ರಾಜ್ಯದಲ್ಲಿ ಆನ್‌ಲೈನ್ ಉದ್ಯೋಗದ ಹೆಸರಲ್ಲಿ 2348 ಕೋಟಿ ವಂಚನೆ: ಸಚಿವ ಪರಮೇಶ್ವರ್

Published : Jul 19, 2024, 03:32 PM ISTUpdated : Jul 19, 2024, 03:36 PM IST
ರಾಜ್ಯದಲ್ಲಿ ಆನ್‌ಲೈನ್ ಉದ್ಯೋಗದ ಹೆಸರಲ್ಲಿ 2348 ಕೋಟಿ ವಂಚನೆ: ಸಚಿವ ಪರಮೇಶ್ವರ್

ಸಾರಾಂಶ

ರಾಜ್ಯದಲ್ಲಿ 2023ರಲ್ಲಿ ಆನ್‌ಲೈನ್ ಉದ್ಯೋಗದ ಹೆಸರಿನಲ್ಲಿ 4470 ವಂಚನೆ ಪ್ರಕರಣ ದಾಖಲಾಗಿದ್ದು, 347.70 ಕೋಟಿ ರು. ವಂಚಿಸಲಾಗಿದೆ. ಈ ಪೈಕಿ 46.73 ಕೋಟಿ ರು. ವಶಪಡಿಸಿಕೊಂಡು 60 ಜನರನ್ನು ಬಂಧಿಸಲಾಗಿದೆ. 

ವಿಧಾನ ಪರಿಷತ್‌ (ಜು.19): ರಾಜ್ಯದಲ್ಲಿ 2023ರಲ್ಲಿ ಆನ್‌ಲೈನ್ ಉದ್ಯೋಗದ ಹೆಸರಿನಲ್ಲಿ 4470 ವಂಚನೆ ಪ್ರಕರಣ ದಾಖಲಾಗಿದ್ದು, 347.70 ಕೋಟಿ ರು. ವಂಚಿಸಲಾಗಿದೆ. ಈ ಪೈಕಿ 46.73 ಕೋಟಿ ರು. ವಶಪಡಿಸಿಕೊಂಡು 60 ಜನರನ್ನು ಬಂಧಿಸಲಾಗಿದೆ. ಪ್ರಸಕ್ತ ವರ್ಷದ ಜುಲೈ 10ರವರೆಗೆ 1820 ಪ್ರಕರಣ ದಾಖಲಾಗಿದ್ದು,178.18 ಕೋಟಿ ರು. ವಂಚಿಸಲಾಗಿದೆ. ಈ ಪೈಕಿ 15.71 ಕೋಟಿ ರು. ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಕಾಂಗ್ರೆಸ್‌ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವರ್ಷ ನಕಲಿ ಲೋನ್ ಆ್ಯಪ್ ಮೂಲಕ ವಂಚಿಸಿದ ಪ್ರಕರಣಗಳು 517 ಆಗಿದ್ದು, 6.88 ಕೋಟಿ ರು. ವಂಚಿಸಲಾಗಿದೆ. ಈ ಪೈಕಿ 1.28 ಕೋಟಿ ರು. ವಶಪಡಿಸಿಕೊಳ್ಳಲಾಗಿದೆ. ಪ್ರಸಕ್ತ ವರ್ಷದ ಜು.10ರವರೆಗೆ 134 ಪ್ರಕರಣ ದಾಖಲಾಗಿದ್ದು, 4.61 ಕೋಟಿ ರು. ವಂಚನೆ ನಡೆದಿದೆ, 3.25 ಲಕ್ಷರು. ವಶಪಡಿಸಿಕೊಳ್ಳಲಾಗಿದೆ ಎಂದರು. 

ಸಿಸಿಐಟಿಆರ್ ಮೂಲಕ ತರಬೇತಿ: ಸೈಬರ್ ಅಪರಾಧ ಪತ್ತೆಗೆ ಇನ್ನೂ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಅಗತ್ಯ ತರಬೇತಿ ನೀಡಲಾಗುವುದು, ಜತೆಗೆ ಸಿಐಡಿ ಸೈಬರ್ ಅಪರಾಧ ತನಿಖೆ ತರಬೇತಿ ಮತ್ತು ಸಂಶೋಧನಾ ಕೇಂದ್ರ ಘಟಕ (ಸಿಸಿಐಟಿಆರ್) ಪ್ರಾರಂಭಿಸಲಾಗಿದೆ. ಸಿಸಿಐಟಿಆರ್ ಮೂಲಕ ಸರ್ಕಾರಿ ಸಂಸ್ಥೆ, ನ್ಯಾಯಾಧೀಶರು, ಕಾನೂನು ಅಭಿಯೋಜಕರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೈಬರ್‌ ಅಪರಾಧಗಳ ತನಿಖೆ ಮತ್ತು ಪತ್ತೆ ಮಾಡುವ ಬಗ್ಗೆ ಹಲವು ಕಾರ್ಯಕ್ರಮಗಳ ಮೂಲಕ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. 

ಹಳ್ಳಿ ಅಭಿವೃದ್ಧಿ ಮಾಡಿದರೆ ಗಾಂಧೀಜಿ ಕನಸು ನನಸು: ಗ್ರಾಮೀಣ ಪ್ರದೇಶಗಳನ್ನು ನಗರ ಪ್ರದೇಶಗಳಿಗೆ ಸರಿಸಮಾನವಾಗಿ ಅಭಿವೃದ್ಧಿಪಡಿಸಿದಾಗ ಮಾತ್ರ ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಹೇಳಿದರು. ನಗರದ ಹೊರವಲಯದ ಹೆಗ್ಗೆರೆ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ, ಕಾರ್ಯದರ್ಶಿಗಳಿಗಾಗಿ ಜಿಪಂ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಆಶಯದಂತೆ ಸ್ಥಳೀಯ ಆಡಳಿತವನ್ನು ಬಲಗೊಳಿಸಲು ಗ್ರಾಪಂ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೃಜನೆಯಾದ ಗ್ರಾಪಂಗಳಿಂದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯನ್ನು ಕಾಣುತ್ತಿವೆ ಎಂದರು.

ವಾಲ್ಮೀಕಿ ನಿಗಮದ ತನಿಖೆ ಮುಗಿಯೋವರೆಗೂ ಸಿಎಂ ಸಿದ್ದರಾಮಯ್ಯ ಕೆಳಗಿಳಿಯಲಿ: ವಿಪಕ್ಷ ಆಗ್ರಹ

ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರು ರಾಜಾಸ್ಥಾನದ ನಾಗೌರ್ ಗ್ರಾಮದಲ್ಲಿ ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ 1959 ರಲ್ಲಿ ಮೊದಲ ಗ್ರಾಪಂಯನ್ನು ಪ್ರಾರಂಭಿಸಿದ್ದರು. ಭಾರತದಲ್ಲಿರುವ ಗ್ರಾಪಂ ವ್ಯವಸ್ಥೆ ವಿಶ್ವದಲ್ಲಿ ಬೇರೆಲ್ಲೂ ಕಾಣ ಸಿಗುವುದಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ವಿಶೇಷವಾಗಿ ನಮೂನೆ ಮಾಡಿದ್ದು, ದೇಶದ ಎಲ್ಲಾ ಸಮುದಾಯದ ಜನರನ್ನು ಆಡಳಿತದ ವ್ಯವಸ್ಥೆಯಲ್ಲಿ ಪಾಲುದಾರರನ್ನಾಗಿಸುವುದೇ ಸಂವಿಧಾನದ ಆಶಯವಾಗಿದೆ ಎಂದರು. ಗ್ರಾಪಂ ವ್ಯಾಪ್ತಿಗೆ 28 ಇಲಾಖೆ ಒಳಪಡುವುದರಿಂದ ಗ್ರಾಪಂ ಅಧಿಕಾರ ವ್ಯಾಪ್ತಿ ಕೂಡ ವಿಸ್ತರಣೆಯಾಗಿ ಗ್ರಾಮೀಣ ಭಾಗದ ಜನರಿಗೆ ವಿವಿಧ ಸೌಲಭ್ಯಗಳನ್ನು ತಲುಪಿಸಲು ಅನುಕೂಲವಾಗಿದೆ. ಗ್ರಾಪಂ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಡಿ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಿ ಸಮಾನ ಅವಕಾಶ ನೀಡಲಾಗಿದೆ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!
ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!