ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 6976 ಕೇಸ್, ಯಾವ ಜಿಲ್ಲೆಯಲ್ಲಿ ಎಷ್ಟು?

By Suvarna News  |  First Published Apr 7, 2021, 7:33 PM IST

ಕರ್ನಾಟಕದಲ್ಲಿ ಕೊರೋನಾ ವೈರಸ್ ಸ್ಫೋಟವಾಗಿದ್ದು,  ಕೋವಿಡ್‌-19 ಸಾಂಕ್ರಾಮಿಕದ ಎರಡನೇ ಅಲೆಯ ಬಗ್ಗೆ ಆತಂಕ ಮೂಡಿಸುತ್ತಿದೆ.

6976 new coronavirus cases reported in Karnataka On April 7th rbj

ಬೆಂಗಳೂರು, (ಏ.07): ರಾಜ್ಯದಲ್ಲೂ ಕೊರೋನಾ 2ನೇ ಅಲೆಯ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಕೇಸ್‌ ಹಾಗೂ ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಏರಕೆಯಾಗುತ್ತಿದೆ. 

ಹೌದು..ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 6976 ಜನರಿಗೆ ಕೊರೋನಾ ಸೋಂಕು ತಗುಲಿರುವುದು ಧೃಢಪಟ್ಟಿದ್ದು, 35 ಜನ ಸೋಂಕಿತರು ಮೃತಪಟ್ಟಿದ್ದಾರೆ.

Tap to resize

Latest Videos

ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,33,560 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 12,731 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 

ಕೊರೋನಾ ಎಫೆಕ್ಟ್ : ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ, ಜನರೇ ಎಚ್ಚರ

ಇನ್ನು ಇಂದು (ಬುಧವಾರ) 2794 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 9,71,556 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ  49,254 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 353 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಕೊರೊನಾ ತೀವ್ರ ಏರಿಕೆ
ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿದೆ. ಬುಧವಾರ 5061 ಪ್ರಕರಣಗಳು ಪತ್ತೆಯಾಗಿವೆ. 

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
 ಬಾಗಲಕೋಟೆ 13, ಬಳ್ಳಾರಿ 49, ಬೆಳಗಾವಿ 101, ಬೆಂಗಳೂರು ಗ್ರಾಮಾಂತರ 70, ಬೆಂಗಳೂರು 4991, ಬೀದರ್ 214, ಚಾಮರಾಜನಗರ 39, ಚಿಕ್ಕಬಳ್ಳಾಪುರ 37, ಚಿಕ್ಕಮಗಳೂರು 38, ಚಿತ್ರದುರ್ಗ 20, ದಕ್ಷಿಣ ಕನ್ನಡ 112, ದಾವಣಗೆರೆ 20, ಧಾರವಾಡ 88, ಗದಗ 11, ಹಾಸನ 90, ಹಾವೇರಿ 12, ಕಲಬುರಗಿ 205, ಕೊಡಗು 10, ಕೋಲಾರ 29, ಕೊಪ್ಪಳ 24, ಮಂಡ್ಯ 58, ಮೈಸೂರು 243, ರಾಯಚೂರು 28, ರಾಮನಗರ 28, ಶಿವಮೊಗ್ಗ 34, ತುಮಕೂರು 204, ಉಡುಪಿ 89, ಉತ್ತರ ಕನ್ನಡ 35, ವಿಜಯಪುರ 50, ಯಾದಗಿರಿ 34 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

vuukle one pixel image
click me!
vuukle one pixel image vuukle one pixel image