ನನ್ನ ಗೆಳೆಯ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾನೆ. ಆತನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ, ಪೊಲೀಸರ ಕೈಗೆ ತಗ್ಲಾಕೊಂಡಿದ್ದಾಳೆ.
ಬೆಂಗಳೂರು: 29 ವರ್ಷದ ಯುವತಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru’s Kempegowda International Airport) ಕರೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ ಯುವತಿ, ಆತನ ಬ್ಯಾಗ್‌ನಲ್ಲಿ ಬಾಂಬ್ ಇದ್ದು, ಮುಂಬೈಗೆ (Bengaluru To Mumbai) ತೆರಳುತ್ತಿದ್ದಾನೆ. ಆದಷ್ಟು ಬೇಗ ಆತನನ್ನು ತಡೆಯಿರಿ ಎಂದು ಹೇಳಿದ್ದಾಳೆ. ಜೂನ್ 26ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹುಸಿ ಕರೆ ಸಂಬಂಧ ಯುವತಿ ವಿರುದ್ಧ ಐಪಿಸಿ ಸೆಕ್ಸನ್ 505 (1)(B) ಅಡಿಯಲ್ಲಿ (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು) ಎಫ್‌ಐಆರ್ ದಾಖಲಾಗಿದೆ
ಯುವತಿಯನ್ನು ಪುಣೆ ಮೂಲದ ಇಂದ್ರಾ ರಾಜ್ವಾರ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾಳೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಹಾಯವಾಣಿಗೆ ಕರೆ ಮಾಡಿದ ಇಂದ್ರಾ, ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿರುವ ಮಿರ್ ರಾಜಾ ಮೆಹ್ದಿ ಹೆಸರಿನ ಪ್ರಯಾಣಿಕ ಬಾಂಬ್ ಸಾಗಿಸುತ್ತಿದ್ದಾನೆ. ಆತ ನನ್ನ ಬಾಯ್‌ಫ್ರೆಂಡ್ ಎಂದು ಇಂದ್ರಾ ಹೇಳಿಕೊಂಡಿದ್ದಳು.
ನಾಲ್ಕು ವರ್ಷದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಬೆಂಗಳೂರಿನಿಂದ ಥಾಯ್ಲೆಂಡ್‌ಗೆ ವಿಮಾನ ಹತ್ತುವಾಗ ಪತ್ತೆ!
ಕರೆ ಮಾಡಿದವಳು ಏರ್‌ಪೋರ್ಟ್‌ನಲ್ಲಿಯೇ ಇದ್ದಳು!
ಕೂಡಲೇ ಅಲರ್ಟ್ ಆದ ಏರ್‌ಪೋರ್ಟ್ ಸಿಬ್ಬಂದಿ ಮಿರ್ ರಾಜ್ ಮೆಹ್ದಿಯನ್ನು ತಡೆದು ಆತನ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಆದರೆ ಬ್ಯಾಗ್‌ನಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆ ಇದೊಂದು ಹುಸಿಕರೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ಸಮಯದಲ್ಲಿ ಇಂದ್ರಾ ಸಹ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಇಂದ್ರಾ ಮತ್ತು ಮಿರ್ ರಾಜ್ ಮುಂಬೈಗೆ ತೆರಳಲು ಬೇರೆ ಬೇರೆ ವಿಮಾನಗಳಲ್ಲಿ ಸೀಟ್ ಕಾಯ್ದಿರಿಸಿದ್ದರು. ಸಂಜೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ಬರು ನಿರ್ಗಮನದ ಲಾಂಜ್‌ನಲ್ಲಿ ಕುಳಿತು ಮಾತನಾಡಿದ್ದಾರೆ. ನಂತರ ಇಂದ್ರಾ ಏರ್‌ಪೋರ್ಟ್‌ಗೆ ಕರೆ ಮಾಡಿ ಸುಳ್ಳು ಮಾಹಿತಿ ನೀಡಿದ್ದಳು.
ಗೆಳೆಯನ ಜೊತೆ ಜಗಳ ಆಗಿದ್ದಕ್ಕೆ ಹುಸಿ ಕರೆ
ಹುಸಿ ಕರೆ ಎಂದು ಸಾಬೀತು ಆಗ್ತಿದ್ದಂತೆ ಏರ್‌ಪೋರ್ಟ್ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಮುಂದೆ, ಮಿರ್ ರಾಜ್ ಹಾಗೂ ತನ್ನ ನಡುವೆ ಮನಸ್ತಾಪ ಉಂಟಾಗಿತ್ತು. ಆತ ಮುಂಬೈಗೆ ಹೋಗುವುದನ್ನು ತಡೆಯಲು ಹುಸಿ ಕರೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸುಳ್ಳು ಸುದ್ದಿ ಹರಡಿದರೆ ಯಾವುದೇ ಪಕ್ಷದವರಾದರೂ ಬಿಡಬೇಡಿ: ಸಿಎಂ ಸಿದ್ದರಾಮಯ್ಯ