* ರಾಜ್ಯದಲ್ಲಿ ದಾಖಲೆಯ ಇಳಿಕೆ ಕಂಡ ಕೊರೋನಾ
* ಸೋಂಕಿನ ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆ
* ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
ಬೆಂಗಳೂರು, (ಅ.16): ಕರ್ನಾಟಕದಲ್ಲಿ ಕೊರೋನಾ ಎರಡನೇ (Coronavirus) ಅಲೆ ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ.
ಹೌದು.. ರಾಜ್ಯದಲ್ಲಿ ಇಂದು (ಆ.16) ಹೊಸದಾಗಿ (New cases) 264 ಜನರಿಗೆ ಕೊರೋನಾ ಪಾಸಿಟಿವ್ (Corona passtive) ಕೇಸ್ ಪತ್ತೆಯಾಗಿದ್ದು, 6 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು 421 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
undefined
ಮಹಾ, ಕೇರಳ ಗಡಿ ನಿರ್ಬಂಧ ಸಡಿಲಿಕೆ ಶೀಘ್ರ : ಸಿಎಂ
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದ್ರೆ, 37937 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇದುವರೆಗೆ 29,35,659 ಜನ ಗುಣಮುಖರಾಗಿದ್ದಾರೆ. ಇದರೊಂದಿಗೆ 9508 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ರೇಟ್ (Positivity rate) 0.43%ರಷ್ಟು ಇದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು (ಶನಿವಾರ) 121 ಜನರಿಗೆ ಸೋಂಕು ತಗುಲಿದೆ. 3 ಮೃತಪಟ್ಟಿದ್ದಾರೆ. 132 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6732 ಸಕ್ರಿಯ ಪ್ರಕರಣಗಳಿವೆ ೯Active cases) ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Covid numbers in Karnataka today:
🌀 New cases in State: 264
🌀 New cases in B'lore: 121
🌀 Positivity rate: 0.43%
🌀 Discharges: 421 (B'lore- 132)
🌀 Deaths: 06 (B'lore- 03)
🌀 Active cases in State: 9,508
🌀 Active cases in B'lore: 6,732
🌀 Tests: 60,141
ಜಿಲ್ಲಾವಾರು ಸೋಂಕಿನ ಸಂಖ್ಯೆ:
ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 0, ಬೀದರ್ 0, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 0, ದಾವಣಗೆರೆ 0, ಧಾರವಾಡ 0, ಗದಗ 0, ಹಾವೇರಿ 1, ಕಲಬುರ್ಗಿ 1, ಕೊಪ್ಪಳ 0, ರಾಯಚೂರು 1, ವಿಜಯಪುರ 0, ಯಾದಗಿರಿ 1, ಬೆಂಗಳೂರು ನಗರ 121, ದಕ್ಷಿಣಕನ್ನಡ 34, ಹಾಸನ 16, ಮೈಸೂರು 21.
ಕೇರಳ (Kerala) ಮತ್ತು ಮಹಾರಾಷ್ಟ್ರ (Maharashtra) ಗಡಿಯಲ್ಲಿ ಕೋವಿಡ್ (Covid) ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ದಸರಾ ಮುಗಿದ ಕೂಡಲೆ ಕೋವಿಡ್ ತಜ್ಞರ ಸಮಿತಿ ಸಭೆ ನಡೆಸಿ ಜನರಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.