ಮೇ.19ರ ಕೊರೋನಾ ಬುಲೆಟಿನ್: ರಾಜ್ಯದಲ್ಲಿಂದು ಗುಣಮುಖರಾದವರೇ ಅಧಿಕ

By Suvarna News  |  First Published May 19, 2021, 8:48 PM IST

* ರಾಜ್ಯದಲ್ಲಿಂದು ಗುಣಮುಖರಾದವರೇ ಅಧಿಕ
* ರಾಜ್ಯದಲ್ಲಿ ಪಾಸಿಟಿವ್ ಕೇಸ್‌ಗಿಂತ ಡಿಸ್ಚಾರ್ಜ್ ಸಂಖ್ಯೆಯೇ ಹೆಚ್ಚಳ
* ಹೊಸ ಆಶಾಭಾವನೆ ಮೂಡಿಸಿದ ಈ ಬೆಳವಣಿಗೆ


ಬೆಂಗಳೂರು, (ಮೇ.19): ಕೊರೋನಾ ಆತಂಕದ ಮಧ್ಯೆ ಕೊಂಚ ನೆಮ್ಮದಿ ಸುದ್ದಿ. ಕಳೆದ ಎರಡು ದಿನದಿಂದ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿತ್ತು. ಇಂದು (ಬುಧವಾರ) ಸಹ  ಗುಣಮುಖರಾದವರೇ ಅಧಿಕ. ಇದು ಹೊಸ ಆಶಾಭಾವನೆ ಮೂಡಿಸಿದೆ.

ಕರ್ನಾಟಕದಲ್ಲಿ ಬುಧವಾರ ಒಂದೇ ದಿನ 34,281 ಜನರಿಗೆ ಸೋಂಕು ದೃಢಪಟ್ಟಿದ್ದು, 49,953 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕಇದುವರೆಗೆ 17,24,438 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 5,58,890 ಸಕ್ರಿಯ ಪ್ರಕರಣಗಳಿವೆ.

Latest Videos

undefined

ಗುಡ್‌ನ್ಯೂಸ್: ಮೊದಲ ಬಾರಿ ರಾಜ್ಯದಲ್ಲಿ ಪಾಸಿಟಿವ್ ಕೇಸ್‌ಗಿಂತ ಡಿಸ್ಚಾರ್ಜ್ ಹೆಚ್ಚಳ

ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 23,06,655 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 17,24,438 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ  ಕೊರೊನಾ ಸೋಂಕಿನಿಂದ 468 ಜನರ ಸಾವು ಸಂಭವಿಸಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 23,306 ಜನರ ಸಾವು ದಾಖಲಾಗಿದೆ. 

ರಾಜಧಾನಿ ಬೆಂಗಳೂರಿನಲ್ಲಿ ಇಂದು 11,772 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 218 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 3.23.281 ಸಕ್ರಿಯ ಪ್ರಕರಣಗಳು ಇವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

click me!