ಕರ್ನಾಟಕದಲ್ಲಿ 634 ಹೊಸ ಕೇಸ್‌ ಪತ್ತೆ, 2 ಸಾವು

By Kannadaprabha NewsFirst Published Jun 18, 2022, 4:30 AM IST
Highlights

*  ಈವರೆಗೆ 32 ಜನ ಮಾತ್ರ ಆಸ್ಪತ್ರೆಗೆ
*  ಬೆಂಗಳೂರಲ್ಲೇ 610
*  ಒಂದೂವರೆ ತಿಂಗಳ ಬಳಿಕ ಸೋಂಕಿತರ ಸಾವು 2ಕ್ಕೆ ಹೆಚ್ಚಳ
 

ಬೆಂಗಳೂರು(ಜೂ.18):  ರಾಜ್ಯದಲ್ಲಿ ಸತತ ಮೂರು ದಿನಗಳ ಬಳಿಕ ಕೊರೋನಾ ಸೋಂಕು ಹೊಸ ಪ್ರಕರಣಗಳು ಕೊಂಚ ಇಳಿಕೆಯಾಗಿದ್ದು, ಶುಕ್ರವಾರ 634 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ, ಒಂದೂವರೆ ತಿಂಗಳ (47 ದಿನ) ಬಳಿಕ ಸೋಂಕಿತರ ಸಾವು 2ಕ್ಕೆ ಹೆಚ್ಚಳವಾಗಿದೆ. 

ರಾಜ್ಯದಲ್ಲೀಗ 4528 ಸಕ್ರಿಯ ಸೋಂಕಿತರಿದ್ದಾರೆ. ಆದರೆ, ಅವರ ಪೈಕಿ 32 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಉಳಿದಂತೆ 4496 ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
ಶುಕ್ರವಾರ 503 ಮಂದಿ ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ 23 ವರ್ಷದ ಯುವಕ, ಬೆಂಗಳೂರಿನಲ್ಲಿ 83 ವರ್ಷದ ವೃದ್ಧೆ ಸೋಂಕಿನಿಂದ ಸಾವಿಗೀಡಾಗಿದ್ದಾರೆ. 22,586 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 2.8ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳನ್ನು 1500 ಕಡಿಮೆ ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು ಕೂಡಾ 199 ಇಳಿಕೆಯಾಗಿವೆ.

Covid Origin:ಚೀನಾ ಪ್ರಯೋಗಾಲಯದಿಂದ ಕೊರೋನಾ ವೈರಸ್ ಸೋರಿಕೆ ವಾದ ತಳ್ಳಿ ಹಾಕಲ್ಲ: ಡಬ್ಲ್ಯು ಎಚ್ ಒ

ಬೆಂಗಳೂರಲ್ಲೇ 610:

ಹೊಸ ಪ್ರಕರಣಗಳ ಪೈಕಿ ಬೆಂಗಳೂರು ಒಂದರಲ್ಲಿಯೇ 610 (ಶೇ.98 ರಷ್ಟು) ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ 7, ಉಡುಪಿ ಮತ್ತು ಉತ್ತರ ಕನ್ನಡ ತಲಾ 3, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಮೈಸೂರು ತಲಾ ಇಬ್ಬರಿಗೆ, ಬೆಳಗಾವಿ, ಧಾರವಾಡ, ಕಲಬುರಗಿ, ಶಿವಮೊಗ್ಗ ಹಾಗೂ ತುಮಕೂರು ತಲಾ ಒಬ್ಬರಿಗೆ ಸೋಂಕು ತಗುಲಿದೆ. 22 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ವಾರಾದ ಆರಂಭದಲ್ಲಿ 400 ಆಸುಪಾಸಿನಲ್ಲಿ ಹೊಸ ಪ್ರಕರಣಗಳು ಕೇವಲ ಮೂರೇ ದಿನದಲ್ಲಿ ದುಪ್ಪಟ್ಟಾಗಿ 800 ಗಡಿದಾಟಿತ್ತು. ಸದ್ಯ ಇಳಿಕೆಯಾಗಿದೆ. ಶೇ.3.5ಕ್ಕೆ ತಲುಪಿದ್ದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಕೂಡಾ ಶೇ.3ಕ್ಕಿಂತ ಕೆಳಕ್ಕಿಳಿದಿದೆ.
 

click me!