ಕರ್ನಾಟಕದ ಇಂದಿನ ಕೊರೋನಾ ಪ್ರಕರಣ ಸಂಖ್ಯೆ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ!

By Suvarna News  |  First Published Feb 21, 2021, 9:06 PM IST

ನೆರೆ ರಾಜ್ಯಗಳಿಂದ ಕರ್ನಾಟಕದಲ್ಲೂ ಕೊರೋನಾ ವೈರಸ್ ಭೀತಿ ಹೆಚ್ಚಾಗಿದೆ. ಪ್ರಕರಣದ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೆಲ ನಿರ್ಬಂಧನೆಗಳನ್ನು ಜಾರಿಗೆ ತರಲಾಗಿದೆ. ಇದರ ನಡುವೆ ಆರೋಗ್ಯ ಇಲಾಖೆ ಇಂದಿನ(ಫೆ.21) ಕೊರೋನಾ ಸಂಖ್ಯೆ ಬಿಡುಗಡೆ ಮಾಡಿದೆ.
 


ಬೆಂಗಳೂರು(ಫೆ.21): ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಮಹಾರಾಷ್ಟ್ರದ ಕೆಲ ಜಿಲ್ಲೆ ಲಾಕ್‌ಡೌನ್ ಆಗಿದೆ. ನೆರೆ ರಾಜ್ಯಗಳಿಂದ ಇದೀಗ ಕರ್ನಾಟಕದಲ್ಲೂ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದೆ.  ಹೀಗಾಗಿ ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುತ್ತಿರುವವರಿಗೆ ನೆಗೆಟೀವ್ ರಿಪೋರ್ಟ್ ಕಡ್ಡಾಯವಾಗಿದೆ. ಇದರ ನಡುವೆ ಇಂದು ರಾಜ್ಯದಲ್ಲಿ ಪತ್ತೆಯಾದ ಹೊಸ ಕೊರೋನಾ ಪ್ರಕರಣ ಸಂಖ್ಯೆ  413 ಎಂದು  ಆರೋಗ್ಯ ಇಲಾಖೆ ಹೇಳಿದೆ.

ಮತ್ತೆ ಆವರಿಸಿದ ಕೊರೋನಾ; ಮಹಾರಾಷ್ಟ್ರದ ಅಮರಾವತಿ 1 ವಾರ ಲಾಕ್‌ಡೌನ್!.

Latest Videos

undefined

ಫೆ.21ರಂದು 413 ಹೊಸ ಪ್ರಕರಣಗಳು ಪತ್ತೆಯಾಗಿರುವ ಕಾರಣ ರಾಜ್ಯದಲ್ಲಿನ ಒಟ್ಟು ಕೊರೋನಾ ವೈರಸ್ ಪ್ರಕರಣ ಸಂಖ್ಯೆ  9,48,149ಕ್ಕೇರಿದೆ. ಇನ್ನು ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಯಾದ ಸಂಖ್ಯೆ 9,29,800. ಇನ್ನು ರಾಜ್ಯದಲ್ಲಿ ಸಕ್ರೀಯ ಕೊರೋನಾ ಪ್ರಕರಣಗಳ ಸಂಖ್ಯೆ 6,036.

 

ಇಂದಿನ 21/02/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/9RkFeyek08 pic.twitter.com/gNoLQ4wafI

— K'taka Health Dept (@DHFWKA)

ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ  127. ಇನ್ನು ಫೆ.21ಕ್ಕೆ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2.   

ಕೊರೋನಾ 2ನೇ ಅಲೆ; ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ!

ರಾಜ್ಯದಲ್ಲೂ ದಿನದಿಂದ ದಿನಕ್ಕೆ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜನರು ಮುಂಜಾಗ್ರತೆ ವಹಿಸಲು ಸೂಚಿಸಿಲಾಗಿದೆ. ಇಷ್ಟೇ ಅಲ್ಲ ಕೊರೋನಾ ಮಾರ್ಗಸೂಚಿನಗಳನ್ನು ಕಡ್ಡಾಯವಾಗಿ ಪಾಲಿಸಲು ಎಚ್ಚರಿಕೆ ನೀಡಲಾಗಿದೆ.

click me!