ರಾಜ್ಯಕ್ಕೆ ಕೊರೋನಾಘಾತ: ಒಂದೇ ದಿನ 44 ಮಂದಿಗೆ ಸೋಂಕು!

Published : Apr 18, 2020, 07:06 AM ISTUpdated : Apr 18, 2020, 07:08 AM IST
ರಾಜ್ಯಕ್ಕೆ ಕೊರೋನಾಘಾತ: ಒಂದೇ ದಿನ 44 ಮಂದಿಗೆ ಸೋಂಕು!

ಸಾರಾಂಶ

ರಾಜ್ಯಕ್ಕೆ ಕೊರೋನಾತಂಕ: ಒಂದೇ ದಿನ 44 ಸೋಂಕು!| ಏಕದಿನದ ದಾಖಲೆ| ಸೋಂಕಿತರು 359ಕ್ಕೆ, 88 ಮಂದಿ ಚೇತರಿಕೆ| ನಿನ್ನೆ ಮೈಸೂರಲ್ಲಿ 12, ಬೆಂಗಳೂರಲ್ಲಿ 10 ಹೊಸ ಕೇಸ್‌ಗಳು ಪತ್ತೆ

 ಬೆಂಗಳೂರು(ಏ.18): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳದ ವೇಗ ಏರಿಕೆಯಾಗಿದ್ದು, ಶುಕ್ರವಾರ ಒಂದೇ ದಿನ ಹೊಸತಾಗಿ 44 ಜನರಲ್ಲಿ ಸೋಂಕು ದೃಢಪಡುವ ಮೂಲಕ ಇದುವರೆಗಿನ ದಾಖಲೆ ಮುರಿದಿದೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ 99 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ.

ಸೋಂಕಿತ ಪ್ರಕರಣಗಳ ಏರುಗತಿ ನೋಡಿದಾಗ ಪ್ರತಿ ಹತ್ತು ದಿನಗಳಿಗೆ ಪ್ರಕರಣಗಳು ದುಪ್ಪಟ್ಟಾಗತೊಡಗಿವೆ. ಮಾ.31ರವರೆಗೆ ಕೇವಲ 100ರಷ್ಟಿದ್ದ ಸೋಂಕಿತರ ಸಂಖ್ಯೆ ಏ.10ಕ್ಕೆ 200ರ ಗಡಿ ದಾಟಿತು. ಇದೀಗ ನಂತರದ ಏಳು ದಿನದಲ್ಲೇ ಇದು 359ರಷ್ಟಾಗಿದ್ದು, ಹತ್ತು ದಿನಗಳಿಗೂ ಮೊದಲೇ 400ರ ಗಡಿ ಮುಟ್ಟುವ ಲಕ್ಷಣಗಳು ಕಂಡುಬರುತ್ತಿವೆ. ಸಮಾಧಾನಕರ ವಿಷಯವೆಂದರೆ ಶುಕ್ರವಾರ ಯಾವುದೇ ಸೋಂಕಿತರ ಸಾವು ಸಂಭವಿಸಿಲ್ಲ.

ನಟಿಯಂತೆ ಕಾಣಲು ಸರ್ಜರಿ, ಕೊರೋನಾ ವಕ್ಕರಿಸಿ ಜೀವನ್ಮರಣ ಹೋರಾಟದಲ್ಲಿ ಸುಂದರಿ!

ಶುಕ್ರವಾರ ಪತ್ತೆಯಾಗಿರುವ 38 ಪ್ರಕರಣಗಳ ಪೈಕಿ ಹಾಟ್‌ಸ್ಪಾಟ್‌ ಜಿಲ್ಲೆಗಳಾದ ಮೈಸೂರಿನಲ್ಲಿ 12, ಬೆಂಗಳೂರಿನಲ್ಲಿ 10, ಬೆಳಗಾವಿಯಲ್ಲಿ 5 ಪ್ರಕರಣಗಳು ಪತ್ತೆಯಾದರೆ, ಹಾಟ್‌ಸ್ಟಾಟೇತರ ಜಿಲ್ಲೆಗಳಾದ ಬಳ್ಳಾರಿಯಲ್ಲಿ 7, ಚಿಕ್ಕಬಳ್ಳಾಪುರ 3, ಮಂಡ್ಯ 3, ವಿಜಯಪುರ 2, ಕ್ಲಸ್ಟರ್‌ ಹಾಟ್‌ಸ್ಟಾಟ್‌ ಜಿಲ್ಲೆಗಳಾದ ಬೀದರ್‌ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

ಇದುವರೆಗೆ ರಾಜ್ಯದಲ್ಲಿ ಒಟ್ಟು 21,636 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 17,594 ಜನರಿಗೆ ಸಂಬಂಧಿಸಿದ ವರದಿಗಳು ಬಂದಿವೆ. ಅವುಗಳಲ್ಲಿ 14,606 ಜನರಿಗೆ ನೆಗೆಟಿವ್‌ ಬಂದಿದೆ. 359 ಜನರಿಗೆ ಪಾಸಿಟಿವ್‌ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕದ 3669 ಜನ ಮತ್ತು ದ್ವಿತೀಯ ಸಂಪರ್ಕದ 7892 ಜನರನ್ನು ಕ್ವಾರಂಟೈನ್‌ ಮಾಡಿ ನಿಗಾ ವಹಿಸಲಾಗಿದೆ ಎಂದು ಸಚಿವ ಎಸ್‌.ಸುರೇಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿಸ್ಚಾಜ್‌ರ್‍ ಸಂಖ್ಯೆ 88ಕ್ಕೆ ಏರಿಕೆ:

ಕೊರೋನಾ ಸೋಂಕಿತರ ಪೈಕಿ ಶುಕ್ರವಾರ ಮತ್ತೆ ಆರು ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇದರಿಂದ ಒಟ್ಟು 359 ಸೋಂಕಿತರ ಪೈಕಿ 88 ಜನರು ಬಿಡುಗಡೆಯಾದಂತಾಗಿದೆ. ಮೂವರಿಗೆ ಐಸಿಯು ಚಿಕಿತ್ಸೆ ಸೇರಿ ಉಳಿದ 258 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಜನ ಸೋಂಕಿತರು ಮೃತಪಟ್ಟಿದ್ದಾರೆ.

ತಬ್ಲೀಘಿ ಸಭೆ ಬಗ್ಗೆ ಗೊತ್ತಿದ್ದರೂ, ಕಣ್ಣು ಮುಚ್ಚಿ ಕುಳಿತಿತ್ತಾ ದಿಲ್ಲಿ ಸರ್ಕಾರ?

ನಂಜನಗೂಡು ಕಂಪನಿಯ 1705 ಜನ ಕ್ವಾರಂಟೈನ್‌

ನಂಜನಗೂಡಿನ ಜ್ಯುಬಿಲಿಯೆಂಟ್‌ ಫಾರ್ಮಾ ಕಂಪನಿ ನೌಕರರು ಹಾಗೂ ಅವರ ಸಂಪರ್ಕದಿಂದ ಇದುರವರೆಗೆ ಒಟ್ಟು 61 ಜನರಿಗೆ ಕೋವಿಡ್‌ ಸೋಂಕು ಪಾಸಿಟಿವ್‌ ಬಂದಿದೆ. ಇದರಲ್ಲಿ ಶುಕ್ರವಾರ ಮೈಸೂರಿನಲ್ಲಿ ಪತ್ತೆಯಾಗಿರುವ ಹೊಸ 12 ಪ್ರಕರಣಗಳೂ ಸೇರಿವೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ಆರ್ಥಿಕ ಸಂಕಷ್ಟ ನಿವಾರಿಸಲು RBI ದಿಟ್ಟ ಕ್ರಮ ಸ್ವಾಗತಿಸಿದ ರಾಜ್ಯಸಭಾ MP ರಾಜೀವ್ ಚಂದ್ರಶೇಖರ್!

ಈ ಹಿನ್ನೆಲೆಯಲ್ಲಿ ಕಂಪನಿಯ ಸೋಂಕಿತರ ಸಂಪರ್ಕ ಹೊಂದಿರುವ 1705 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ಪೈಕಿ 1225 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿದ್ದು, 480 ಜನರ ಮಾದರಿ ವರದಿ ಬರಬೇಕಿದೆ. ಉಳಿದವು ನೆಗೆಟಿವ್‌ ಬಂದಿವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖಾಲಿ ಇರುವ ವೈದ್ಯ, ಸಿಬ್ಬಂದಿ ಹುದ್ದೆ ತಿಂಗಳಲ್ಲಿ ಭರ್ತಿ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ
3,600 ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕಾತಿಗೆ ಶೀಘ್ರ ಕ್ರಮ: ಗೃಹ ಸಚಿವ ಪರಮೇಶ್ವರ್‌