ಸಿಹಿಸುದ್ದಿ: ಶೀಘ್ರವೇ 400 ಪಿಎಸ್‌ಐಗಳ ನೇಮಕಕ್ಕೆ ರಾಜ್ಯ ಸರ್ಕಾರ ಸಿದ್ಧತೆ

By Kannadaprabha News  |  First Published Jul 7, 2024, 12:58 PM IST

ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸರ್ಕಾರವು, ಪೊಲೀಸ್ ಇಲಾಖೆಗೆ ಹೊಸದಾಗಿ 400ಕ್ಕೂ ಹೆಚ್ಚಿನ ಸಬ್ ಇನ್ಸ್‌ಪೆಕ್ಟರ್ ಗಳ (ಪಿಎಸ್‌ಐ) ನೇಮಕಾತಿಗೆ ಮುಂದಾಗಿದೆ. ಪಿಎಸ್‌ಐಗಳ ನೇಮಕ ಸಂಬಂಧ ಗೃಹ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರವು ಸಮ್ಮತಿ ಸೂಚಿಸಿದೆ.


ಬೆಂಗಳೂರು (ಜು.07): ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸರ್ಕಾರವು, ಪೊಲೀಸ್ ಇಲಾಖೆಗೆ ಹೊಸದಾಗಿ 400ಕ್ಕೂ ಹೆಚ್ಚಿನ ಸಬ್ ಇನ್ಸ್‌ಪೆಕ್ಟರ್ ಗಳ (ಪಿಎಸ್‌ಐ) ನೇಮಕಾತಿಗೆ ಮುಂದಾಗಿದೆ. ಪಿಎಸ್‌ಐಗಳ ನೇಮಕ ಸಂಬಂಧ ಗೃಹ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರವು ಸಮ್ಮತಿ ಸೂಚಿಸಿದ್ದು, ಈ ಬಗ್ಗೆ ಶೀಘ್ರವೇ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್‌ ತಿಳಿಸಿದ್ದಾರೆ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ನಂತರ ಮೊದಲ ಬಾರಿಗೆ ಪಿಎಸ್‌ಐ ನೇಮಕಾತಿಗೆ ಅಸ್ತು ಎಂದಿದೆ. ಪಿಎಸ್‌ಐ ನೇಮಕಾತಿ ಗೊಂದಲ ಪರಿಹಾರ ನೇಮಕಾತಿ ಅಕ್ರಮ ಕೇಳಿ ಬಂದಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗ ಅಂತಿಮ ಹಂತಕ್ಕೆ ಬಂದಿದೆ. ಈ ನೇಮಕಾತಿ ವಿಚಾರವಾಗಿ ಹೈದರಾಬಾದ್ ಕರ್ನಾಟಕ ಮೀಸಲು ಸಂಬಂಧ ತಾಂತ್ರಿಕ ಅಡಚರಣೆ ಎದುರಾಗಿತ್ತು. ಈ ಬಗ್ಗೆ ಡಿಐಪಿಆರ್‌ನಿಂದ ಅಭಿಪ್ರಾಯ ಕೋರಿದ್ದೇವೆ ಎಂದು ಹೇಳಿದರು. 

Latest Videos

undefined

ಸರ್ಕಾರದಿಂದ ಹಾಲು ಖರೀದಿ ದರ ಕಡಿತ: ಸಂಸದ ಸುಧಾಕರ್‌ ವಿರೋಧ

2 ವರ್ಷ ಅವಧಿಗೆ ಡಿಐಪಿಆರ್‌ಅಭಿಪ್ರಾಯ ಕೋರಿಕೆ: ಕಾರ್ಯಸ್ಥಾನದಲ್ಲಿ ಡಿವೈಎಸ್ಪಿ ಹುದ್ದೆಗಿಂತ ಕೆಳಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಎರಡು ವರ್ಷಗಳು ಸೇವಾವಧಿ ನಿಗಪಡಿಸಿ ಸರ್ಕಾರದ ಅಧಿಸೂಚನೆ ಹೊರಡಿಸಿದೆ. ಈ ಆದೇಶವು ಪ್ರಸುತ್ತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅನ್ವಯವಾಗಲಿದೆಯೇ ಅಥವಾ ಮುಂದಿನ ವರ್ಗಾವಣೆ ಬಳಿಕ ಜಾರಿಗೆ ಬರಲಿದೆಯೇ ಎಂಬ ಬಗ್ಗೆ ಡಿಐಪಿಆರ್‌ನಿಂದ ಸ್ಪಷ್ಟಿಕರಣ ಕೋರಿದ್ದೇವೆ. ಡಿಪಿಐಆರ್‌ ಪ್ರತಿಕ್ರಿಯೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಉಮಾಶಂಕರ್ ಹೇಳಿದರು. ಅಲ್ಲದೆ ಅಂತರ್‌ಜಿಲ್ಲಾ ವರ್ಗಾವಣೆ ಸಂಬಂಧ ಕೂಡ ಎದುರಾಗಿರುವ ಕಾನೂನು ತೊಡಕು ನಿವಾರಣೆಗೆ ಡಿಪಿಐಆರ್‌ನಿಂದ ಮಾಹಿತಿ ಕೋರಿದ್ದೇವೆ ಎಂದು ತಿಳಿಸಿದರು.

click me!