ದೆಹಲಿ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಮತಗಟ್ಟೆ ಸಮೀಕ್ಷೆ ಹೊರಬಿದ್ದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಆಪ್ ಅಭ್ಯರ್ಥಿಗಳಿಗೆ ತಲಾ 15 ಕೋಟಿ ರೂಪಾಯಿ ಆಫರ್ ಮಾಡುತ್ತಿದ್ದಾರೆ ಎಂದಿದ್ಾದರೆ. ಇತ್ತ ತರಗತಿ ಇಷ್ಟವಿಲ್ಲದ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ ಪ್ರಕರಣವನ್ನು ಪೊಲೀಸರುು ಪತ್ತೆ ಹಚ್ಚಿದ್ದಾರೆ. ಇತ್ತ, ಲೋಕಸಭೆಯಲ್ಲಿ ತಮ್ಮ ಭಾಷಣದ ನಂತರ ಪ್ರಧಾನಿ ಮೋದಿ ಇಂದು ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನಡೆದಿರುವ ಅವಾಂತರಗಳು, ಡಾ.ಬಿಆರ್ ಅಂಬೇಡ್ಕರ್‌ಗೆ ಕಾಂಗ್ರೆಸ್ ಮಾಡಿದ ಅಪಮಾನ, ತುರ್ತು ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಕಾಂಗ್ರೆಸ್ ಪಕ್ಷವನ್ನು ಕುಟುಕಿದ್ದಾರೆ. ಈ ನಡುವೆ, ಟ್ರಂಪ್ ಅವರ ವಲಸಿಗರ ಮೇಲಿನ ಕ್ರಮದ ಭಾಗವಾಗಿ, 100 ಕ್ಕೂ ಹೆಚ್ಚು ಗಡೀಪಾರು ಮಾಡಲಾದ ಭಾರತೀಯರನ್ನು ಹೊತ್ತ ಅಮೆರಿಕದ ವಿಮಾನವು ಅಮೃತಸರದಲ್ಲಿ ಬಂದಿಳಿದಿದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್‌ಶೋಗೆ ಸಿದ್ಧತೆಗಳು ಆರಂಭವಾಗಿದ್ದು, ಸೂರ್ಯಕಿರಣ್, ತೇಜಸ್, ಸುಖೋಯ್ ಸೇರಿದಂತೆ ಹಲವು ಯುದ್ಧವಿಮಾನಗಳು ರಿಹರ್ಸಲ್ ಆರಂಭ ಮಾಡಿವೆ. ಈ ಬೆಳವಣಿಗೆ ನಡುವೆ ರಾಜ್ಯ ಬಿಜೆಪಿ ಬಣ ಬಡಿದಾಟ ಹೊಸ ತಿರುವು ಪಡೆದುಕೊಂಡಿದೆ. ಇಂದು ಇಡೀ ದಿನ ನಡೆದ ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.

10:24 PM (IST) Feb 06
ದೆಹಲಿ ಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ಬಿಜೆಪಿ ಆಪ್ ನಾಯಕರಿಗೆ 15 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ. ಆಪ್ ತೊರೆದು ಬಿಜೆಪಿ ಸೇರಲು ದುಬಾರಿ ಹಣ ನೀಡುತ್ತಿದ್ದಾರೆ. ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಆಪ್‌ನ 16 ಗೆಲ್ಲುವ ಅಭ್ಯರ್ಥಿಗಳಿಗೆ ಬಿಜೆಪಿ ಕರೆ ಮಾಡಿ ಈ ಆಫರ್ ನೀಡಿದೆ ಎಂದು ಆರೋಪಿಸಿದ್ದಾರೆ.
09:42 PM (IST) Feb 06
ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಸರ್ವೇ ಸೂಪರ್ ವೇಜರ್ ಸುರೇಶ್ ಬಾಬು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಕೋಲಾರದ ಹಾರೋಹಳ್ಳಿ ,ಧರ್ಮರಾಯನಗರ,ಕೋಟಿ ಮತ್ತು ಹೊಸಕೋಟೆಯ ಗೆಸ್ಟ್ ಹೌಸ್ ಮೇಲೆ ದಾಳಿ ನಡೆದಿದೆ. ಅಧಿಕಾರಿಗಳು ಲೈಸೆನ್ಸ್ ಸರ್ವೆಯರ್ ಹಾಗೂ ಸುರೇಶ್ ಬಾಬು ಆಪ್ತ ಸುನೀಲ್ ಮತ್ತು ಸಂದೀಪ ಮನೆಯ ಮೇಲೂ ದಾಳಿ ಮಾಡಿದ್ದಾರೆ. ಹಾರೋಹಳ್ಳಿಯಲ್ಲಿ 7.50 ಲಕ್ಷ ಹಣ ಮತ್ತು ಗೆಸ್ಟ್ ಹೌಸ್ ನಲ್ಲಿ ನಕಲಿ ಪೋಡಿಗಳ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ.
09:09 PM (IST) Feb 06
ನೋಯ್ಡಾದ 9ನೇ ತರಗತಿ ವಿದ್ಯಾರ್ಥಿಗೆ ತರಗತಿಯಲ್ಲಿ ಕುಳಿತುಕೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಹೇರಿಟೇಟ್, ಮಯೂರ್, ಜ್ಞಾನಶ್ರಿ ಸೇರಿದಂತೆ ಕೆಲ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ ಘಟನೆ ವರದಿಯಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ವಿದ್ಯಾರ್ಥಿ ಮಾಡಿದ ಕಿತಾಪತಿ ಬಯಲು ಮಾಡಿದ್ದಾರೆ
08:32 PM (IST) Feb 06
ಸಿಎಂ ಸಿದ್ದರಾಮಯ್ಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಮಡಾ ಕೇಸ್ ಸಿಬಿಐಗೆ ವಹಿಸಬೇಕೆಂಬ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಾಳೆ ತೀರ್ಪು ಪ್ರಕಟಿಸಲಿದೆ. ನ್ಯಾಯಮೂರ್ತಿ ನಾಗಪ್ರಸನ್ನರಿಂದ ತೀರ್ಪು ಪ್ರಕಟಿಸಲಿದ್ದಾರೆ. ಬೆಳಗ್ಗೆ 11 ಗಂಟೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಜನವರಿ 27 ರಂದು ಅಂತಿಮ ವಿಚಾರಣೆ ನಡೆದಿತ್ತು. ಬಳಿಕ ತೀರ್ಪು ಕಾಯ್ದಿರಿಸಲಾಗಿತ್ತು.
08:10 PM (IST) Feb 06
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಮೂರ ರಿಂದ ನಾಲ್ಕು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ. ಈ ಅಪಘಾತದಿಂದ ಕೆಲ ಗಂಟೆಗಳಿಂದ ಫ್ಲೈಓವರ್‌ನಲ್ಲಿ ಸೃಷ್ಟಿಯಾದ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡುವಂತಾಗಿದೆ.
07:44 PM (IST) Feb 06
ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ರಾಣಿ ಚೆನ್ನಮ್ಮ ಕಿರುಮೃಗಾಲಯದಲ್ಲಿದ್ದ ಹೆಣ್ಣು ಸಿಂಹ ನಿರುಪಮಾ ಮೃತಪಟ್ಟಿದೆ. 15 ವರ್ಷದ ಸಿಂಹಕ್ಕೆ ಕಳೆದ 15 ದಿನಗಳಿಂದ ವನ್ಯಜೀವಿ ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಬಹುಅಂಗಾಂಗ ವೈಫಲ್ಯ ಸಮಸ್ಯೆಯಿಂದ ಸಿಂಹ ಇಂದು ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃಗಾಲಯದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.
06:58 PM (IST) Feb 06
ದೆಹಲಿ ವಿಧಾನಸಭೆ ಮತದಾನ(ಫೆ.05) ಅಂತ್ಯಗೊಂಡ ಬಳಿಕ ಫಲಿತಾಂಶ ಕುರಿತು ಬಹುತೇಕ ಸಮೀಕ್ಷೆ ಪ್ರಕಟಗೊಂಡಿತ್ತು. ಆದರೆ ಪ್ರದೀಪ್ ಗುಪ್ತಾ ನೇತೃತ್ವದ ಆ್ಯಕ್ಸಿಸ್ ಮೈ ಇಂಡಿಯಾ ಇಂದು ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ. ದೆಹಲಿ 70 ಸ್ಥಾನಗಳ ಪೈಕಿ ಬಿಜೆಪಿ 45-55 ಸ್ಥಾನ ಗೆದ್ದು ಅಧಿಕಾರಕ್ಕೇರಲಿದೆ ಎಂದು ಆ್ಯಕಿಸ್ ಮೈ ಇಂಡಿಯಾ ಹೇಳಿದೆ. ಆಪ್ 15 ರಿಂದ 25 ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ಕಾಂಗ್ರೆಸ್ 1 ಸ್ಥಾನ ಗೆಲ್ಲಲಿದೆ ಎಂದಿದೆ.
06:08 PM (IST) Feb 06
ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ವಿವರಣೆ ನೀಡಲು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿಗಳ ಆತ್ಮನಿರ್ಭರ್ ಭಾರತ್, ಮೆಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ವಿಕಸಿತ ಭಾರತ ಗುರಿಯನ್ನು ಮುಟ್ಟಲು ಕೈಗೊಳ್ಳಲಾಗಿರುವ ಸರ್ವ ಕ್ರಮಗಳ ಬಗ್ಗೆಯೂ ಸಚಿವರು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದರು.
05:40 PM (IST) Feb 06
ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಜನಪ್ರಿಯ ಸಿನಿಮಾ ನಟ ದೇವ್ ಆನಂದ್ ವಿರೋಧಿಸಿದ್ದರು. ಇದರ ಪರಿಣಾಮ ಕಾಂಗ್ರೆಸ್ ದೇವ್ ಆನಂದ್ ಸಿನಿಮಾಗಳನ್ನೇ ದೂರ ದರ್ಶನದಿಂದ ಬ್ಯಾನ್ ಮಾಡಲಾಗಿತ್ತು ಎಂದು ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನಡೆದ ಅವಾಂತರಗಳ ಮೋದಿ ಪಟ್ಟಿ ಮಾಡಿದ್ದಾರೆ.
05:14 PM (IST) Feb 06
ರಾಜ್ಯ ಬಿಜೆಪಿಯ ಬಣ ಬಡಿದಾಟದ ವಾಕ್ಸಮರ್ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ಇದೀಗ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಖಡಕ್ ವಾರ್ನಿಂಗ್ ನೀಡಿದ್ದಾರೆ. ಕಾರ್ಯಕರ್ತರು ಹಾಗೂ ಬಿಎಸ್ ಯಡಿಯೂರಪ್ಪಗೆ ಅವಮಾನ ಮಾಡಿದರೆ ಸುಮ್ಮನಿರಲ್ಲ ಎಂದಿದ್ದಾರೆ.
04:38 PM (IST) Feb 06
ಬೆಂಗಳೂರಿನಲ್ಲಿ ಇನ್ನೆರಡು ದಿನದಲ್ಲಿ ನೀರಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ದರ ಏರಿಕೆ ಬಗ್ಗೆ ಜಲಮಂಡಳಿ ಸಲ್ಲಿಸಿರುವ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಗುವ ಸಾಧ್ಯತೆ ದಟ್ಟವಾಗಿದೆ
04:10 PM (IST) Feb 06
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವೇಳೆ ನಡೆದ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ನಿಂದ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಸಾಧ್ಯವಿಲ್ಲ. ವಿಕಸಿತ ಭಾರತದ ಬಗ್ಗೆ ರಾಷ್ಟ್ರಪತಿಗಳು ಮಾತನಾಡಿದ್ದಾರೆ ಎಂದು ಹೇಳಿದರು.
03:58 PM (IST) Feb 06
ಮಧ್ಯಪ್ರದೇಶದ ಶಿವಪುರಿ ಬಳಿ ಇಂದು ತರಬೇತಿ ಹಾರಾಟದಲ್ಲಿದ್ದಾಗ ಅವಳಿ ಆಸನಗಳ ಮಿರಾಜ್ 2000 ಯುದ್ಧ ವಿಮಾನ ಪತನಗೊಂಡಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಸೂಚಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎನ್ನುವ ಪ್ರಾಥಮಿಕ ವರದಿ ಬಂದಿದೆ.
03:31 PM (IST) Feb 06
ಅಮೆರಿಕದಿಂದ ಗಡೀಪಾರು ಮಾಡಿದ ಭಾರತೀಯ ನಾಗರಿಕರ ಬಗ್ಗೆ, ಕಾಂಗ್ರೆಸ್ ಸಂಸದ ಶಕ್ತಿಸಿನ್ಹ್ ಗೋಹಿಲ್ ಮಾತನಾಡಿದ್ದಾರೆ, "ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ಉತ್ತರಿಸುವ ವೇಳೆ, ಅಮೆರಿಕಕ್ಕೆ ತೀಕ್ಷ್ಣವಾದ ಉತ್ತರ ಸಿಗುತ್ತದೆ ಎಂದು ನಾವು ಭಾವಿಸಿದ್ದೆವು. ಅಮೆರಿಕದಲ್ಲಿದ್ದವರು ಭಯೋತ್ಪಾದಕರಲ್ಲ. ಅವರನ್ನು ಏಕೆ ಬೇಡಿ ಹಾಕಿ ವಾಪಸ್ ಕರೆತರಲಾಯಿತು? ವಿದೇಶಾಂಗ ಸಚಿವರು ಇದಕ್ಕೆ ಉತ್ತರಿಸಲಿಲ್ಲ. ಹಿಂದಿರುಗಿದ ಒಟ್ಟು ಜನರಲ್ಲಿ 33 ಮಂದಿ ಗುಜರಾತ್‌ನವರು, ಇದು ಮಾದರಿ ರಾಜ್ಯ ಎನ್ನಲಾಗುತ್ತದೆ. ನಾವು ನಮ್ಮ ವಿಮಾನಗಳನ್ನು ಅಮೆರಿಕಕ್ಕೆ ಕಳುಹಿಸಿ ನಮ್ಮ ಜನರನ್ನು ಘನತೆಯಿಂದ ವಾಪಸ್ ಏಕೆ ಕರೆತರಲಿಲ್ಲ?" ಎಂದಿದ್ದಾರೆ.
03:28 PM (IST) Feb 06
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆಲುವು ಸಾಧಿಸುತ್ತದೆ ಎಂದು ಹಲವಾರು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದ ನಂತರ, ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು, ಎಕ್ಸಿಟ್ ಪೋಲ್‌ಗಳು ಅಕಾಲಿಕವಾಗಿದ್ದು ಅದು ಸರಿ ಅಥವಾ ತಪ್ಪಾಗಿರಬಹುದು ಎಂದು ಜನರು ಫಲಿತಾಂಶಗಳಿಗಾಗಿ ಕಾಯಬೇಕು ಎಂದು ಹೇಳಿದ್ದಾರೆ. ದೆಹಲಿಯ ಜನರು "ಬುದ್ಧಿವಂತಿಕೆಯಿಂದ" ರಾಷ್ಟ್ರ ರಾಜಧಾನಿಗಾಗಿ ನಿಜವಾಗಿಯೂ ಕೆಲಸ ಮಾಡುವವರಿಗೆ ಮತ ಹಾಕಿದ್ದಾರೆ ಎಂದು ಮಲಿವಾಲ್ ಭರವಸೆ ವ್ಯಕ್ತಪಡಿಸಿದರು, ದೆಹಲಿ "ಕಸದ ಬುಟ್ಟಿ"ಯಾಗಿ ಮಾರ್ಪಟ್ಟಿದೆ ಮತ್ತು ನಗರವು ಪ್ರಸ್ತುತ ಅದರ "ಕೆಟ್ಟ ಸ್ಥಿತಿಯಲ್ಲಿದೆ" ಎಂದು ಹೇಳಿದರು.
03:14 PM (IST) Feb 06
ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ. 5ರಿಂದ ಫೆ. 14ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಹಾರಾಟದ ಸಮಯ ಬದಲಾವಣೆಯಾಗಲಿದೆ.
ಪ್ರಯಾಣಿಕರೇ ಗಮನಿಸಿ: ಫೆ.14ರವರೆಗೆ ಬೆಂಗಳೂರು ಏರ್‌ಪೋರ್ಟ್‌ನ ವಿಮಾನ ಹಾರಾಟ ಸಮಯ ಬದಲು
02:52 PM (IST) Feb 06
ಏರ್ ಶೋ ಹಿನ್ನಲೆಯಲ್ಲಿ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣ ಮಾಹಿತಿ ನೀಡಿದೆ.
02:47 PM (IST) Feb 06
ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’ ವೀಕ್ಷಣೆಗೆ ತೆರಳುವವರಿಗಾಗಿ ಮೆಜೆಸ್ಟಿಕ್, ಶಿವಾಜಿನಗರ, ಹೆಬ್ಬಾಳ, ಐಟಿಪಿಎಲ್, ಕೆಂಗೇರಿ ಸೇರಿದಂತೆ 9 ಪ್ರಮುಖ ಸ್ಥಳಗಳಿಂದ ಉಚಿತ ವೋಲ್ವೋ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.