ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ: ಆದ್ರೂ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು

Published : May 26, 2021, 09:18 PM IST
ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ:  ಆದ್ರೂ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು

ಸಾರಾಂಶ

* ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಕೊರೋನಾ ಕೇಸ್‌ಗಳ ಸಂಖ್ಯೆ * ಮೇ.25ರಂದು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ  ಇಳಿಕೆಯಾಗಿದ್ರೆ,  ಇಂದು (ಬುಧವಾರ) ಏರಿಕೆ * ಆದರೂ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು

ಬೆಂಗಳೂರು, (ಮೇ.26): ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಕೇಸ್‌ಗಳು ಕಡಿಮೆಯಾಗುತ್ತಿವೆ ಎನ್ನುವ ನಿರಾಳವಾಗಿರುವಾಗಲೇ ಮತ್ತೆ ಏರಿಕೆಯಾಗಿದೆ.

ಹೌದು...  ಮಂಗಳವಾರ (ಮೇ.25) ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ  ಇಳಿಕೆಯಾಗಿದ್ರೆ,  ಇಂದು (ಬುಧವಾರ) ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 26,811 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು,  530 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಮೇ. 25ರ ಕೊರೋನಾ ರಿಪೋರ್ಟ್: ರಾಜ್ಯದಲ್ಲಿ ಕೊರೋನಾ ಇಳಿಮುಖ, ಸಾವಿನ ಸಂಖ್ಯೆ ಅಧಿಕ

ಇನ್ನು ಇದೇ ಅವಧಿಯಲ್ಲಿ 40,741 ಸೋಂಕಿತರು ಗುಣಮುಖರಾಗಿದ್ದಾರೆ.  ಇದರೊಂದಿಗೆ ಈವರೆಗೂ 20,62,910 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ 26,929 ಜನರು ಬಲಿಯಾಗಿದ್ದಾರೆ. ಉಳಿದಂತೆ 4,09,924 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಅಂಕಿ-ಸಂಖ್ಯೆ
ಬಾಗಲಕೋಟೆ 245, ಬಳ್ಳಾರಿ 796, ಬೆಳಗಾವಿ 1205, ಬೆಂಗಳೂರು ಗ್ರಾಮಾಂತರ 740, ಬೆಂಗಳೂರು 6433, ಬೀದರ್ 61, ಚಾಮರಾಜನಗರ 425, ಚಿಕ್ಕಬಳ್ಳಾಪುರ 313, ಚಿಕ್ಕಮಗಳೂರು 585, ಚಿತ್ರದುರ್ಗ 431, ದಕ್ಷಿಣ ಕನ್ನಡ 729, ದಾವಣಗೆರೆ 1309, ಧಾರವಾಡ 853, ಗದಗ 393, ಹಾಸನ 1471, ಹಾವೇರಿ 330, ಕಲಬುರಗಿ 175, ಕೊಡಗು 296, ಕೋಲಾರ 907, ಕೊಪ್ಪಳ 491, ಮಂಡ್ಯ 805, ಮೈಸೂರು 2792, ರಾಯಚೂರು 265, ರಾಮನಗರ 240, ಶಿವಮೊಗ್ಗ 839, ತುಮಕೂರು 1399, ಉಡುಪಿ 973, ಉತ್ತರ ಕನ್ನಡ 786, ವಿಜಯಪುರ 337, ಯಾದಗಿರಿ 187.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Sharath R Ashok scuba diving: ಸಮುದ್ರದಾಳದಲ್ಲಿ ಆರ್ ಅಶೋಕ್ ಪುತ್ರನ ಗಿನ್ನೆಸ್ ಸಾಹಸ
Karnataka By-Election Results 2026 LIVE: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭದಲ್ಲೇ ಸ್ಟ್ರಾಂಗ್ ರೂಮ್ ಬೀಗ ನಾಪತ್ತೆ!