ಸಂತ್ರಸ್ತರಿಗೆ ಆಹಾರ ಕಿಟ್ ನೀಡಲು ಯೋಜನೆ: ವಾರದಲ್ಲಿ ಘೋಷಣೆ
ಕೊಳ್ಳೇಗಾಲ(ಆ.06): ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗಳಲ್ಲೂ ನೆರೆ ಪರಿಹಾರಕ್ಕಾಗಿ .800 ಕೋಟಿ ಹಣ ಮೀಸಲಿಡಲಾಗಿದೆ. ಈಗಾಗಲೇ ನೆರೆ ಪರಿಹಾರಕ್ಕಾಗಿ ಸರ್ಕಾರ 300 ಕೋಟಿ ಬಿಡುಗಡೆ ಮಾಡಿದೆ. ಇನ್ನೆರಡು ದಿನದಲ್ಲಿ 500 ಕೋಟಿ ರು. ಹಣ ಬಿಡುಗಡೆಯಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಕೊಳ್ಳೇಗಾಲದಲ್ಲಿ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಬಿಜೆಪಿಯದ್ದು ಸೂಪರ್ ಸರ್ಕಾರ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾಂಗ್ರೆಸ್‌ನವರ ಆರೋಪ ನಿರಾಧಾರ ಎಂದರು.
ಆ್ಯಪ್ ಮೂಲಕ ಪರಿಹಾರ:
undefined
ರಾಜ್ಯದಲ್ಲಿ 1 ಲಕ್ಷದ 7 ಸಾವಿರ 63 ಹೆಕ್ಟೇರ್ ಬೆಳೆ ಹಾನಿಯಾಗಿದೆ. 10,373 ಸೇತುವೆಗಳು ಹಾಳಾಗಿವೆ. 16,301 ವಿದ್ಯುತ್ ಕಂಬಗಳು ಹಾಳಾಗಿವೆ. 630 ಮನೆಗಳು ಪೂರ್ಣ, ಮತ್ತು 15,690 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಈ ಸಂಬಂಧ 64 ಪರಿಹಾರ ಶಿಬಿರ ತೆರೆಯಲಾಗಿದ್ದು, ಈಗಾಗಲೇ ಮಲೆನಾಡು ಪ್ರದೇಶದಲ್ಲಿ ಅಪಾಯದಂಚಿನಲ್ಲಿರುವ 807 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ ಸಚಿವರು, ಒಂದು ಹೊಸ ಆ್ಯಪ್ ಮೂಲಕ ಶೀಘ್ರದಲ್ಲೇ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಪರಿಹಾರ ನೀಡಲು 8ರಿಂದ 9ತಿಂಗಳು ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ನಾನು ಸಚಿವನಾದ ಬಳಿಕ 20 ದಿನದಿಂದ ಒಂದೂವರೆ ತಿಂಗಳಲ್ಲಿ ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುವಂತೆ ಕ್ರಮ ವಹಿಸಲಾಗಿದೆ ಎಂದರು.
ನೂತನ ದಾಸೋಹ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಿ: ಸಚಿವ ಸೋಮಣ್ಣ
ಸಂತ್ರಸ್ತರಿಗೆ ಆಹಾರ ಕಿಟ್ ನೀಡಲು ಯೋಜನೆ: ವಾರದಲ್ಲಿ ಘೋಷಣೆ
ವಾರದೊಳಗೆ ಬಿಜೆಪಿ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಿದೆ. ನೆರೆ ಹಾವಳಿಯಿಂದ ನೊಂದ ನಾಗರಿಕರಿಗೆ ಆಹಾರ ಕಿಟ್ ನೀಡುವುದು ಈ ಯೋಜನೆಯ ಉದ್ದೇಶ. ನೆರೆ ಸಂತ್ರಸ್ತರಿಗೆ 15 ದಿನಕ್ಕೊಮ್ಮೆ 10 ಕೆ.ಜಿ. ಅಕ್ಕಿ, ಸಕ್ಕರೆ, ಬೇಳೆ ಸೇರಿದಂತೆ ಇತರೆ ಪದಾರ್ಥ ಹಾಗೂ ಜೊತೆಗೆ 10 ಸಾವಿರ ಪರಿಹಾರ ನೀಡಲು ಚಿಂತಿಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.