ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಜೂನ್18ರ ಅಂಕಿ-ಸಂಖ್ಯೆ

By Suvarna NewsFirst Published Jun 18, 2021, 9:12 PM IST
Highlights

* ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ
* ರಾಜ್ಯದಲ್ಲಿ ಹೊಸದಾಗಿ 5783 ಜನರಿಗೆ ಕೊರೋನಾ ಪಾಸಿಟಿವ್
* ಕೊರೋನಾ ಪಾಸಿಟಿವಿಟ್ ದರ ಶೇ. 4.05ಕ್ಕೆ ಕುಸಿತ

ಬೆಂಗಳೂರು, (ಜೂನ್.18): ರಾಜ್ಯದಲ್ಲಿ ಇಂದು (ಶುಕ್ರವಾರ) ಹೊಸದಾಗಿ 5783 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 168 ಸೋಂಕಿತರು ಮೃತಪಟ್ಟಿದ್ದಾರೆ. 

 ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27,96,121 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 33.602 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜೂನ್ 21ರಿಂದ ಕರುನಾಡು ಮತ್ತಷ್ಟು ಅನ್‌ಲಾಕ್..? ಯಾವುದಕ್ಕೆ ಸಿಗುತ್ತೆ ರಿಲೀಫ್?

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 15,290 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು 26,25,447 ಜನ ಗುಣಮುಖರಾದಂತಾಗಿದೆ. ಸದ್ಯ 1,37,050 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟ್ ದರ ಶೇ. 4.05 ಇದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ 1100 ಜನರಿಗೆ ಸೋಂಕು ತಗುಲಿದ್ದು, 39 ಮಂದಿ ಮೃತಪಟ್ಟಿದ್ದಾರೆ. ಇವತ್ತು 6160 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 73,844 ಸಕ್ರಿಯ ಪ್ರಕರಣಗಳಿವೆ.

click me!