ಲೋಕಾಯುಕ್ತಕ್ಕೆ ಇನ್ನೂ ಆಸ್ತಿ ವಿವರ ಸಲ್ಲಿಸದ 163 ಶಾಸಕರು!

Published : Jul 10, 2022, 10:03 AM IST
ಲೋಕಾಯುಕ್ತಕ್ಕೆ  ಇನ್ನೂ ಆಸ್ತಿ ವಿವರ ಸಲ್ಲಿಸದ 163 ಶಾಸಕರು!

ಸಾರಾಂಶ

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 163 ಶಾಸಕರು ಮಾಹಿತಿ ಸಲ್ಲಿಸದವರಲ್ಲಿ 11 ಸಚಿವರು ಗಡುವು ಮುಗಿದ ಬಳಿಕ 16 ಶಾಸಕರಿಂದ ಮಾಹಿತಿ

ಬೆಂಗಳೂರು (ಜು.10): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಹನ್ನೊಂದು ಸಚಿವರು ಸೇರಿದಂತೆ ವಿಧಾನಸಭೆ ಮತ್ತು ವಿಧಾನಪರಿಷತ್‌ನ 163 ಸದಸ್ಯರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿಲ್ಲ.

ಪ್ರತಿ ವರ್ಷ ಜೂ.30ಕ್ಕೆ ಎಲ್ಲಾ ಸದಸ್ಯರು ಲೋಕಾಯುಕ್ತ ಸಂಸ್ಥೆಗೆ ಆಸ್ತಿವಿವರ ಸಲ್ಲಿಸಬೇಕು. ಆದರೆ, ಈವರೆಗೆ 163 ಸದಸ್ಯರು ತಮ್ಮ ಆಸ್ತಿ ವಿವರವನ್ನು ಸಲ್ಲಿಕೆ ಮಾಡಿಲ್ಲ. ಆ.31ರವರೆಗೆ ಹೆಚ್ಚುವರಿ ಕಾಲಾವಕಾಶ ಇದ್ದು, ನಂತರವೂ ಸಲ್ಲಿಕೆ ಮಾಡದಿದ್ದರೆ ಲೋಕಾಯುಕ್ತರು ರಾಜ್ಯಪಾಲರಿಗೆ ಆಸ್ತಿ ವಿವರ ಸಲ್ಲಿಕೆ ಮಾಡದಿರುವವರ ಪಟ್ಟಿಯನ್ನು ಕಳುಹಿಸಲಿದ್ದಾರೆ. ಗಡುವು ಮುಗಿದ ಬಳಿಕ 16 ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. ವಿಧಾನಸಭೆಯ 114 ಮತ್ತು ವಿಧಾನಪಪರಿಷತ್‌ನ 49 ಸದಸ್ಯರು ನಾಮಪತ್ರ ಸಲ್ಲಿಕೆ ಮಾಡಿಲ್ಲ.

ಸಾಮಾಜಿಕ ಹೋರಾಟಗಾರ ಎಚ್‌.ಎಂ.ವೆಂಕಟೇಶ್‌ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಹಾಲಪ್ಪ ಆಚಾರ್‌, ಬಿ.ಸಿ.ಪಾಟೀಲ್‌, ಬಿ.ಶ್ರೀರಾಮುಲು, ಮುನಿರತ್ನ, ಕೆ.ಗೋಪಾಲಯ್ಯ, ಎಸ್‌.ಅಂಗಾರ, ಕೆ.ಸಿ.ನಾರಾಯಣಗೌಡ, ಎಸ್‌.ಟಿ.ಸೋಮಶೇಖರ್‌, ಎಂ.ಟಿ.ಬಿ.ನಾಗರಾಜು ಆಸ್ತಿ ವಿವರ ಸಲ್ಲಿಕೆ ಮಾಡದ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದ ನಮ್ಮನ್ನಾಳುವ ಜನಪ್ರತಿನಿಧಿಗಳೇ ಲೋಕಾಯುಕ್ತ ಕಾಯ್ದೆಯನ್ನು ಉಲ್ಲಂಘಿಸಿದ್ದು, ಈಗ ರಾಜ್ಯದ ನಾಗರಿಕರಿಗೆ ವಿಧಾನಸೌಧದಿಂದ ಆಡಳಿತ ನಡೆಸುವ ಜನಪ್ರತಿನಿಧಿಗಳು ಕಾನೂನುಗಳನ್ನು ಪಾಲಿಸುವಂತೆ ನಾಗರಿಕರಿಗೆ ಹೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಎಚ್‌.ಎಂ.ವೆಂಕಟೇಶ್‌ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ, ಸ್ಥಳ ವೀಕ್ಷಣೆ ಮಾಡಿದ ಕಾಂಗ್ರೆಸ್

ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿದರು: ಎಚ್‌. ವಿಶ್ವನಾಥ್‌
ಲೋಕಾಯುಕ್ತ ಸಂಸ್ಥೆ ಇದ್ದ ಕಾರಣಕ್ಕೆ ಯಡಿಯೂರಪ್ಪ ಜೈಲು ಪಾಲಾದರು. ಅಂತಹ ಸಂಸ್ಥೆಯನ್ನೇ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಮುಚ್ಚಿದರು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಟೀಕಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 323 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿತ್ತು. ಆ ಕೇಸ್‌ಗಳನ್ನು ಲೋಕಾಯುಕ್ತ ಸಮೇತವೇ ಮುಚ್ಚಲಾಯಿತು. ಸಿದ್ದರಾಮಯ್ಯ ಅವರು ಲೋಕಾಯುಕ್ತ ಯಾಕೆ ಬಾಗಿಲು ಹಾಕಿದರು?, ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ಯಾರೂ ಕೇಳುತ್ತಿಲ್ಲ. ಏಕೆಂದರೆ ಎಲ್ಲ ಪಕ್ಷಗಳ ನಾಯಕರು ಗಾಜಿನ ಮನೆಯಲ್ಲಿಯೇ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಆರ್ಕಾವತಿ ಬಡಾವಣೆಯ ವಿಚಾರದಲ್ಲಿ ಎಲ್ಲಿ ತಮಗೆ ಸಮಸ್ಯೆ ಆಗುತ್ತೆ ಅಂತಾ ಸಿದ್ದರಾಮಯ್ಯ ಲೋಕಾಯುಕ್ತವನ್ನೇ ಮುಚ್ಚಿದರು. ಈಗ ಲೋಕಾಯುಕ್ತ ಸಂಸ್ಥೆಗೆ ಮೂಲ ಸ್ವರೂಪ ನೀಡಬೇಕಿದೆ ಎಂದರು.

ಬೆಂಗಳೂರಿನಂತಹ ನಗರಕ್ಕೆ ಪ್ರಾಮಾಣಿಕ ಅಧಿಕಾರಿಯನ್ನು ಜಿಲ್ಲಾಧಿಕಾರಿಯಾಗಿ ನೇಮಿಸಬೇಕು. ನೇಮಕಾತಿ ಪ್ರಾಧಿಕಾರಿಗಳಿಗೆ ರಾಜಕಾರಣಿಗಳು ತಮ್ಮ ಲವರ್‌ಗಳು ಅಥವಾ ಭಟ್ಟಂಗಿಗಳನ್ನೇ ಸದಸ್ಯರನ್ನಾಗಿ ಮಾಡಿರುತ್ತಾರೆ. ಈ ಸ್ಥಿತಿಯಲ್ಲಿ ನಿಷ್ಪಕ್ಷಪಾತ ನೇಮಕಾತಿ ಹೇಗೆ ಸಾಧ್ಯ ಹೇಳಿ?, ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ವಿಜಯೇಂದ್ರ ಇರಬಹುದು, ಅಶ್ವಥ್‌ ನಾರಾಯಣ ಇರಬಹುದು, ನಾನು ಅಥವಾ ನನ್ನ ಮಗನೇ ಇರಬಹುದು ಯಾರೇ ತಪ್ಪು ಮಾಡಿದ್ದರು ಕ್ರಮ ಕೈಗೊಳ್ಳಿ ಎಂದು ಅವರು ಒತ್ತಾಯಿಸಿದರು.

ರಾಜ್ಯ, ಕೇಂದ್ರದಲ್ಲಿರುವುದು ಡಬಲ್‌ ದೋಖಾ ಸರ್ಕಾರಗಳು: ಖಂಡ್ರೆ

ಸಿಎಂಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ: ಬೊಮ್ಮಾಯಿ ಸರ್ಕಾರ ಸಂಪೂರ್ಣವಾಗಿ ಟೇಕ್‌ಆಫ್‌ ಆಗಿದೆ ಎಂದು ಹೇಳಲು ಆಗದು. ಸಿಎಂಗೆ ಒಳ್ಳೆ ಆಡಳಿತ ನೀಡಬೇಕು ಎಂಬ ಬಯಕೆ ಇದೆ. ಆದರೆ, ಅಧಿಕಾರಿಗಳು ಆ ವೇಗಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷ ಮಾಡಬೇಕು. ಆದರೆ ಈ ವಿಷಯದಲ್ಲಿ ಪಕ್ಷ ಪತ್ತೆಯೇ ಇಲ್ಲ ಎಂದರು.

ಈಗ ಸಂಪುಟ ವಿಸ್ತರಣೆ ಏಕೆ?: ಈಗ ಸಂಪುಟ ವಿಸ್ತರಣೆ ಮಾಡಿ ಕೊಂಡು ಏನೂ ಮಾಡಬೇಕು ಹೇಳಿ? ಹೈಕಮಾಂಡ್‌ ಮನಃಸ್ಥಿತಿ ನೋಡಿದರೆ ವಿಸ್ತರಣೆಯೂ ಆಗಲ್ಲ, ಯಾವ ಬದಲಾವಣೆಯೂ ಆಗಲ್ಲ. ಇರುವ ಸ್ಥಿತಿಯನ್ನೆ ಮುಂದುವರಿಸಿ ಕೊಂಡು ಹೋಗುವ ಮನಃಸ್ಥಿತಿ ಹೈಕಮಾಂಡ್‌ಗೆ ಇದೆ. ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಯೂ ಆಗಲ್ಲ. ಏಕೆಂದರೆ ನಿಗಮ ಮಂಡಳಿ ಅಧ್ಯಕ್ಷರೆಲ್ಲಾ ಯಡಿಯೂರಪ್ಪ ಅವರ ಕಡೆಯವರು. ಅವರನ್ನು ಬದಲಿಸಿದರೆ ಗಲಾಟೆ ಶುರುವಾಗುತ್ತವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!