* ಕರ್ನಾಟಕದಲ್ಲಿ ಭಾನುವಾರ ಒಟ್ಟು 406 ಮಂದಿಗೆ ಸೋಂಕು
* ಪಾಸಿಟಿವಿಟಿ ಪ್ರಮಾಣ ಶೇ 0.35, ಸೋಂಕಿತರ ಸಾವಿನ ಪ್ರಮಾಣ ಶೇ 2.46
* ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
ಬೆಂಗಳೂರು, (ಅ.10): ಕರ್ನಾಟಕದಲ್ಲಿ ಇಂದು (ಭಾನುವಾರ) ಒಟ್ಟು 406 ಮಂದಿಯಲ್ಲಿ ಕೋವಿಡ್ (Covid) ಸೋಂಕು ಪತ್ತೆಯಾಗಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಇನ್ನು 637 ಮಂದಿ ಕೊವಿಡ್ನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಈವರೆಗೆ 29,81,027 ಮಂದಿಯಲ್ಲಿ ಕೊರೋನಾ ಸೋಂಕು (Coronvirus) ದೃಢಪಟ್ಟಿದ್ದು, 29,32,959 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 37,885 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 10,154 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 0.35, ಸೋಂಕಿತರ ಸಾವಿನ ಪ್ರಮಾಣ ಶೇ 2.46 ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ
undefined
ಕೋವಿಡ್ ಬಗ್ಗೆ ಇನ್ನೂ 3 ತಿಂಗಳು ಎಚ್ಚರ
ಬೆಂಗಳೂರು ನಗರದಲ್ಲಿ 156 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 5 ಜನ ಬಲಿಯಾಗಿದ್ದಾರೆ. 229 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಗರದಲ್ಲಿ ಪ್ರಸ್ತುತ 6649 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಈವರೆಗೆ 12,48,313 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,25,475 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 16,188 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲಾವಾರು ಸೋಂಕಿನ ಸಂಖ್ಯೆ
ಬೆಂಗಳೂರು ನಗರ 156, ದಕ್ಷಿಣ ಕನ್ನಡ 38, ಹಾಸನ 32, ಮೈಸೂರು 56, ತುಮಕೂರು 13, ಉತ್ತರ ಕನ್ನಡ 12, ಶಿವಮೊಗ್ಗ 11, ಕೊಡಗು 9, ಧಾರವಾಡ 7, ಬೆಳಗಾವಿ, ಬೆಂಗಳೂರು ಗ್ರಾಮಾಂತರ 5, ಬಳ್ಳಾರಿ, ದಾವಣಗೆರೆ, ಕೋಲಾರ 4, ರಾಮನಗರ 3, ಚಾಮರಾಜನಗರ, ಬಾಗಲಕೋಟೆ 2, ಮಂಡ್ಯ, ರಾಯಚೂರು 1.
ದೇಶಾದ್ಯಂತ ಕೊರೋನಾ (corona) ಅಬ್ಬರ ತಗ್ಗಿರುವ ಬೆನ್ನಲ್ಲೇ, ಸೋಂಕು ನಿಯಂತ್ರಣಕ್ಕೆ ಇನ್ನೂ ಮೂರು ತಿಂಗಳ ಕಾಲ ನಿರ್ಣಾಯಕವಾಗಿದೆ ಎಂದಿರುವ ಕೇಂದ್ರ ಸರ್ಕಾರ, ಮುಂದಿನ ಹಬ್ಬ ಮತ್ತು ಮದುವೆ ಸಮಾರಂಭಗಳ ಮುಖಾಂತರ ಕೊರೋನಾ ವೈರಸ್ ಮತ್ತೆ ಉದಯವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಂದ ದೂರ ಇರುವಂತೆ ಮತ್ತು ಮನೆಯಲ್ಲೇ ಆಚರಿಸುವಂತೆ ತಿಳಿ ಹೇಳಿದೆ.