ರಾಜ್ಯದಲ್ಲಿ 3 ವರ್ಷದಲ್ಲಿ 33000 ನವಜಾತ ಶಿಶುಗಳ ಸಾವು!

By Web DeskFirst Published Dec 22, 2018, 9:31 AM IST
Highlights

ಚಳಿಗಾಲದ ಅಧಿವೇಶನದ್ಲಲಿ ಬೆಚ್ಚಿ ಬೀಳಿಸುವ ಅಂಕಿ ಅಂಶವೊಂದು ಬಯಲಾಗಿದ್ದು, 3 ವರ್ಷದಲ್ಲಿ 33000 ಶಿಶುಗಳು ಸಾವನ್ನಪ್ಪಿವೆ ಎನ್ನಲಾಗಿದೆ.

ಬೆಂಗಳೂರು[ಡಿ.22]: ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 33,492 ನವಜಾತ ಶಿಶುಗಳು ಮರಣ ಹೊಂದಿವೆ. ಮರಣ ಪ್ರಮಾಣ ದರವನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ.

ಕೆ.ಜಿ.ಬೋಪಯ್ಯ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಶಿಶು ಮರಣ ಸಂಖ್ಯೆಯನ್ನು ಶಿಶು ಮರಣ ದರದ ಮೇಲೆ ವಿಶ್ಲೇಷಿಸಬೇಕು. ಸಾವಿರ ಜೀವಂತ ಜನನಗಳಿಗೆ ಶಿಶು ಮರಣ ದರವನ್ನು ಕಂಡುಹಿಡಿಯಲಾಗುತ್ತದೆ. 2015-16ರಲ್ಲಿ 11,438, 2016-17ರಲ್ಲಿ 11,212 ಹಾಗೂ 2017-18ರಲ್ಲಿ 10,742 ಶಿಶು ಮರಣವಾಗಿದೆ. ಶಿಶು ಮರಣ ದರವು ಪ್ರತಿ ವರ್ಷ ಕ್ರಮೇಣವಾಗಿ ಕಡಿಮೆಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಅವಧಿ ಪೂರ್ವ ಜನನ, ಸೋಂಕು, ಹುಟ್ಟು ಕಡಿಮೆ ತೂಕ, ಜನನ ಸಮಯದ ಉಸಿರುಗಟ್ಟುವಿಕೆ, ಹೃದಯ ಸಂಬಂಧಿ ತೊಂದರೆ ಹಾಗೂ ಇತರೆ ಸಮಸ್ಯೆಗಳಿಂದ ನವಜಾತ ಶಿಶುಗಳ ಮರಣವಾಗುತ್ತಿದೆ. ಯಾವುದೇ ರೀತಿಯ ನಿರ್ಲಕ್ಷ್ಯ ಇಲ್ಲದೇ ಚಿಕಿತ್ಸೆ ನೀಡುತ್ತಿದ್ದೇವೆ ಎಂದಿದ್ದಾರೆ.

click me!