ಏನಾಗ್ತಿದೆ ರಾಜ್ಯದಲ್ಲಿ? ಒಂದಲ್ಲ ಎರಡಲ್ಲ, 5 ಜಿಲ್ಲಾ ಕೋರ್ಟ್‌ಗಳಿಗೆ ಇ-ಮೇಲ್‌ಹುಸಿ ಬಾಂಬ್‌ ಬೆದರಿಕೆ!

Kannadaprabha News   | Kannada Prabha
Published : Jun 20, 2026, 04:46 AM IST
Bomb threaten

ಸಾರಾಂಶ

ಬಾಗಲಕೋಟೆ, ದಾವಣಗೆರೆ ಸೇರಿದಂತೆ ರಾಜ್ಯದ ಐದು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದೆ. ತಮಿಳುನಾಡಿನ ಘಟನೆಗೆ ಪ್ರತೀಕಾರವೆಂದು ಹೇಳಲಾದ ಈ ಬೆದರಿಕೆಯಿಂದಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿ, ತಪಾಸಣೆ ನಂತರ ಕಲಾಪಗಳು ಪುನಾರಂಭಗೊಂಡವು.

 ಬೆಂಗಳೂರು (ಜೂ.20): ಬಾಗಲಕೋಟೆ, ದಾವಣಗೆರೆ, ಧಾರವಾಡ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಶುಕ್ರವಾರ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆಗಳು(Bomb threat) ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೆಲ ಕಾಲ ನ್ಯಾಯಾಲಯಗಳ ಕಲಾಪ ಬಂದ್‌ ಮಾಡಿ, ತಪಾಸಣೆ ನಡೆಸಲಾಯಿತು. ತಪಾಸಣೆ ಬಳಿಕ ಇವು ಹುಸಿ ಕರೆಗಳು ಎಂಬುದು ಸಾಬೀತಾಯಿತು.

ಶುಕ್ರವಾರ ಬೆಳಗ್ಗೆ 7.47ಕ್ಕೆ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಇ-ಮೇಲ್‌ಗಳಿಗೆ Kurunanidhi.kundiunderworld dog ಎಂಬ ಹೆಸರಿನ ಐಡಿಯಿಂದ ಇ-ಮೇಲ್‌ಗಳು ಬಂದಿವೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸ್ಫೋಟಗೊಳ್ಳಲಿವೆ. ತಮಿಳುನಾಡಿನ ಶಿವಗಂಗೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಅಜಿತ್ ಕುಮಾರನ ಸಾವಿಗೆ ಪ್ರತೀಕಾರ ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಉದಯನಿಧಿ ಎಂಬಾತನ ಉಪಪತ್ನಿ, ಮಗನ ಬಂಧನಕ್ಕೂ ಇ-ಮೇಲ್‌ನಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ 468 ಹುಸಿ ಬಾಂಬ್ ಕರೆ, 14 ಆರೋಪಿಗಳ ಬಂಧನ, ಇಬ್ಬರಿಗೆ ಮಾತ್ರವೇ ಶಿಕ್ಷೆ!

ಸುದ್ದಿ ಗೊತ್ತಾದ ಕೂಡಲೇ ನ್ಯಾಯಾಲಯದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರನ್ನು ಆವರಣದಿಂದ ಹೊರಕ್ಕೆ ಕಳುಹಿಸಿ ಬಿಗಿ ಭದ್ರತೆ ಒದಗಿಸಲಾಯಿತು. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಆಗಮಿಸಿ, ನ್ಯಾಯಾಲಯಗಳ ಆವರಣದಲ್ಲಿ ತಪಾಸಣೆ ನಡೆಸಿದರು. ನಂತರ ಇವೆಲ್ಲವೂ ಹುಸಿ ಕರೆ ಎಂದು ಗೊತ್ತಾದ ನಂತರ ಮಧ್ಯಾಹ್ನ 3ರ ನಂತರ ಎಂದಿನಂತೆ ಕಲಾಪಗಳು ಮುಂದುವರಿದವು. ಫೆಬ್ರವರಿಯಲ್ಲೂ ಹೈಕೋರ್ಟ್‌ ಧಾರವಾಡ ಪೀಠ, 9 ಜಿಲ್ಲಾ ಕೋರ್ಟ್‌ಗಳಿಗೆ ಹುಸಿ ಬಾಂಬ್ ಕರೆಗಳು ಬಂದಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷ ಪ್ರಯಾಣಿಕರು ಏನಾದರು? ಶಕ್ತಿ ಯೋಜನೆಯ ಶಾಕಿಂಗ್ ಸತ್ಯ ಬಿಚ್ಚಿಟ್ಟ ಸಾರಿಗೆ ನಿಗಮ
Indian Railway: ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ 'ಯಶವಂತಪುರ ರೈಲು ಸೇವೆ' ವಿಸ್ತರಿಸಿದ ರೈಲ್ವೆ ಇಲಾಖೆ!