ಬೆಂಗಳೂರು: ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 7232 ಜನರ ಸಾವು, ಕಾರಣ?

Kannadaprabha News   | Asianet News
Published : Jul 20, 2020, 07:47 AM ISTUpdated : Jul 20, 2020, 11:59 AM IST
ಬೆಂಗಳೂರು: ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 7232 ಜನರ ಸಾವು, ಕಾರಣ?

ಸಾರಾಂಶ

ಬಿಬಿಎಂಪಿಯ ಎಂಟು ವಲಯಗಳ ಪೈಕಿ ಯಲಹಂಕ, ರಾಜರಾಜೇಶ್ವರಿನಗರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯದಲ್ಲಿ ಹೆಚ್ಚು ಸಾವಿನ ಪ್ರಕರಣಗಳು ವರದಿ| ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಸಾವಿನ ಪ್ರಕರಣಗಳು ಕಂಡುಬಂದಿಲ್ಲ|ದಾಸರಹಳ್ಳಿ ವಲಯದ ಮಾಹಿತಿ ಲಭ್ಯವಿಲ್ಲ| ಯಲಹಂಕ ವಲಯದಲ್ಲಿ 747 ಪುರುಷರು, 514 ಮಹಿಳೆಯರು ಸೇರಿದಂತೆ 1261 ಮಂದಿ ಸಾವು| 

ಬೆಂಗಳೂರು(ಜು.20): ರಾಜಧಾನಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದ ಅಂದರೆ ಕಳೆದ ನಾಲ್ಕೂವರೆ ತಿಂಗಳಿಂದ ಸೋಂಕು ಹಾಗೂ ಇತರೆ ಕಾರಣಗಳಿಂದ 7232 ಮಂದಿ ಮೃತಪಟ್ಟಿದ್ದಾರೆ.

"

ಬಿಬಿಎಂಪಿಯ ಎಂಟು ವಲಯಗಳ ಪೈಕಿ ಯಲಹಂಕ, ರಾಜರಾಜೇಶ್ವರಿನಗರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯದಲ್ಲಿ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಸಾವಿನ ಪ್ರಕರಣಗಳು ಕಂಡುಬಂದಿಲ್ಲ. ದಾಸರಹಳ್ಳಿ ವಲಯದ ಮಾಹಿತಿ ಲಭ್ಯವಿಲ್ಲ. ಯಲಹಂಕ ವಲಯದಲ್ಲಿ 747 ಪುರುಷರು, 514 ಮಹಿಳೆಯರು ಸೇರಿದಂತೆ 1261 ಮಂದಿ ಮೃತಪಟ್ಟಿದ್ದಾರೆ.

ನೂತನ ಬಿಬಿಎಂಪಿ ಆಯುಕ್ತರ ಖಡಕ್ ವಾರ್ನಿಂಗ್‌ಗೆ ಪತರುಗುಟ್ಟಿದ ಖಾಸಗಿ ಆಸ್ಪತ್ರೆಗಳು

ಮಹದೇವಪುರ ವಲಯದಲ್ಲಿ 156 ಪುರುಷರು, 108 ಮಹಿಳೆಯರು ಸೇರಿ 264 ಮಂದಿ, ರಾಜರಾಜೇಶ್ವರಿ ವಲಯದಲ್ಲಿ 1,000 ಮಂದಿ ಪುರುಷರು, 773 ಮಹಿಳೆಯರು ಸೇರಿ 1773 ಮಂದಿ, ಬೊಮ್ಮನಹಳ್ಳಿ ವಲಯದಲ್ಲಿ 70 ಪುರುಷರು, 40 ಮಹಿಳೆಯರು ಸೇರಿ 110 ಮಂದಿ, ದಕ್ಷಿಣ ವಲಯದಲ್ಲಿ 1,180 ಪುರುಷರು, 907 ಮಹಿಳೆಯರು ಸೇರಿ 2,087 ಮಂದಿ, ಪಶ್ಚಿಮ ವಲಯದಲ್ಲಿ 366 ಪುರುಷರು, 345 ಮಹಿಳೆಯರು ಸೇರಿ 711 ಮಂದಿ, ಪೂರ್ವ ವಲಯದಲ್ಲಿ 596 ಪುರುಷರು, 429 ಮಹಿಳೆಯರು ಸೇರಿ 1026 ಮಂದಿ ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ