
ನವದೆಹಲಿ[ಫೆ.14]: ಲ್ಯಾಂಡಿಂಗ್ ವೇಳೆ ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಬದಿಯ ಲೈಟ್‌ಗಳಿಗೆ ಹಾನಿ ಮಾಡಿದ್ದಕ್ಕೆ ಸ್ಪೈಸ್ ಜೆಟ್ ಸಂಸ್ಥೆಗೆ ಸೇರಿದ ಇಬ್ಬರು ಪೈಲಟ್‌ಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ನಾಲ್ಕೂವರೆ ತಿಂಗಳುಗಳ ಕಾಲ ಅಮಾನತುಗೊಳಿಸಿದೆ.
ಮಂಗ ಓಡಿಸಲು ಕರಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿ!
2019ರ ಅಕ್ಟೋಬರ್ 31ರಂದು ದುಬೈನಿಂದ ಬಂದಿದ್ದ ಬೋಯಿಂಗ್ 737 ವಿಮಾನವನ್ನು ಲ್ಯಾಂಡ್ ಮಾಡುವ ವೇಳೆ, ರನ್‌ವೇ ಬದಿಯ ಮೂರು ಲೈಟ್‌ಗಳು ಹಾನಿಗೀಡಾಗಿದ್ದವು. ಪ್ರಕರಣ ಸಂಬಂದ ಪೈಲಟ್‌ಗಳಿಗೆ ಶೋಕಾಸ್ ನೊಟೀಸು ಜಾರಿ ಮಾಡಲಾಗಿತ್ತು. ಆದರೆ ಉತ್ತರ ಕೊಡಲು ವಿಫಲರಾಗಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.
ಘಟನೆ ನಡೆದ ದಿನದಿಂದಲೇ ಜಾರಿಗೆ ಬರುವಂತೆ ಅವರ ಪರವಾನಿಗೆಯನ್ನು ನಾಲ್ಕುವರೆ ತಿಂಗಳುಗಳ ಕಾಲ ರದ್ದು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರ್ನಬ್ ಆಯ್ತು, ಈಗ ಪೋಸ್ಟ್ ಕಾರ್ಡ್ ಸಂಪಾದಕನಿಗೆ ಅವಮಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ