ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಸೋಮವಾರ ಮೂರಂಕಿಗೆ ಇಳಿದ ಸೋಂಕಿನ ಪ್ರಮಾಣ

By Suvarna NewsFirst Published Jan 4, 2021, 10:27 PM IST
Highlights

ಕರ್ನಾಟಕದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇಂದು (ಸೋಮವಾರ) ಮೂರಂಕಿಗೆ ಇಳಿದಿದೆ.

ಬೆಂಗಳೂರು, (ಜ.04) : ರಾಜ್ಯದಲ್ಲಿ  ಇಂದು (ಸೋಮವಾರ) 600 ಕೊರೋನಾ ಪಾಸಿಟಿವ್ ಕೇಸ್‌ಗಳು  ಪತ್ತೆಯಾಗಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ.

 ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,22,538ಕ್ಕೇರಿದ್ರೆ, ಸಾವನ್ನಪ್ಪಿದವರ ಸಂಖ್ಯೆ 12110 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್ ಸಂಖ್ಯೆ ಇಳಿಮುಖ, ಬೆಂಗ್ಳೂರಲ್ಲಿ ಹೆಚ್ಚಿದೆ 'ಸಾರಿ' ಟೆನ್ಷನ್..!

 ಇನ್ನು ಕಳೆದ 24 ಗಂಟೆಗಳಲ್ಲಿ 1283 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದರೊಂದಿಗೆ ಇದುವರೆಗೆ 900202 ಜನರು ಸೋಂಕಿನಿಂದ ಗುಣಮುಖರಾದಂತಾಗಿದೆ.

ಬೆಂಗಳೂರಿನಲ್ಲಿ 298 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು,  ಸೋಂಕಿತರ ಸಂಖ್ಯೆ 389955 ಕ್ಕೆ ಏರಿಕೆಯಾಗಿದೆ.  ಪ್ರಸ್ತುತ ರಾಜ್ಯದಲ್ಲಿ 10207 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 196 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

click me!