ತುಂಗಾ ಜಲಾಶಯದಿಂದ ನದಿಗೆ 75,000 ಕ್ಯೂಸೆಕ್‌ ನೀರು; ತುಂಗಭದ್ರಾ ಜಲಾಶಯಕ್ಕೆ ಒಳಹರಿವು

Published : Aug 02, 2026, 11:16 AM IST
Tunga

ಸಾರಾಂಶ

ತುಂಗಭದ್ರಾ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮತ್ತು ಶಿವಮೊಗ್ಗದ ತುಂಗಾ ಜಲಾಶಯದಿಂದ 53,000 ದಿಂದ 75,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿರುವುದರಿಂದ, ತುಂಗಭದ್ರಾ ಜಲಾಶಯದ ಒಳಹರಿವು ಇನ್ನೆರಡು ದಿನಗಳಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಶನಿವಾರ ಜಲಾಶಯಕ್ಕೆ 24,968 ಕ್ಯೂಸೆಕ್ ನೀರು ಹರಿದು ಬಂದಿದ್ದು, ನೀರಿನ ಮಟ್ಟ 1610 ಅಡಿ ತಲುಪಿದೆ.

ಕೊಪ್ಪಳ: ತುಂಗಭದ್ರಾ ಜಲಾಶಯದ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಇನ್ನೆರಡು ದಿನಗಳಲ್ಲಿ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆ ಆಗುವ ಸಾಧ್ಯತೆ ಇದೆ.

ಶನಿವಾರ ತುಂಗಭದ್ರಾ ಜಲಾಶಯಕ್ಕೆ 2 ಟಿಎಂಸಿ ಅಷ್ಟು ನೀರು (24,968 ಕ್ಯೂಸೆಕ್) ಹರಿದು ಬಂದಿದೆ. ಜಲಾಶಯದಲ್ಲಿ 38 ಟಿಎಂಸಿ ನೀರು ಶೇಖರಣೆಯಾಗಿದ್ದು ಜಲಾಶಯದ ನೀರಿನ ಮಟ್ಟ 1610 ಅಡಿಗಳಿವೆ.

ನದಿಗೆ 75,000 ಕ್ಯೂಸೆಕ್ ನೀರು

ಶಿವಮೊಗ್ಗದ ತುಂಗಾ ಜಲಾಶಯದಿಂದ ಬೆಳಗ್ಗೆ 8 ಗಂಟೆಯಿಂದ ತುಂಗಭದ್ರಾ ನದಿಗೆ 53,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಸಂಜೆ 5 ಗಂಟೆಗೆ ಜಲಾಶಯದಿಂದ ನದಿಗೆ 75,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರ ಫಲವಾಗಿ ತುಂಗಭದ್ರಾ ಜಲಾಶಯಕ್ಕೆ ಸೋಮವಾರ ಬೆಳಗ್ಗೆ 6 ರಿಂದ 7 ಟಿಎಂಸಿ ಅಷ್ಟು ನೀರಿನ ಒಳಹರಿವು ಬರುವ ಸಾಧ್ಯತೆ ಇದೆ.

ಶೃಂಗೇರಿಯಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ನದಿಯ ನೀರಿನ ಮಟ್ಟವು ಏರಿಕೆಯಾಗುತ್ತಿದೆ. ಆಗುಂಬೆಯಲ್ಲಿ ಗುರುವಾರ ರಾತ್ರಿ 8 ಗಂಟೆಯವರೆಗೂ ಒಂದೇ ದಿನದಲ್ಲಿ 15 ಸೆಮೀನಷ್ಟು ಮಳೆಯಾಗಿದೆ. ಆಗುಂಬೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ.

ಶುಕ್ರವಾರ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಎಡದಂಡೆ ವಿಜಯನಗರ ಕಾಲುವೆ ಭಾಗ ರೈತರು ಮುಂಗಾರು ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆಸಿದರು. ಆದರೆ ನೀರಾವರಿ ಇಲಾಖೆ ಅಧಿಕಾರಿಗಳು ಮುಂಗಾರು ಬೆಳೆಗಳಿಗೆ ಕಾಲುವೆಯಲ್ಲಿ ನೀರು ಹರಿಸುವ ಅಧಿಕಾರ ತಮಗಿಲ್ಲ ಎಂದು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇದನ್ನೂ ಓದಿ: ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ ಮಣ್ಣು ಕುಸಿತ: ತಡೆಗೋಡೆ ನಡೆಸದೇ ಅವೈಜ್ಞಾನಿಕ ಕಾಮಗಾರಿ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru To Belagavi ವಂದೇ ಭಾರತ್‌ ರೈಲು ಪ್ರಯಾಣ ತಪ್ಪಿಸಿಕೊಂಡವರಿಗೆ ಹಣ ರೀಫಂಡ್‌
ಬೆಂಗಳೂರಿಗರೇ ಗುಡ್‌ನ್ಯೂಸ್: ಸಸಿ ನೆಡಲು ಜಾಗ ಇದೆಯಾ? ಪಾಲಿಕೆಯ ಈ ನಂಬರ್‌ಗೆ ವಾಟ್ಸಪ್ ಮಾಡಿ ಸಾಕು