ಮಾಸ್ಕ್‌ ಧರಿಸದ್ದಕ್ಕೆ 51 ಸಾವಿರ ದಂಡ!

By Kannadaprabha NewsFirst Published May 3, 2020, 7:37 AM IST
Highlights

ಮಾಸ್ಕ್‌ ಧರಿಸದ್ದಕ್ಕೆ .51 ಸಾವಿರ ದಂಡ!| ಮಾಸ್ಕ್‌ ಧರಿಸದಿದ್ದರೆ ಮತ್ತಷ್ಟುಕಠಿಣ ಕ್ರಮ: ಆಯುಕ್ತ ಅನಿಲ್‌ ಎಚ್ಚರಿಕೆ

ಬೆಂಗಳೂರು(ಮೇ.03): ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದವರಿಂದ ಬಿಬಿಎಂಪಿ ಮಾರ್ಷಲ್‌ಗಳು ಶನಿವಾರ ಒಂದೇ ದಿನ ಬರೋಬ್ಬರಿ .51 ಸಾವಿರ ದಂಡ ವಸೂಲಿ ಮಾಡಿದ್ದಾರೆ.

ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸದ ಮೊದಲ ದಿನವಾದ ಶುಕ್ರವಾರ ಕೇವಲ ನಾಲ್ಕು ಮಂದಿಯಿಂದ 2,600 ದಂಡ ವಸೂಲಿ ಮಾಡಲಾಗಿತ್ತು. ಎರಡನೇ ದಿನವಾದ ಶನಿವಾರ ಕಾರ್ಯಾಚರಣೆಯನ್ನು ಇನ್ನಷ್ಟುಚುರುಕುಗೊಳಿಸಿದ ಬಿಬಿಎಂಪಿ ಮಾಷ್‌ರ್‍ಲ್‌ಗಳು ಎಂಟು ವಲಯದಲ್ಲಿ 86 ಮಂದಿಗೆ 51,700 ರು ದಂಡ ವಿಧಿಸಲಾಗಿದೆ. ಯಲಹಂಕ ವಲಯದಲ್ಲಿ ಯಾವುದೇ ದಂಡ ವಿಧಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಸಿರು, ಕಿತ್ತಳೆ ವಲಯಗಳಲ್ಲಿ ಸೆಲೂನ್‌ ಪುನಾರಂಭಕ್ಕೆ ಅಸ್ತು!

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ದಂಡ ಸಂಗ್ರಹಿಸುವ ಉದ್ದೇಶದಿಂದ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲ್ಲ. ಕೊರೋನಾ ಸೋಂಕು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಜನ ಮಾಸ್ಕ್‌ ಧರಿಸುವಂತಾಗಬೇಕು. ಈ ನಿಯಮ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆ. ಬಿಬಿಎಂಪಿ ಹಿರಿಯ, ಕಿರಿಯ ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್‌ಗಳು ಮಾಸ್ಕ್‌ ಬಳಕೆ ಮಾಡದವರಿಗೆ ದಂಡ ವಿಧಿಸುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟುಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

click me!