ಕರುನಾಡಿಗೆ ಬಿಗ್ ಶಾಕ್: ಒಂದೇ ದಿನ ಬರೋಬ್ಬರಿ 48 ಸಾವಿರ ಕೊರೋನಾ ಕೇಸ್

By Suvarna News  |  First Published Apr 30, 2021, 8:08 PM IST

ಕರ್ನಾಟಕದಲ್ಲಿ ಮಹಾಮಾರಿ ಕೊರೋನಾ ಎರಡನೇ ಅಲೆ  ನಿಯಂತ್ರಣಕ್ಕೆ ಬಾರದಷ್ಟು ಹೆಚ್ಚುತ್ತಿದೆ. ಅದರಲ್ಲೂ ಏ.30ರ ಅಂಕಿ-ಸಂಖ್ಯೆ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿದೆ.


ಬೆಂಗಳೂರು, (ಏ.30): ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಇಂದು (ಶನಿವಾರ) ಒಂದೇ ದಿನ ಬರೋಬ್ಬರಿ 48,296 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 217 ಜನ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,23,142 ಕ್ಕೆ ಏರಿಕೆಯಾಗಿದ್ರೆ,  ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15,523ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Latest Videos

undefined

ಕೊರೋನಾ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ

ಇನ್ನು ಕಳೆದ 24 ಗಂಟೆಗಳಲ್ಲಿ 14,884 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ 11,24,909 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,82,690.

ಬೆಂಗಳೂರಿನಲ್ಲಿ ಶೇ.50rರಷ್ಟು ಕೇಸ್
ಹೌದು.. ಇಂದು (ಏ.30) ರಾಜ್ಯದಲ್ಲಿ ಪತ್ತೆಯಾಗಿರುವ  48,296 ಪಾಸಿಟಿವ್ ಕೇಸ್‌ಗಳಲ್ಲಿ ಶೇ. 50ರಷ್ಟು ಬೆಂಗಳೂರಿನವದ್ದಾಗಿವೆ.

ಹೌದು.. ರಾಜಧಾನಿ ಬೆಂಗಳೂರಿನಲ್ಲೇ ಶನಿವಾರ 26,756 ಜನರಿಗೆ ಸೋಂಕು ತಗುಲಿದೆ. 93 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,59,058 ಕ್ಕೆ ಏರಿಕೆಯಾಗಿದೆ.

click me!