10 ವರ್ಷದೊಳಗಿನ 34 ಮಕ್ಕಳಿಗೆ ಸೋಂಕು!

By Kannadaprabha News  |  First Published May 9, 2020, 8:16 AM IST

10 ವರ್ಷದೊಳಗಿನ 34 ಮಕ್ಕಳಿಗೆ ಸೋಂಕು!| ನಿನ್ನೆ ಒಂದೇ ದಿನ 7 ಮಕ್ಕಳಿಗೆ ಕೊರೋನಾ| ಇಲ್ಲಿಯವರೆಗೆ 15 ಮಕ್ಕಳು ಗುಣಮುಖ


ಬೆಂಗಳೂ(ಮೇ.09): ರಾಜ್ಯದಲ್ಲಿ ಶುಕ್ರವಾರ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಳು ಮಕ್ಕಳಿಗೆ ಕೊರೋನಾ ಸೋಂಕು ಉಂಟಾಗಿದ್ದು, ಇದರೊಂದಿಗೆ ಈವರೆಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 34 ಪುಟ್ಟಮಕ್ಕಳು ಸೋಂಕಿಗೆ ಗುರಿಯಾದಂತಾಗಿದೆ. ಈ ಪೈಕಿ ಕಲಬುರಗಿಯ 5 ತಿಂಗಳ ಗಂಡು ಮಗು, ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಗಂಡು ಮಗು ಸೇರಿ ಒಟ್ಟು ಹದಿನೈದು ಮಕ್ಕಳು ಸೋಂಕಿನಿಂದ ಮುಕ್ತರಾಗಿದ್ದಾರೆ. ಉಳಿದ 19 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 5 ತಿಂಗಳ ಹಾಗೂ 3 ವರ್ಷದ ಹೆಣ್ಣುಮಕ್ಕಳು, ಉಳಿದಂತೆ ದಾವಣಗೆರೆಯಲ್ಲಿ 3 ವರ್ಷದ ಹೆಣ್ಣು ಮಗು, 6 ವರ್ಷ, 8 ವರ್ಷ, 9 ವರ್ಷ ಹಾಗೂ 10 ವರ್ಷದ ಗಂಡು ಮಕ್ಕಳು ಸೇರಿ ಏಳು ಮಂದಿಗೆ ಸೋಂಕು ಅಂಟಿದೆ.

Tap to resize

Latest Videos

ವಿಶೇಷವೆಂದರೆ, ಈ ಮಕ್ಕಳಲ್ಲಿ ರೋಗ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡು ಬಾಧಿಸುತ್ತಿಲ್ಲ. ಹೀಗಾಗಿ ತಮ್ಮ ಚಿಕಿತ್ಸಾ ಕಾಲವನ್ನು ಕೊರೋನಾ ವಿಶೇಷ ವಾರ್ಡ್‌ನಲ್ಲಿ ಆಟವಾಡುತ್ತಾ ಕಳೆಯುತ್ತಿದ್ದಾರೆ. ಪುಟ್ಟಮಕ್ಕಳಿರುವ ವಾರ್ಡ್‌ಗಳು ಒಂದು ರೀತಿಯಲ್ಲಿ ಪ್ಲೇ ಹೋಂ ರೀತಿ ಆಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

click me!