ಕರ್ನಾಟಕದಲ್ಲಿ ಕೊರೋನಾ: ಫೆ.12ರಂದು ಸೋಂಕು ಇಳಿಕೆ, ಸಾವಿನ ಪ್ರಮಾಣದಲ್ಲಿ ಏರಿಕೆ

By Suvarna NewsFirst Published Feb 12, 2021, 8:34 PM IST
Highlights

ರಾಜ್ಯದಲ್ಲಿ ಶುಕ್ರವಾರ ಸಹ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಆದ್ರೆ, ಸಾವಿನ ಸಂಖ್ಯೆ ಏರಿದೆ.

ಬೆಂಗಳೂರು, (ಫೆ.12): ಕರ್ನಾಟಕದಲ್ಲಿ ಇಂದು (ಶುಕ್ರವಾರ) 380 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು,  8 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,44,437 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 12,259 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಕೊರೋನಾ ಲಸಿಕೆ ಹಾಕಿಸಿಕೊಂಡವರು ಮದ್ಯಪಾನ ಮಾಡಬಹುದಾ?

ಕಳೆದ 24 ಗಂಟೆಗಳಲ್ಲಿ 405 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ  9,26,234 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು. ಸದ್ಯ,  5925 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ಅಂಕಿ-ಸಂಖ್ಯೆ
ಇನ್ನು ಬೆಂಗಳೂರಿನಲ್ಲಿ ಶುಕ್ರವಾರ 194 ಜನರಿಗೆ ಕೊರೋನಾ ಕೇಸ್ ಪತ್ತೆಯಾಗಿದೆ.  ಒಟ್ಟು ಸೋಂಕಿತರ ಸಂಖ್ಯೆ 4,01,517 ಕ್ಕೆ ಏರಿಕೆಯಾಗಿದೆ. ಇವತ್ತು ಬೆಂಗಳೂರಿನಲ್ಲಿ 7 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ 4424 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 181 ಮಂದಿ ಗುಣಮುಖರಾಗಿ ಬಿಡುಗಡೆಯಾದ್ದು, ಇದುವರೆಗೆ 3,93,166 ಜನ ಡಿಸ್ಚಾರ್ಜ್ ಆಗಿದ್ದಾರೆ. 3926 ಸಕ್ರಿಯ ಪ್ರಕರಣಗಳು ಇವೆ.

click me!