮರಾಜನಗರ 68, ರಾಮನಗರ 63, ಚಿತ್ರದುರ್ಗ 61, ಕೋಲಾರ 33, ಕೊಡಗು 29

ಇಂದಿನ 12/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. https://t.co/pg6s4m7ijR pic.twitter.com/nPWly7uWYr

— K'taka Health Dept (@DHFWKA)
click me!