* ಕರ್ನಾಟಕದಲ್ಲಿ ಕೊರೋನಾ ಅಂಕಿ-ಸಂಖ್ಯೆ
* ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ
* ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.09
ಬೆಂಗಳೂರು, (ಜು.18): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 1,708 ಜನರಿಗೆ ಕೊರೋನಾ ದೃಢಪಟ್ಟಿದ್ದು, 36 ಜನರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,83,947ಕ್ಕೆ ಏರಿಕೆಯಾಗಿದೆ. ಈವರೆಗೂ 28,18,476 ಸೋಂಕಿತರು ಗುಣಮುಖರಾಗಿದ್ದು. 29,291 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
undefined
ಕರ್ನಾಟಕದಲ್ಲಿ ಮತ್ತಷ್ಟು ಲಾಕ್‌ಡೌನ್ ಸಡಿಲಿಕೆ: ಏನು ಓಪನ್? ಏನಿಲ್ಲ?
ಬೆಂಗಳೂರಿನಲ್ಲಿ ಕಳೆದ ಒಂದು ದಿನದಲ್ಲಿ 386 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 12,22,189ಕ್ಕೆ ಏರಿಕೆಯಾಗಿದೆ. 9 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15,796ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.09ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 2.10ರಷ್ಟಿದೆ.
ಬಾಗಲಕೋಟೆ 4, ಬಳ್ಳಾರಿ 1, ಬೆಳಗಾವಿ 55, ಬೆಂಗಳೂರು ಗ್ರಾಮಾಂತರ 32, ಬೆಂಗಳೂರು 386, ಬೀದರ್ 8, ಚಾಮರಾಜನಗರ 23, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 105, ಚಿತ್ರದುರ್ಗ 15, ದಕ್ಷಿಣ ಕನ್ನಡ 241, ದಾವಣಗೆರೆ 23, ಧಾರವಾಡ 21, ಗದಗ 1, ಹಾಸನ 121, ಹಾವೇರಿ 8, ಕಲಬುರಗಿ 3, ಕೊಡಗು 45, ಕೋಲಾರ 33, ಕೊಪ್ಪಳ 2, ಮಂಡ್ಯ 53, ಮೈಸೂರು 210, ರಾಯಚೂರು 4, ರಾಮನಗರ 3, ಶಿವಮೊಗ್ಗ 82, ತುಮಕೂರು 64, ಉಡುಪಿ 105, ಉತ್ತರ ಕನ್ನಡ 44, ವಿಜಯಪುರ 1, ಯಾದಗಿರಿ 0 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.