* ರಾಜ್ಯದಲ್ಲಿ ಇಂದು (ಸೋಮವಾರ) 38,603 ಜನರಿಗೆ ಕೊರೋನಾ ಸೋಂಕು
* ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 34,635 ಜನರು ಗುಣಮುಖ
* ರಾಜ್ಯದಲ್ಲಿ 6, 03,639 ಸಕ್ರಿಯ ಪ್ರಕರಣಗಳು
ಬೆಂಗಳೂರು, (ಮೇ.17): ರಾಜ್ಯದಲ್ಲಿ ಇಂದು (ಸೋಮವಾರ) 38,603 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿನಿಂದ 476 ಜನರು ನಿಧನರಾಗಿದ್ದಾರೆ.
ಇದೇ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 13,338 ಜನರಿಗೆ ಕೊವಿಡ್ ದೃಢಪಟ್ಟಿದ್ದು, 239 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಈವರೆಗೆ ರಾಜ್ಯದ ಕೊವಿಡ್ ಸೋಂಕಿತರ ಸಂಖ್ಯೆ 22,42,065ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪೈಕಿ ಈವರೆಗೆ 16,16,092 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೋನಾದಿಂದ 22,313 ಜನರ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಫಿಕ್ಸ್: ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಿಗುತ್ತಾ ಗುಡ್‌ನ್ಯೂಸ್?
ಇನ್ನು ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 34,635 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ ರಾಜ್ಯದಲ್ಲಿ 6, 03,639 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಅಂಕಿ-ಸಂಖ್ಯೆ ವಿವರ ಹೀಗಿದೆ
ಬೆಂಗಳೂರು ನಗರ ಜಿಲ್ಲೆ 13,338, ಹಾಸನ 2,324 , ಬಳ್ಳಾರಿ 2,322, ಮೈಸೂರು 1,980, ತುಮಕೂರು 1,915, ಬೆಳಗಾವಿ 1,748, ಶಿವಮೊಗ್ಗ 1,322, ಉತ್ತರ ಕನ್ನಡ 1,288, ಮಂಡ್ಯ 1,087, ಧಾರವಾಡ 972, ಉಡುಪಿ 897, ದಕ್ಷಿಣ ಕನ್ನಡ 817, ಚಿಕ್ಕಬಳ್ಳಾಪುರ 799, ದಾವಣಗೆರೆ 747, ಚಿಕ್ಕಮಗಳೂರು 732, ಕೋಲಾರ 713, ಕಲಬುರಗಿ 695, ರಾಯಚೂರು 562, ಚಾಮರಾಜನಗರ 516, ಗದಗ 475, ಕೊಪ್ಪಳ 470, ಕೊಡಗು 442, ಬೆಂಗಳೂರು ಗ್ರಾಮಾಂತರ 426, ಚಿತ್ರದುರ್ಗ 407, ರಾಮನಗರ 397, ಯಾದಗಿರಿ 360, ಬಾಗಲಕೋಟೆ 305, ವಿಜಯಪುರ 233, ಬೀದರ್ 172 , ಹಾವೇರಿ 142.