ಕೊರೋನಾ ಸೋಂಕಿತನ ಶವ ನೀಡಲು 3.60 ಲಕ್ಷಕ್ಕೆ ಆಸ್ಪತ್ರೆ ಬೇಡಿಕೆ

By Kannadaprabha NewsFirst Published Aug 3, 2020, 7:47 AM IST
Highlights

ಅನಾರೋಗ್ಯದ ಹಿನ್ನೆಲೆಯಲ್ಲಿ ಜು.22ರಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿ| ಜು.25ರಂದು ಅವರಿಗೆ ಕೊರೊನಾ ಪಾಸಿಟಿವ್‌ ದೃಢ| ಈ ವೇಳೆ ಉಸಿರಾಟದ ಸಮಸ್ಯೆಯಿದೆ ಎಂದು ಐಸಿಯುಗೆ ಶಿಫ್ಟ್‌ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ಈ ವೇಳೆ ಸೋಂಕಿತನ ಕುಟುಂಬದಿಂದ 1.30 ಲಕ್ಷ ಕಟ್ಟಿಸಿಕೊಂಡಿದ್ದ ಆಸ್ಪತ್ರೆ| ಸೋಂಕಿತ ಚಿಕಿತ್ಸೆ ಫಲಿಸದೆ ಸಾವು| 

ಬೆಂಗಳೂರು(ಆ.03): ಕೊರೋನಾ ಸೋಂಕಿತನ ಶವ ಹಸ್ತಾಂತರಿಸಲು 3.60 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಡಿವಾಳದ ಸೇಂಟ್‌ ಜಾನ್ಸ್‌ ಆಸ್ಪತ್ರೆ ವಿರುದ್ಧ ಆರೋಪ ಕೇಳಿ ಬಂದಿದೆ.

ಬೇಗೂರು ನಿವಾಸಿಯೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ಜು.22ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜು.25ರಂದು ಅವರಿಗೆ ಕೊರೊನಾ ಪಾಸಿಟಿವ್‌ ಇರುವ ಬಗ್ಗೆ ಮಾಹಿತಿ ಬಂದಿದೆ. ಈ ವೇಳೆ ಉಸಿರಾಟದ ಸಮಸ್ಯೆಯಿದೆ ಎಂದು ಐಸಿಯುಗೆ ಶಿಫ್ಟ್‌ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ಈ ವೇಳೆ ಸೋಂಕಿತನ ಕುಟುಂಬದಿಂದ 1.30 ಲಕ್ಷ ಕಟ್ಟಿಸಿಕೊಂಡಿದ್ದರು. ಆದರೆ ಸೋಂಕಿತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದೀಗ ಮೃತದೇಹ ಹಸ್ತಾಂತರಿಸಲು .3.60 ಲಕ್ಷ ಪಾವತಿಸುವಂತೆ ಆಸ್ಪತ್ರೆ ಸಿಬ್ಬಂದಿ ಕೇಳುತ್ತಿದ್ದಾರೆ. 

ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು; ಮನೆ ಕಿಟಕಿ, ಗಾಜು ಪೀಸ್ ಪೀಸ್..!

ನಮ್ಮ ಬಳಿ ಹಣವಿಲ್ಲ. ಶವ ಕೊಡಿ ಎಂದು ಮೃತನ ಪುತ್ರಿ ಕಣ್ಣೀರಿಡುತ್ತಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಹಣ ಕೊಟ್ಟರಷ್ಟೇ ಶವ ಹಸ್ತಾಂತರಿಸುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.
 

click me!