
ಗಿರೀಶ್ ಗರಗ
ಬೆಂಗಳೂರು : ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ 10 ಸಾವಿರ ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೆ, ಕಳೆದ ಎರಡೂವರೆ ವರ್ಷದಲ್ಲೇ 2,422 ರೈತರು ಸಾವಿಗೆ ಶರಣಾಗಿದ್ದಾರೆ!
ಹೀಗಂತ ಕಂದಾಯ ಇಲಾಖೆಯ ಜುಲೈ ಮಾಸದವರೆಗಿನ ರೈತರ ಆತ್ಮ*ತ್ಯೆ ಸಂಬಂಧಿ ಅಂಕಿ-ಅಂಶಗಳೇ ಹೇಳುತ್ತಿವೆ. ರಾಜ್ಯದಲ್ಲಿ ದಶಕದ ಹಿಂದೆ ರೈತರ ಆತ್ಮ*ತ್ಯೆ ಪ್ರಮಾಣ ವಿಪರೀತವಿದ್ದು, ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂಬ ಭಾವನೆಯನ್ನೇ ಇವು ಸುಳ್ಳಾಗಿಸಿವೆ.
ಅಂಕಿ-ಅಂಶದ ಪ್ರಕಾರ, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ವಾರ್ಷಿಕ ಸರಾಸರಿ 1 ಸಾವಿರದಂತೆ 10,371 ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, 2023-24ರಿಂದ 2025-26ನೇ ಸಾಲಿನವರೆಗೆ 2,422 ರೈತರು ಆತ್ಮ*ತ್ಯೆಗೆ ಶರಣಾಗಿದ್ದಾರೆ.
ಪ್ರವಾಹ, ಬರ ಮತ್ತಿತರ ಕಾರಣಗಳಿಂದಾಗಿ ವರ್ಷದಿಂದ ವರ್ಷಕ್ಕೆ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿ ಸಾವಿನ ದಾರಿ ಹಿಡಿಯುವಂತಾಗಿದೆ. ಅದರಲ್ಲೂ ಬೆಳೆದ ಬೆಳೆ ಕೈ ಸೇರದೆ ಸಾಲ ಬಾಧೆ ತಾಳಲಾರದೆ ಆತ್ಮ*ತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತಲಿದೆ. 2015-16ರಿಂದ 2024-25ನೇ ಸಾಲಿನವರೆಗೆ 10,371 ರೈತರು ಸಾವಿಗೆ ಶರಣಾಗಿದ್ದಾರೆ. ಅದೇ 2023-24ರಿಂದ 2025-26ರ ಜುಲೈವರೆಗೆ ಒಟ್ಟು 2,422 ರೈತರು ಆತ್ಮ*ತ್ಯೆ ಮಾಡಿಕೊಂಡಿರುವ ವರದಿಯಾಗಿದೆ. ಅದರಲ್ಲಿ 2,067 ರೈತರು ಸಾಲಬಾಧೆ ಸೇರಿ ಇನ್ನಿತರ ಕಾರಣಗಳಿಂದಾಗಿ ಬದುಕಿಗೆ ಅಂತ್ಯಹಾಡಿದ್ದಾರೆ.
ಹಾವೇರಿಯಲ್ಲಿ ಅತಿಹೆಚ್ಚು ಆತ್ಮ*ತ್ಯೆ:
ಸರ್ಕಾರದ ದಾಖಲೆಯಂತೆ ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ರೈತರು ಆತ್ಮ*ತ್ಯೆ ಗೆ ಶರಣಾಗಿದ್ದಾರೆ. ದಾಖಲೆಗಳ ಪ್ರಕಾರ 2023-24ರಿಂದ ಈವರೆಗೆ 260 ರೈತರು ಜೀವ ಕಳೆದುಕೊಂಡಿದ್ದರೆ, ಅದರಲ್ಲಿ ಸಾಲಬಾಧೆ ಸೇರಿ ಸರ್ಕಾರದಿಂದ ಪರಿಹಾರ ನೀಡಬಹುದಾದ ಕಾರಣಗಳಿಗೆ 228 ರೈತರು ಸಾವಿಗೀಡಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಬೆಳಗಾವಿಯಿದ್ದು, ಒಟ್ಟು 218 ರೈತರು ಆತ್ಮ*ತ್ಯೆಗೆ ಶರಣಾಗಿದ್ದು, ಅದರಲ್ಲಿ 184 ರೈತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ.
ಕೋಲಾರದಲ್ಲಿ ಒಬ್ಬ ರೈತ ಸಾವು:
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೇ ಹೆಚ್ಚಿನ ರೈತ ಆತ್ಮ*ತ್ಯೆಗಳು ಉಂಟಾಗಿವೆ. ಉಳಿದಂತೆ ದಕ್ಷಿಣ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ರೈತರ ಆತ್ಮ*ತ್ಯೆ ಪ್ರಕರಣ ಕಡಿಮೆಯಿದೆ. ಅದರಲ್ಲೂ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಕೇವಲ ಒಬ್ಬ ರೈತರ ಮಾತ್ರ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 4, ಚಾಮರಾಜನಗರದಲ್ಲಿ 6, ರಾಮನಗರ (ಬೆಂಗಳೂರು ದಕ್ಷಿಣ) 10, ದಕ್ಷಿಣ ಕನ್ನಡ 11, ಕೊಡಗು 12 ರೈತರು ಸಾವಿಗೆ ಶರಣಾಗಿದ್ದಾರೆ.
98 ಕೋಟಿ ರು. ಪರಿಹಾರ:
ಆತ್ಮ*ತ್ಯೆಗೆ ಶರಣಾಗುವ ಎಲ್ಲ ರೈತರ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡುವುದಿಲ್ಲ. ಸಾಲಬಾಧೆಯಂತಹ ಆರ್ಥಿಕ ಸಂಕಷ್ಟದಿಂದ ಆತ್ಮ*ತ್ಯೆ ಮಾಡಿಕೊಂಡರೆ ಮಾತ್ರ ಅವರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ. ಅದರಂತೆ 2023-24ರಿಂದ 2025-26ರವರೆಗೆ ಆತ್ಮ*ತ್ಯೆ ಮಾಡಿಕೊಂಡ 2,422 ರೈತರ ಪೈಕಿ 2,067 ರೈತರ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಒಟ್ಟಾರೆ ಅಷ್ಟು ಪ್ರಮಾಣದ ರೈತ ಕುಟುಂಬಗಳಿಗೆ ತಲಾ 5 ಲಕ್ಷ ರು.ನಂತೆ 98.10 ಕೋಟಿ ರು. ಪರಿಹಾರ ವಿತರಿಸಲಾಗಿದೆ.
ವರ್ಷದಲ್ಲಿ ಸರಾಸರಿ 1 ಸಾವಿರ ಆತ್ಮ*ತ್ಯೆ
ಕಳೆದ 10 ವರ್ಷಗಳಲ್ಲಿ ರೈತರಆತ್ಮ*ತ್ಯೆ ಪ್ರಕರಣಗಳು ತಗ್ಗಿಲ್ಲ. 2015-16ರಿಂದ 2024-25ರವರೆಗೆ ಒಟ್ಟಾರೆ 10,371 ರೈತರು ಆತ್ಮ*ತ್ಯೆಗೆ ಶರಣಾಗಿದ್ದಾರೆ. ಈ ವರ್ಷದ ಅಂಕಿ-ಅಂಶವೂ ಸೇರಿಸಿದರೆ ರೈತರ ಆತ್ಮ*ತ್ಯೆ ಸಂಖ್ಯೆ 10,461ಕ್ಕೆ ಏರಿಕೆಯಾಗುತ್ತದೆ. ಅಲ್ಲದೆ, ಹೀಗೆ ಆತ್ಮ*ತ್ಯೆ ಮಾಡಿಕೊಂಡ ರೈತರಲ್ಲಿ 9,141 ಅರ್ಹ ಪ್ರಕರಣ ಎಂದು ಕೃಷಿ ಇಲಾಖೆ ಪರಿಗಣಿಸಿ, ಪರಿಹಾರ ನೀಡಲಾಗಿದೆ.
2023-24ರಿಂದ 2025-26ರವರೆಗಿನ ಆತ್ಮ*ತ್ಯೆ ಪ್ರಕರಣಗಳು:
ವರ್ಷವರದಿಯಾದ ಪ್ರಕರಣಪರಿಹಾರಕ್ಕೆ ಅರ್ಹ ಪ್ರಕರಣ ಪರಿಹಾರದ ಮೊತ್ತ
2023-24 1250 1082 54.10 ಕೋಟಿ ರು.
2024-25 108 2920 40.75 ಕೋಟಿ ರು.
2025-26 906 53.25 ಕೋಟಿ ರು.
ಒಟ್ಟು2,42 22,06798.10 ಕೋಟಿ ರು.
10 ವರ್ಷಗಳಲ್ಲಿನ ರೈತರಆತ್ಮ*ತ್ಯೆ ವಿವರ:
ವರ್ಷವರದಿಯಾದ ಪ್ರಕರಣ ಪರಿಹಾರಕ್ಕೆ ಅರ್ಹ ಪ್ರಕರಣ
2015-16 1525 1062
2016-17 1203 932
2017-18 1323 1052
2018-19 1084 866
2019-20 1091 895
2020-21 851 716
2021-22 859 702
2022-23 968 849
2023-24 1250 1082
2024-25 1082 920
2025-26 90 60
ಒಟ್ಟು10 46 19141
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ