ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ದಾಟಿದೆ. ಆದರೂ ಇತ್ತೀಚೆಗಿನ ಪ್ರತಿದಿನ ಪ್ರಕರಣಗಳನ್ನ ನೋಡಿದ್ರೆ ಗುರುವಾರ ಕೊರೋನಾ ಆರ್ಭಟ ಕೊಂಚ ತಣ್ಣಗಾಗಿದೆ.
ಬೆಂಗಳೂರು, (ಆ.13): ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 6,706 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,03,200ಕ್ಕೆ ಏರಿಕೆಯಾಗಿದೆ.
ಆದ್ರೆ, ಇಂದು ಸಂತಸದ ಸಂಗತಿ ಅಂದ್ರೆ ಸೊಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಹೌದು... ರಾಜ್ಯದಲ್ಲಿ ಇಂದು (ಗುರುವಾರ) ಚೇತರಿಕೆ ಪ್ರಮಾಣವು (59.67%) ಹೆಚ್ಚಾಗಿದ್ದು ಇಂದು 8,609 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಗುರುವಾರ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚಾದಂತಾಗಿದೆ.
undefined
ಬೆಂಗ್ಳೂರು ಗಲಭೆಯಲ್ಲಿದೆ ಟ್ವಿಸ್ಟ್, ಧೋನಿಗೂ ಕೊರೋನಾ ಟೆಸ್ಟ್ : ಆ.13ರ ಟಾಪ್ 10 ಸುದ್ದಿ!
ಒಟ್ಟಾರೆ 2,03,200 ಕೊರೋನಾ ಪ್ರಕರಣಗಳ ಪೈಕಿ 1,21,242 ಮಂದಿ ಡಿಸ್ಚಾರ್ಜ್ ಆಗಿದ್ದು ಇನ್ನು 78,336 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಇಂದು 103 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 3,613ಕ್ಕೆ ಏರಿಕೆಯಾಗಿದೆ.
ಹೆಚ್ಚಿದ ಚೇತರಿಕೆ ಪ್ರಮಾಣ
ಹೌದು... ಇತ್ತೀಚೆಗಿನ ಪ್ರತಿದಿನ ಪ್ರಕರಣಗಳನ್ನ ನೋಡಿದ್ರೆ ಗುರುವಾರ ಕೊರೋನಾ ಆರ್ಭಟ ಕೊಂಚ ತಣ್ಣಗಾಗಿದೆ. 6,706 ಕೇಸ್ ಪತ್ತೆಯಾಗಿದ್ರೆ, 8,609 ಮಂದಿ ಗುಣಮುಖರಾಗಿದ್ದಾರೆ. ಇದು ಉತ್ತಮ ಬೆಳವಣಿಗೆ. ಸದ್ಯ ಚೇತರಿಕೆ ಪ್ರಮಾಣ 59.67% ರಷ್ಟಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೊರೋನಾ ನಿರ್ಣಾಮವಾಗುವ ಆಶಾಭಾವನೆ ಮೂಡಿಸಿದೆ.