Covid Crisis: 3.5 ತಿಂಗಳ ಬಳಿಕ 471 ಮಂದಿಗೆ ಸೋಂಕು: ಬೆಂಗಳೂರಿನಲ್ಲೇ 97% ಪ್ರಕರಣ

By Govindaraj S  |  First Published Jun 10, 2022, 3:00 AM IST

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗುರುವಾರ 471 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಮೂರೂವರೆ ತಿಂಗಳಲ್ಲೇ ಗರಿಷ್ಠ. ಮಾಚ್‌ರ್‍ 3 ರಂದು 382 ಕೊರೋನಾ ಪ್ರಕರಣಗಳು ವರದಿಯಾಗಿದ್ದವು.


ಬೆಂಗಳೂರು (ಜೂ.10): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗುರುವಾರ 471 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಮೂರೂವರೆ ತಿಂಗಳಲ್ಲೇ ಗರಿಷ್ಠ. ಮಾರ್ಚ್‌ 3 ರಂದು 382 ಕೊರೋನಾ ಪ್ರಕರಣಗಳು ವರದಿಯಾಗಿದ್ದವು. ಒಟ್ಟು ಪ್ರಕರಣಗಳ ಪೈಕಿ ಶೇ.97 ರಷ್ಟುಕೇಸ್‌ ರಾಜಧಾನಿ ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಇದೇ ವೇಳೆ ಒಂದು ವಾರದಿಂದ ಪರೀಕ್ಷೆಗಳ ಪಾಸಿಟಿವಿಟಿ ದರ ಮಾತ್ರ ಶೇ.2ರ ಆಸುಪಾಸಿನಲ್ಲಿದೆ.

ಗುರುವಾರ 214 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 21,927 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 22 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 2.1ರಷ್ಟು ದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಒಂದು ಸಾವಿರ ಕಡಿಮೆಯಾಗಿದೆ. ಆದರೂ, ಹೊಸ ಪ್ರಕರಣಗಳು 95 ಹೆಚ್ಚಾಗಿವೆ. (ಬುಧವಾರ 376 ಪ್ರಕರಣಗಳು, ಸಾವು ಶೂನ್ಯ).

Tap to resize

Latest Videos

undefined

Covid 19 ಭಾರತಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಒಂದೇ ದಿನ 7 ಸಾವಿರ ಕೇಸ್!

ರಾಜ್ಯದ ಒಟ್ಟಾರೆ ಪ್ರಕರಣಗಳ ಪೈಕಿ 458 (ಶೇ.97 ರಷ್ಟು) ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗಿವೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಧಾರವಾಡ ಹಾಗೂ ದಕ್ಷಿಣ ಕನ್ನಡ ತಲಾ 3, ಬೀದರ್‌ 2, ಕಲಬುರಗಿ ಮತ್ತು ಉಡುಪಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 23 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

14 ವಾರಗಳಲ್ಲೇ ಅಧಿಕ: ಮಾರ್ಚ್‌ 3 ರಂದು 382 ಕೊರೋನಾ ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಇಳಿಕೆಯಾಗುತ್ತಾ ಸಾಗಿ 50ಕ್ಕೆ ತಗ್ಗಿದ್ದವು. ಕಳೆದ ಒಂದು ವಾರದಿಂದ ಏರಿಕೆಯಾಗುತ್ತಾ ಸಾಗಿ ಗುರುವಾರ 471 ತಲುಪಿವೆ. ಕೇಂದ್ರ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಕ್ಕೆ ಸೋಂಕು ಪರೀಕ್ಷೆಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿದೆ. ಹೀಗಾಗಿ, ಮೇ ಕೊನೆಯ ವಾರ 15 ಸಾವಿರ ಆಸುಪಾಸಿನಲ್ಲಿದ್ದ ಸೋಂಕು ಪರೀಕ್ಷೆಗಳನ್ನು ಕಳೆದ ಮೂರು ದಿನಗಳಿಂದ ಹೆಚ್ಚಿಸಲಾಗಿದೆ. ಕಳೆದ ಎರಡು ದಿನಗಳಿಂದ 20 ಸಾವಿರಕ್ಕೂ ಅಧಿಕ ಪರೀಕ್ಷೆಗಳು ನಡೆಯುತ್ತಿವೆ. ಈ ಕಾರಣದಿಂದ ಸತತ ಮೂರನೇ ದಿನ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎನ್ನುತ್ತಿವೆ ಆರೋಗ್ಯ ಇಲಾಖೆ ಮೂಲಗಳು.

Covid Crisis: ಬೆಂಗ್ಳೂರಲ್ಲಿ ಕೊರೋನಾ ಹೆಚ್ಚಳ: ಪ್ರತಿದಿನ 300ಕ್ಕೂ ಅಧಿಕ ಕೇಸ್

ಪಾಸಿಟಿವಿಟಿ ದರ ಶೇ.2: ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಒಂದು ವಾರದಿಂದ ಮಾತ್ರ ಶೇ.2ರ ಆಸುಪಾಸಿನಲ್ಲಿಯೇ ಮುಂದುವರೆದಿದೆ. ಪರೀಕ್ಷೆಗೊಳಪಟ್ಟ100 ಮಂದಿಯಲ್ಲಿ ಇಬ್ಬರಿಗೆ ಸೋಂಕು ದೃಢಪಡುತ್ತಿದೆ. ಸದ್ಯ 22 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಬ್ಬರು ಮಾತ್ರ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,066 ಮಂದಿ ಸಾವಿಗೀಡಾಗಿದ್ದಾರೆ.

click me!