Corona Crisis: 5 ತಿಂಗಳ ಬಳಿಕ ಕರ್ನಾಟಕದಲ್ಲಿ 1500+ ಕೋವಿಡ್‌ ಕೇಸು: 1 ಸಾವು

By Govindaraj SFirst Published Jul 22, 2022, 7:15 AM IST
Highlights

ರಾಜ್ಯದಲ್ಲಿ ಐದು ತಿಂಗಳ ಬಳಿಕ ಕೊರೋನಾ ಸೋಂಕು ಪ್ರಕರಣಗಳು ಒಂದೂವರೆ ಸಾವಿರದಷ್ಟು ವರದಿಯಾಗಿವೆ. ಇದೇ ವೇಳೆ ಸಕ್ರಿಯ ಸೋಂಕು ಪ್ರಕರಣಗಳು ಎಂಟು ಸಾವಿರ ಗಡಿ ದಾಟಿವೆ. 

ಬೆಂಗಳೂರು (ಜು.22): ರಾಜ್ಯದಲ್ಲಿ ಐದು ತಿಂಗಳ ಬಳಿಕ ಕೊರೋನಾ ಸೋಂಕು ಪ್ರಕರಣಗಳು ಒಂದೂವರೆ ಸಾವಿರದಷ್ಟು ವರದಿಯಾಗಿವೆ. ಇದೇ ವೇಳೆ ಸಕ್ರಿಯ ಸೋಂಕು ಪ್ರಕರಣಗಳು ಎಂಟು ಸಾವಿರ ಗಡಿ ದಾಟಿವೆ. ಗುರುವಾರ 1552 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1384 ಮಂದಿ ಗುಣಮುಖರಾಗಿದ್ದಾರೆ. ರಾಯಚೂರಿನಲ್ಲಿ 80 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. ಸದ್ಯ 8,033 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 33 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 4.6 ರಷ್ಟು ದಾಖಲಾಗಿದೆ.  ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಒಂದೂವರೆ ಸಾವಿರ ಹೆಚ್ಚು ನಡೆದಿವೆ. 

ಹೀಗಾಗಿ, ಹೊಸ ಪ್ರಕರಣಗಳು 74 ಏರಿಕೆಯಾಗಿವೆ (ಬುಧವಾರ 1,478 ಕೇಸ್‌, ಸಾವು ಶೂನ್ಯ). ಈ ಹಿಂದೆ ಫೆಬ್ರವರಿ 17 ರಂದು 1529 ಹೊಸ ಪ್ರಕರಣಗಳು ವರದಿಯಾಗಿದ್ದವು. ಸದ್ಯ ಐದು ತಿಂಗಳ ಬಳಿಕ (153 ದಿನಗಳು) ಒಂದೂವರೆ ಸಾವಿರ ಗಡಿ ದಾಟಿವೆ. ಜುಲೈ ಆರಂಭದಿಂದಲೂ ಸತತವಾಗಿ ಒಂದು ಸಾವಿರ ಆಸುಪಾಸಿನಲ್ಲಿ ಹೊಸ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಸಕ್ರಿಯ ಸೋಂಕಿತರ ಸಂಖ್ಯೆ ಎಂಟು ಸಾವಿರ ಗಡಿ ದಾಟಿದೆ. ಈ ಪೈಕಿ 83 ಮಂದಿ ಆಸ್ಪತ್ರೆಯಲ್ಲಿದ್ದು, 7950 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

Corona Crisis: ಬೆಂಗಳೂರಿನಲ್ಲಿ ಮತ್ತೆ ಏರಿದ ಕೊರೋನಾ ಸಂಖ್ಯೆ

ಎಲ್ಲಿ, ಎಷ್ಟು ಮಂದಿಗೆ ಸೋಂಕು?: ಗುರುವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲೇ 1285 ಪತ್ತೆಯಾಗಿವೆ. ಉಳಿದಂತೆ ಬೆಳಗಾವಿ 37, ಧಾರವಾಡ 35, ಮೈಸೂರು 31, ಕಲಬುರಗಿ 20, ಕೋಲಾರ 16, ಕೊಡಗು 15, ಬಳ್ಳಾರಿ ಮತ್ತು ಉಡುಪಿ ತಲಾ 14, ಬೆಂಗಳೂರು ಗ್ರಾಮಾಂತರ 11, 19 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟುಪತ್ತೆಯಾಗಿವೆ. ಯಾದಗಿರಿಯಲ್ಲಿ ಮಾತ್ರ ಶೂನ್ಯ ಪ್ರಕರಣ ವರದಿಯಾಗಿದೆ.

ಬೆಂಗಳೂರಿನಲ್ಲಿ ಮತ್ತೆ ಶೇ.6ರ ಗಡಿ ದಾಟಿದ ಪಾಸಿಟಿವಿಟಿ: ನಗರದಲ್ಲಿ ಗುರುವಾರ 1,285 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.32ಕ್ಕೆ ಏರಿಕೆಯಾಗಿದೆ. 1,242 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ನಗರದಲ್ಲಿ ಸದ್ಯ7,107 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 19 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 23,212 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1304 ಮಂದಿ ಮೊದಲ ಡೋಸ್‌, 6012 ಮಂದಿ ಎರಡನೇ ಡೋಸ್‌ ಮತ್ತು 15,896 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.

Free Booster Dose: ಇಂದಿನಿಂದ ರಾಜ್ಯದಲ್ಲಿ ಉಚಿತ 3ನೇ ಡೋಸ್‌ ಕೋವಿಡ್‌ ಲಸಿಕೆ

ನಗರದಲ್ಲಿ 17,988 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 14,589 ಆರ್‌ಟಿಪಿಸಿಆರ್‌ ಹಾಗೂ 3,399 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಗುರುವಾರ ಮಹದೇವಪುರ ವಲಯದಲ್ಲಿ ಒಂದೇ ದಿನ 11 ಹೊಸದಾಗಿ ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿದೆ. ಈ ಮೂಲಕ ಮಹದೇವಪುರದ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ನಗರದ ಒಟ್ಟು ನಗರದಲ್ಲಿ ಒಟ್ಟು 22 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

click me!