ಕರ್ನಾಟಕ ಹೈಕೋರ್ಟ್‌ಗೆ 3 ಹೆಚ್ಚುವರಿ ಜಡ್ಜ್‌ಗಳ ನೇಮಕ

Kannadaprabha News   | Asianet News
Published : Nov 04, 2021, 02:05 PM IST
ಕರ್ನಾಟಕ ಹೈಕೋರ್ಟ್‌ಗೆ 3 ಹೆಚ್ಚುವರಿ ಜಡ್ಜ್‌ಗಳ ನೇಮಕ

ಸಾರಾಂಶ

*  ಅನಂತ ರಾಮನಾಥ ಹೆಗಡೆ, ಸಿದ್ದಯ್ಯ ರಾಚಯ್ಯ, ಹೇಮಲೇಖ ನೇಮಕ *  ಕೊಲಿಜಿಯಂ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರದಿಂದ ನೇಮಕಾತಿ *  ಮೂವರನ್ನು ಹೈಕೋರ್ಟ್‌ಗೆ ನೇಮಿಸುವ ಬಗ್ಗೆ ಅ.6ರಂದು ಕೊಲಿಜಿಯಂ ಶಿಫಾರಸು  

ಬೆಂಗಳೂರು(ನ.04):  ಹಿರಿಯ ವಕೀಲರಾದ ಅನಂತ ರಾಮನಾಥ ಹೆಗಡೆ(Anant Ramnath Hegde), ಸಿದ್ದಯ್ಯ ರಾಚಯ್ಯ(Siddaiah Rachaiah) ಮತ್ತು ಕೆ.ಎಸ್‌ ಹೇಮಲೇಖ(KH Hemalekha) ಅವರನ್ನು ಕರ್ನಾಟಕ ಹೈಕೋರ್ಟ್‌ನ(Karnataka Highcourt) ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ರಾಷ್ಟ್ರಪತಿ(President) ಅವರ ಆದೇಶದ ಮೇರೆಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾರ್ಯದರ್ಶಿ ರಜಿಂದರ್‌ ಕಶ್ಯಪ್‌ ಅವರು ಬುಧವಾರ ಆದೇಶ ಮಾಡಿದ್ದಾರೆ. ಈ ಮೂವರು ವಕೀಲರನ್ನು(Advocate) ಎರಡು ವರ್ಷದ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ(Additional Justices) ನೇಮಕ(Appoint) ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮೂವರನ್ನು ಹೈಕೋರ್ಟ್‌ಗೆ ನೇಮಕ ಮಾಡುವ ಸಂಬಂಧ 2021ರ ಅ.6ರಂದು ಸುಪ್ರೀಂಕೋರ್ಟ್‌ನ(Supreme Court) ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ(Central Government) ಶಿಫಾರಸು ಮಾಡಿತ್ತು.

ಹೈಕೋರ್ಟ್‌ನ ಬೆಂಗಳೂರು(Bengaluru) ಪ್ರಧಾನ ನ್ಯಾಯಪೀಠ, ಧಾರವಾಡ(Dharwad) ಮತ್ತು ಕಲಬುರಗಿ(Kalaburagi) ನ್ಯಾಯಪೀಠಕ್ಕೆ ಒಟ್ಟು 62 ಹುದ್ದೆಗಳು ಮಂಜೂರಾಗಿವೆ. ಸದ್ಯ ಮುಖ್ಯ ನ್ಯಾಯಮೂರ್ತಿಗಳು ಸೇರಿ 43 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಮತ್ತೆ ಮೂವರ ನೇಮಕದಿಂದ ಹೈಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಕನ್ನಡತಿ ಜ| ನಾಗರತ್ನ ಸೇರಿ 9 ಮಂದಿ ಸುಪ್ರೀಂ ಕೋರ್ಟ್ ಜಡ್ಜ್‌ ಆಗಿ ಪ್ರಮಾಣವಚನ!

ಕರ್ನಾಟಕ ಹೈಕೋರ್ಟ್‌ಗೆ 10 ಖಾಯಂ ನ್ಯಾಯಮೂರ್ತಿಗಳು 

ಈ ಹಿಂದೆ ರಾಜ್ಯ ಹೈಕೋರ್ಟ್‌ಗೆ ಖಾಯಂ ಆಗಿ 10 ಮಂದಿ ನ್ಯಾಯಮೂರ್ತಿಗಳ ನೇಮಕದ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಒಪ್ಪಿಗೆ ಕೊಟ್ಟಿತ್ತು. 

ನ್ಯಾಯಮೂರ್ತಿ ಮರಲೂರ್‌ ಇಂದ್ರಕುಮಾರ್‌ ಅರುಣ್‌, ನ್ಯಾ.ಇಂಗಲಗುಪ್ಪೆ ಸೀತಾರಾಮಯ್ಯ ಇಂದ್ರೇಶ್‌, ನ್ಯಾ.ರವಿ ವೆಂಕಪ್ಪ ಹೊಸಮನಿ, ನ್ಯಾ.ಸವಣೂರು ವಿಶ್ವಜಿತ್‌ ಶೆಟ್ಟಿ, ನ್ಯಾ. ಶಿವಶಂಕರ್‌ ಅಮರಣ್ಣನವರ್‌, ನ್ಯಾ.ಎಂ.ಗಣೇಶಯ್ಯ ಉಮಾ, ನ್ಯಾ.ವೇದವ್ಯಾಸಾಚಾರ್‌ ಶ್ರೀಶಾನಂದ, ನ್ಯಾ.ಹಂಚಾಟೆ ಸಂಜೀವ್‌ ಕುಮಾರ್‌, ನ್ಯಾ.ಪದ್ಮರಾಜ್‌ ನೇಮಚಂದ್ರ ದೇಸಾಯಿ ಹಾಗೂ ನ್ಯಾ.ಪಿ.ಕೃಷ್ಣ ಭಟ್‌ ಅವರು ಖಾಯಂ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!