ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌: ಗೌರ್ನರ್ ನಡೆ ಖಂಡಿಸಿ ಸಂಪುಟದಲ್ಲಿ 5 ನಿರ್ಧಾರ

By Kannadaprabha NewsFirst Published Aug 18, 2024, 10:38 AM IST
Highlights

ರಾಜ್ಯಪಾಲರು ದೇಶದ ರಾಷ್ಟ್ರಪತಿಗಳ ಪ್ರತಿನಿಧಿಗಳಾಗಿದ್ದು ಸಂವಿಧಾನದ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವುದು ಅಕ್ರಮ್ಯ, ರಾಜ್ಯಪಾಲರ ಈ ನಡವಳಿಕೆಯನ್ನು ಸಚಿವ ಸಂಪುಟ ಅತ್ಯಂತ ತೀವ್ರವಾಗಿ ಖಂಡಿಸಿ ನಿರ್ಣಯ ಮಾಡಿದೆ.

ಬೆಂಗಳೂರು(ಆ.18): 'ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿಯಾಗಿ ಕೆಲಸ ಮಾಡುವ ಬದಲು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ನಡೆದುಕೊಂಡಿದ್ದಾರೆ. ಜತೆಗೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಬೆಂಬಲ ನೀಡಿದ್ದಾರೆ' ಎಂದು ರಾಜ್ಯಪಾಲರ ಕ್ರಮವನ್ನು ಖಂಡನೆ ಮಾಡಲು ಹಾಗೂ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ. ಜತೆಗೆ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ 17-ಎ ಅಡಿ ಅನುಮತಿ ನೀಡುವ ವೇಳೆ ಪಾಲಿಸಬೇಕಿರುವ ನಿಯಮಗಳನ್ನು (ಎಸ್‌ಪಿ) ಉಲ್ಲಂಘಿಸಲಾಗಿದೆ.

2021ರ ಸೆ.3 ರಂದು ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಿದ್ದು, ಇದನ್ನು ಪರಿಗಣಿಸಿಲ್ಲ. ಹೀಗಾಗಿ ರಾಜ್ಯಪಾಲರ ನಿರ್ಧಾರ ಕಾನೂನು ಬಾಹಿರ ಎಂದು ಮಾಡಲಾಗಿದೆ.

Latest Videos

ಸಿದ್ದು ವಿರುದ್ಧದ ತನಿಖೆಗೆ ರಾಜ್ಯಪಾಲರ ಅನುಮತಿ: ಇದು ಬಿಜೆಪಿ ಪಾದಯಾತ್ರೆಗೆ ಸಿಕ್ಕ ಯಶಸ್ಸು, ಅಶೋಕ್‌

ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 'ರಾಜ್ಯಪಾಲರು ದೇಶದ ರಾಷ್ಟ್ರಪತಿಗಳ ಪ್ರತಿನಿಧಿಗಳಾಗಿದ್ದು ಸಂವಿಧಾನದ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವುದು ಅಕ್ರಮ್ಯ, ರಾಜ್ಯಪಾಲರ ಈ ನಡವಳಿಕೆಯನ್ನು ಸಚಿವ ಸಂಪುಟ ಅತ್ಯಂತ ತೀವ್ರವಾಗಿ ಖಂಡಿಸಿ ನಿರ್ಣಯ ಮಾಡಿದೆ.

ಇನ್ನು ಕೇಂದ್ರ ಸರ್ಕಾರ ಅನಗತ್ಯವಾಗಿ ಜನಾಶೀರ್ವಾದದಿಂದ ರಚನೆಯಾಗಿರುವ ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಪ್ರಸ್ತಾಹಿಸಿದ ಅವರು, 'ಆ.1 ರಂದು ಸಚಿವ ಸಂಪುಟ ಸಭೆ ನಡೆಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಂತೆ ಹಾಗೂ ಮುಖ್ಯಮಂತ್ರಿ ಗಳಿಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯ ಪಾಲರು ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ನಡೆದು ಕೊಳ್ಳುತ್ತಿ ರುವುದರಿಂದ ಪ್ರಜಾಪ್ರಭುತ್ವದ ಮೂಲ ಭೂತ ತತ್ವಕ್ಕೆ ಅಪಾಯ ಆಗುತ್ತದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ಹೀಗಾಗಿ ಅವರ ನಡವಳಿಕೆ ಯನ್ನೂ ಖಂಡಿಸಿದ್ದೇವೆ ಎಂದು ಸಿದ್ದರಾಮಯ್ಯ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ್ದಾರೆ.

ಮುಡಾ ಹಗರಣ: ನಿಷ್ಪಕ್ಷಪಾತ ತನಿಖೆ ಅಗತ್ಯ, ಹೀಗಾಗಿ ಅನುಮತಿ, ರಾಜ್ಯಪಾಲ ಗೆಹಲೋತ್

ಈ ಬಗ್ಗೆ ಸುಪ್ರೀಂ ಕೋರ್ಟ್‌ ಒಂದು ಆಯ್ದ ಪ್ರಕರಣ ಪ್ರಸ್ತಾಪಿಸಿ ಸಂಪುಟದ ಸಲಹೆ ಪಾಲಿಸಬೇಕು ಎಂಬ ಅಗತ್ಯವಿಲ್ಲ ಎಂದು ಹೇಳಿ ತಮ್ಮ ಇಷ್ಟಕ್ಕೆ ನಿರ್ಧಾರ ಮಾಡಿದ್ದಾರೆ. ಸಂಪುಟ ಸಭೆಯ ಸಲಹೆಯಂತೆಯೇ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಹಲವು ತೀರ್ಪುಗಳಿದ್ದು, ಅವುಗಳನ್ನೂ ಕಳುಹಿಸಲಾ ಗಿತ್ತು. ಆದರೆ ರಾಜ್ಯಪಾಲರು ಪರಿಗಣಿಸಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಂಪುಟ ಸಭೆಯ 5 ನಿರ್ಧಾರಗಳು

ಇಡೀ ಸಚಿವ ಸಂಪುಟವು ಗಟ್ಟಿಯಾಗಿ ಮುಖ್ಯಮಂತ್ರಿಗಳ ಜತೆ 1 ನಿಲಬೇಕು ಹಾಗೂ ಕಾನೂನು ಹೋರಾಟ ನಡೆಸಬೇಕು.
ರಾಜ್ಯಪಾಲರ ಪಾಸಿಕ್ಯೂಷನ್ ಅನುಮತಿ ನಿರ್ಧಾರ ಕಾನೂನು ಬಾಹಿರ ಎಂದು ಖಂಡಿಸಲು ನಿರ್ಧಾರ
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರದ ಪ್ರಯತ್ನಕ್ಕೆ ಬೆಂಬಲ ನೀಡಿರುವ ರಾಜ್ಯಪಾಲರ
ಕೇಂದ್ರ ಸರ್ಕಾರ ಎಸ್‌ಒಪಿ (ಮಾರ್ಗಸೂಚಿ) ಉಲ್ಲಂಘನೆ 4 ಮಾಡಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 17-ಎ ಆಡಿ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕಚೇರಿಗೆ ತಿಳಿಸಬೇಕು.
ಆ.1ರ ಸಚಿವ ಸಂಪುಟ ಸಭೆ ನಿರ್ಧಾರವನ್ನು ತಿರಸ್ಕರಿಸಿರುವ ಕ್ರಮವನ್ನು ಖಂಡಿಸಲು ನಿರ್ಧಾರ. 

click me!