ರಾಜ್ಯದ 36 ಶಿಕ್ಷಕರಿಗೆ ಮತ್ತೆ ಕೊರೋನಾ ಸೋಂಕು

By Kannadaprabha NewsFirst Published Jan 7, 2021, 9:52 AM IST
Highlights

ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾದ ಬೆನ್ನಲ್ಲೇ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವ ಶಿಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಬುಧವಾರ ಒಂದೇ ದಿನ 36 ಮಂದಿ ಭೋದಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಬೆಂಗಳೂರು(ಜ.07): ಶಾಲಾ-ಕಾಲೇಜು ಆರಂಭವಾದ ಬಳಿಕ ರಾಜ್ಯದಲ್ಲಿ ಕೋವಿಡ್‌ ಪೀಡಿತ ಶಿಕ್ಷಕ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಬುಧವಾರ ಒಂದೇ ದಿನ ರಾಜ್ಯದಲ್ಲಿ 36 ಬೋಧಕ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಶಾಲಾ-ಕಾಲೇಜು ಶುರುವಾದ ಬಳಿಕ ಕೊರೋನಾಗೆ ತುತ್ತಾಗಿರುವ ಶಿಕ್ಷಕರ ಸಂಖ್ಯೆ ಶತಕ ದಾಟಿದೆ. ಒಟ್ಟು ಈವರೆಗೆ 121 ಶಿಕ್ಷಕರಿಗೆ ಕೊರೋನಾ ದೃಢಪಟ್ಟಿದೆ.

ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಏಳು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ರಾಯಚೂರು 6, ಕೊಡಗು 4, ಬೆಳಗಾವಿ, ದಾವಣಗೆರೆ ತಲಾ 3, ತುಮಕೂರು, ಬಳ್ಳಾರಿಯಲ್ಲಿ ತಲಾ 2, ರಾಮನಗರ, ಉಡುಪಿಯಲ್ಲಿ ತಲಾ ಒಬ್ಬ ಶಿಕ್ಷಕರು ಹಾಗೂ ಯಾದಗಿರಿಯಲ್ಲಿ ಒಬ್ಬ ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ. ಹಾಸನದಲ್ಲಿ ಪಾಸಿಟಿವ್‌ ಬಂದಿರುವ ಎಲ್ಲಾ ಶಿಕ್ಷಕರು ಮೊದಲ ದಿನ ತರಗತಿಗೆ ಹಾಜರಾಗಿರುವುದು ವಿದ್ಯಾರ್ಥಿಗಳು ಮತ್ತು ಸಹಶಿಕ್ಷಕರಲ್ಲಿ ಆತಂಕ ಮೂಡಿಸಿದೆ.

ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರಲ್ಲಿ 114 ಮಂದಿ ನಾಪತ್ತೆ, ಹೀಗೆ ಆದ್ರೆ ತಪ್ಪಿಲ್ಲ ಕುತ್ತು..!

26 ವಿದ್ಯಾರ್ಥಿಗಳಿಗೆ ಸೋಂಕು: ಒಂದು ಕಡೆ ಶಿಕ್ಷಕರು ಪಾಸಿಟಿವ್‌ ಆಗುತ್ತಿದ್ದರೆ ಇನ್ನೊಂದು ಕಡೆ ಕೊಡಗು, ಚಿಕ್ಕಮಗಳೂರಲ್ಲಿ ತಲಾ ಐದು ಹಾಗೂ ರಾಮನಗರದಲ್ಲಿ ಒಬ್ಬರು ಸೇರಿ ಬುಧವಾರ ರಾಜ್ಯದಲ್ಲಿ 11 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಮೂಲಕ ಶಾಲೆ ಆರಂಭವಾದ ಬಳಿಕ ರಾಜ್ಯದಲ್ಲಿ ಒಟ್ಟಾರೆ 26 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಂತಾಗಿದೆ. ಇವರಲ್ಲಿ ರಾಮನಗರದ ವಿದ್ಯಾರ್ಥಿನಿ ಮೊದಲ ದಿನ ತರಗತಿಗೆ ಹಾಜರಾಗಿರುವ ಹಿನ್ನೆಲೆಯಲ್ಲಿ ಸಂಪರ್ಕಕ್ಕೆ ಬಂದ ಇತರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

click me!