ಕರ್ನಾಟಕದಲ್ಲಿ ಈವರೆಗೆ 5 ಕೋಟಿ Covid Test..!

By Kannadaprabha News  |  First Published Oct 24, 2021, 10:48 AM IST

*  ಒಟ್ಟು 29.85 ಸ್ಯಾಂಪಲ್‌ಗಳಲ್ಲಿ ಕೋವಿಡ್‌ ಸೋಂಕು ದೃಢ
*  257 ಕೇಂದ್ರಗಳಲ್ಲಿ ನಿತ್ಯ 1.8 ಲಕ್ಷ ಪರೀಕ್ಷೆ ನಡೆಸುವ ಸಾಮರ್ಥ್ಯ
*  ರಾಜ್ಯದ ದೈನಂದಿನ ಕೋವಿಡ್‌ ಪರೀಕ್ಷೆಯ ಗುರಿ 1.75 ಲಕ್ಷಕ್ಕೆ ನಿಗದಿ 
 


ಬೆಂಗಳೂರು(ಅ.24):  ರಾಜ್ಯದಲ್ಲಿ(Karnataka) ಕೋವಿಡ್‌ ಪರೀಕ್ಷೆಗಳ(Covid Test) ಒಟ್ಟು ಸಂಖ್ಯೆ 5 ಕೋಟಿ ದಾಟಿದೆ. ಶನಿವಾರ 1.20 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು, ರಾಜ್ಯದಲ್ಲಿ ಈವರೆಗೆ 5,00,31,061 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 29.85 ಲಕ್ಷ ಮಂದಿಯಲ್ಲಿ ಕೋವಿಡ್‌ ಸೋಂಕಿರುವುದು ದೃಢಪಟ್ಟಿದೆ. 

ಸರ್ಕಾರದ(Government)ಪ್ರಯೋಗಾಲಯದಲ್ಲಿ ಈವರೆಗೆ ಒಟ್ಟು 3.51 ಕೋಟಿ ಮತ್ತು ಖಾಸಗಿ ಪ್ರಯೋಗಾಲಯದಲ್ಲಿ 1.49 ಕೋಟಿ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಕಳೆದ ಆಗಸ್ಟ್‌ನಲ್ಲಿ 48.45 ಲಕ್ಷ ಕೋವಿಡ್‌ ಪರೀಕ್ಷೆ ನಡೆಸಿರುವುದು ತಿಂಗಳೊಂದರಲ್ಲಿ ನಡೆಸಿರುವ ಗರಿಷ್ಠ ಪರೀಕ್ಷೆಯಾಗಿದೆ.

Tap to resize

Latest Videos

Covid 19: ದೀಪಾವಳಿ ನಂತರ ದೇಶದ ಅಲ್ಲಲ್ಲಿ ಸೋಂಕು ಏರಿಕೆ, ಮತ್ತೊಂದು ದೊಡ್ಡ ಅಲೆ ? ಏನಂತಾರೆ ತಜ್ಞರು ?

ಈವರೆಗೆ ಒಟ್ಟು 94.67 ಲಕ್ಷ ರಾರ‍ಯಪಿಡ್‌ ಆ್ಯಂಟಿಜೆನ್‌(Rapid Antigen Test) ಮತ್ತು 4.05 ಕೋಟಿ ಆರ್‌ಟಿಪಿಸಿಆರ್‌(RTPCR) ಪರೀಕ್ಷೆ ನಡೆದಿದೆ. ರಾಜ್ಯದಲ್ಲಿ ಸೋಂಕು ಪತ್ತೆಗೆ ಮಾದರಿ ಸಂಗ್ರಹ ನಡೆಸುವ ಒಟ್ಟು 3,626 ಕೇಂದ್ರಗಳಿವೆ. ಮಾದರಿಯನ್ನು ಪರೀಕ್ಷೆಗೆ ಒಳಪಡಿಸುವ ಒಟ್ಟು 257 ಕೇಂದ್ರಗಳಿವೆ. ಕೋವಿಡ್‌ ಪತ್ತೆಯಾದ ಆರಂಭದ ದಿನದಲ್ಲಿ ಕೇವಲ ಬೆರಳೆಣಿಕೆಯ ಕೇಂದ್ರಗಳಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಯ ಮಾದರಿಯನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿತ್ತು.

ಪ್ರಯೋಗಾಲಯಗಳಲ್ಲಿ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 1.83 ಲಕ್ಷ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಸಾಮರ್ಥ್ಯವನ್ನು ರಾಜ್ಯ ಹೊಂದಿದೆ. ರಾಜ್ಯದ ದೈನಂದಿನ ಕೋವಿಡ್‌ ಪರೀಕ್ಷೆಯ ಗುರಿಯನ್ನು 1.75 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.
 

click me!