* ಬುಧವಾರ 181 ಮಂದಿಗೆ ಕೋವಿಡ್ ಕೇಸ್, 222 ಮಂದಿ ಗುಣಮುಖ
* 39 ಲಕ್ಷದ ಗಡಿ ದಾಟಿದ ಗುಣಮುಖರ ಸಂಖ್ಯೆ
* ದೇಶದಲ್ಲಿ 4575 ಹೊಸ ಕೋವಿಡ್ ಕೇಸು: 145 ಸಾವು
ಬೆಂಗಳೂರು(ಮಾ.10): ರಾಜ್ಯದಲ್ಲಿ ಕೊರೋನಾ(Coronavirus) ಹೊಸ ಪ್ರಕರಣಗಳು 200 ಆಸುಪಾಸಿನಲ್ಲಿಯೇ ಮುಂದುವರೆದಿದ್ದು, ಸಾವು ಎರಡು ತಿಂಗಳ ಬಳಿಕ 2ಕ್ಕೆ ಇಳಿಕೆಯಾಗಿದೆ. ಬುಧವಾರ ಮಂಡ್ಯದ 51 ವರ್ಷದ ಮಹಿಳೆ, ಧಾರವಾಡದ 90 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ(Death). ಬುಧವಾರ 181 ಮಂದಿ ಸೋಂಕಿತರಾಗಿದ್ದಾರೆ. 222 ಮಂದಿ ಗುಣಮುಖರಾಗಿದ್ದಾರೆ.
ಒಟ್ಟಾರೆ ಗುಣಮುಖರ ಸಂಖ್ಯೆ 39 ಲಕ್ಷದ ಗಡಿ ದಾಟಿದೆ. ಬುಧವಾರ 181 ಮಂದಿ ಸೋಂಕಿತರಾಗಿದ್ದಾರೆ. 222 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2937 ಸಾವಿರ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 41 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ(Positivity Rate) ಶೇ.0.32 ರಷ್ಟು ದಾಖಲಾಗಿದೆ. ಬುಧವಾರ ಮಂಡ್ಯದ 51 ವರ್ಷದ ಮಹಿಳೆ, ಧಾರವಾಡದ 90 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 122 ಮಂದಿಗೆ ಸೋಂಕು ದೃಢಪಟ್ಟಿದ್ದು, ಉಳಿದಂತೆ ಯಾವ ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಬೆರಳೆಣಿಕೆ ದಾಟಿಲ್ಲ. 8 ಜಿಲ್ಲೆಗಳಲ್ಲಿ ಶೂನ್ಯವಿದೆ.
ದೇಶದ ಮೊದಲ ಕೋವಿಡ್ ಮರಣಕ್ಕೆ ಇಂದಿಗೆ 2 ವರ್ಷ: ಕೊರೋನಾ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಕಲಬುರಗಿ
ಮೂರನೇ ಅಲೆಯಲ್ಲಿ(Covid 3rd Wave) ಸಾವಿನ ಪ್ರಮಾಣ ಕಡಿಮೆ ಇದ್ದು, ಬಹುತೇಕ ಸೋಂಕಿತರ ಗುಣಮುಖವಾಗುತ್ತಿದ್ದಾರೆ. ಇದರೊಂದಿಗೆ ಮೂರೂ ಅಲೆಗಳಲ್ಲಿಯೂ ಒಟ್ಟಾರೆ ಗುಣಮುಖರ ಸಂಖ್ಯೆಯು 39,00,127ಕ್ಕೆ ಹೆಚ್ಚಿದೆ. ಈವರೆಗೂ 39.43 ಲಕ್ಷ ಮಂದಿಗೆ ಸೊಂಕು ತಗುಲಿದೆ. ಗುಣಮುಖ ದರ ಶೇ.99 ರಷ್ಟಿದೆ.
ಬೆಂಗಳೂರು ನಗರದಲ್ಲಿ ಕೊರೋನಾ ಸಾವು ಶೂನ್ಯಕ್ಕೆ ಇಳಿಕೆ
ಬೆಂಗಳೂರು(Bengaluru): ಕೊರೋನಾ ಮೂರನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ ಕೊರೋನಾದಿಂದ ಯಾವ ಸೋಂಕಿತರು ಮೃತಪಟ್ಟಿಲ್ಲ. ಬುಧವಾರ 122 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಯಾವುದೇ ಸಾವು ದಾಖಲಾಗಿಲ್ಲ. 147 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2283 ಸಕ್ರಿಯ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಬುಧವಾರ 15 ಸಾವಿರ ಪರೀಕ್ಷೆ ನಡೆದಿದ್ದು, ಶೇ.0.8 ರಷ್ಟುಪಾಸಿಟಿವಿಟಿ ದರ ದಾಖಲಾಗಿದೆ.
ಡಿಸೆಂಬರ್‌ಗೂ ಮುಂಚೆ ಬೆಂಗಳೂರಿನಲ್ಲಿ ಸೋಂಕಿತರ ಸಾವು ಶೂನ್ಯ ವರದಿಯಾಗಿತ್ತು. ಬಳಿಕ ಏರಿಕೆಯಾಗುತ್ತಾ ಸಾಗಿ ಜನವರಿಯಲ್ಲಿ 50ರ ಗಡಿದಾಟಿತ್ತು. ಕಳೆದ ಎರಡು ವಾರದಿಂದ ಬೆರಳೆಣಿಕೆಯಷ್ಟೇ ಮುಂದುವರೆದಿದ್ದು, ಮೂರನೇ ಅಲೆಯಲ್ಲಿ ಮೊದಲ ಬಾರಿ ಶೂನ್ಯ ತಲುಪಿದೆ. ಸಕ್ರಿಯ ಪ್ರಕರಣಗಳಲ್ಲಿ ಸದ್ಯ 79 ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Covid-19 Crisis: ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ..!
ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.79 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.6 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16,938 ಇದೆ. ನಗರದಲ್ಲಿ ಐದಕ್ಕಿಂತ ಕಡಿಮೆ ಕೊರೋನಾ ಪ್ರಕರಣವಿರುವ 2 ಸಕ್ರಿಯ ಕಂಟೈನ್ಮೆಂಟ್ ವಲಯ, ಐದಕ್ಕೂ ಹೆಚ್ಚು ಕೊರೋನಾ ಪ್ರಕರಣವಿರುವ 3 ಕ್ಲಸ್ಟರ್ ವಲಯವಿದೆ ಎಂದು ಬಿಬಿಎಂಪಿ(BBMP) ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.
4575 ಹೊಸ ಕೋವಿಡ್ ಕೇಸು: 145 ಸಾವು
ನವದೆಹಲಿ: ದೈನಂದಿನ ಕೇಸುಗಳಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 4,575 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದೇ ಅವಧಿಯಲ್ಲಿ 145 ಸೋಂಕಿತರು ಸಾವಿಗೀಡಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 2,986 ಸೋಂಕಿತರು ಗುಣಮುಖವಾಗುವ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳು 46,962ಕ್ಕೆ ಇಳಿಕೆಯಾಗಿದೆ. ಇದು ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಶೇ.0.11ರಷ್ಟಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರ ಶೇ.0.51ಕ್ಕೆ, ವಾರದ ಪಾಸಿಟಿವಿಟಿ ದರ ಶೇ.062ಕ್ಕೆ ಕುಸಿದಿದೆ. ದೇಶದಲ್ಲಿ(India) ಈವರೆಗೆ ಒಟ್ಟು 4.29 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು 5.15 ಜನ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ 179.33 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.