
ಬೆಂಗಳೂರು(ಜು.24): ನಗರದಲ್ಲಿ ಕೊರೋನಾ ಸೋಂಕಿತರನ್ನು ಆಸ್ಪತ್ರೆ, ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಮೃತದೇಹಗಳನ್ನು ಸಾಗಿಸುವುದಕ್ಕಾಗಿ ವಿಧಾನಸಭಾ ಕ್ಷೇತ್ರ ಹಾಗೂ ವಲಯವಾರು ಒಟ್ಟು 677 ವಾಹನಗಳನ್ನು ಬಿಬಿಎಂಪಿ ನಿಯೋಜಿಸಿದೆ.
ಬಿಬಿಎಂಪಿಯಲ್ಲಿ 8 ವಲಯ ಹಾಗೂ ಬೆಂಗಳೂರು ನಗರ ಜಿಲ್ಲೆಗೆ ತಾಲೂಕುವಾರು ಹಂಚಿಕೆ ಮಾಡಲಾಗಿದೆ. ಒಟ್ಟು 677 ವಾಹನಗಳ ಪೈಕಿ ಗಂಭೀರ ಲಕ್ಷಣಗಳಿರುವ ಸೋಂಕಿತರ ಕರೆದೊಯ್ಯಲು 327 ಆ್ಯಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. ಸೋಂಕಿನ ಲಕ್ಷಣ ಇಲ್ಲದ ಮತ್ತು ಮಧ್ಯಮ ಸೋಂಕಿನ ಲಕ್ಷಣ ಇರುವವರನ್ನು ಕರೆದೊಯ್ಯಲು 350 ಟೆಂಪೋ ಟ್ರಾವೆಲರ್ ನಿಯೋಜನೆ ಮಾಡಲಾಗಿದೆ.
ಕೊರೋನಾ ನಿಯಂತ್ರಣ ಕಾರ್ಯಕ್ಕೆ ಅಧಿಕಾರಿಗಳ ಹಿಂದೇಟು..!
ಇನ್ನು ಸೋಂಕಿನಿಂದ ಮೃತಪಟ್ಟವರನ್ನು ಸಾಗಿಸುವುದಕ್ಕೆ 42 ಶ್ರದ್ಧಾಂಜಲಿ ವಾಹನಗಳನ್ನು ಬಿಬಿಎಂಪಿ ನಿಯೋಜಿಸಿದೆ. ಇದರಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ (ಕೋವಿಡ್ ಕೇರ್ ಸೆಂಟರ್‌ಗಾಗಿ)- 39 ಆ್ಯಂಬುಲೆನ್ಸ್ ಹಾಗೂ ಪೊಲೀಸರಿಗಾಗಿ 9 ಆ್ಯಂಬುಲೆನ್ಸ್ ಮೀಸಲಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ