IPS Transfer: 13 ಜನ ಐಪಿಎಸ್ ಅಧಿಕಾರಿಗಳ ವರ್ಗ: ನಿಮ್ಮ ಜಿಲ್ಲೆಯ ಎಸ್‌ಪಿ ಯಾರು.?

By Sathish Kumar KHFirst Published Jan 30, 2023, 3:58 PM IST
Highlights

ರಾಜ್ಯದಲ್ಲಿ ಬರೋಬ್ಬರಿ 13 ಜನ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಒಂದೇ ದಿನದಲ್ಲಿ ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.

ಬೆಂಗಳೂರು (ಜ.30): ರಾಜ್ಯದಲ್ಲಿ ಬರೋಬ್ಬರಿ 13 ಜನ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಒಂದೇ ದಿನದಲ್ಲಿ ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ಆದೇಶಿಸಿದೆ. ರಾಜ್ಯ ಸರ್ಕಾರ ಇನ್ನು ಎರಡು ತಿಂಗಳು ಮಾತ್ರ ಅಧಿಕಾರದಲ್ಲಿದ್ದು, ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಈಗ ವರ್ಗಾವಣೆಗಿಒಂಡ ಅಧಿಕಾರಿಗಳನ್ನು ಮುಂದಿನ ಒಂದು ವರ್ಷದವರೆಗೆ ಅಧಿಕಾರಿಗಳ ವರ್ಗಾವಣೆ ಮಾಡುವ ಸಾಧ್ಯತೆ ಬಹುತೇಕ ಕಡಿಮೆ ಎಂದು ಹೇಳಬಹುದು.  

ರಾಜ್ಯ ಗೃಹ ಇಲಾಖೆಯು ಒಂದೇ ದಿನದಲ್ಲಿ ವಿವಿಧ ಜಿಲ್ಲೆಗಳು, ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಯಾವ ಅಧಿಕಾರಿ ಎಲ್ಲಿಗೆ ವರ್ಗಾವಣೆ ಆಗಿದ್ದಾರೆ ಎಂಬುದು ಇಲ್ಲಿದೆ ಪೂರ್ಣ ಮಾಹಿತಿ.

ಅಧಿಕಾರಿ ಹೆಸರು- ವರ್ಗಾವಣೆಗೊಂಡ ಸ್ಥಳ
ಕಾರ್ತಿಕ್ ರೆಡ್ಡಿ - ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ವಿನಾಯಕ್ ಪಾಟೀಲ್ - ಅಸಿಸ್ಟೆಂಟ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಪೊಲೀಸ್ ಜನರಲ್
ಸಂತೋಷ್ ಬಾಬು - ಇಂಟೆಲಿಜೆನ್ಸ್ 
ದೇವರಾಜ್ - ಉತ್ತರ ವಿಭಾಗ, ಬೆಂಗಳೂರು ನಗರ
ಸಿರಿಗೌರಿ - ಇಂಟರ್ ನಲ್ ಸೆಕ್ಯೂರಿಟಿ ಡಿವಿಷನ್
ಟಿ.ಪಿ. ಶಿವಕುಮಾರ್ - ಕೆಪಿಟಿಸಿಎಲ್‌
ಶೇಖರ್.ಎಚ್ - ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಾ ಅಂಡ್‌ ಆರ್ಡರ್ ಬೆಳಗಾವಿ ನಗರ
ಪದ್ಮಿನಿ ಸಾಹೋ - ಚಾಮರಾಜನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 
ಪ್ರದೀಪ್ ಗುಂಟಿ - ಕಾರಾಗೃಹ ಇಲಾಖೆ
ಗೀತಾ ಎಂ.ಎಸ್ - ಟ್ರೈನಿಂಗ್ ಸ್ಕೂಲ್ ಮೈಸೂರು 
ರಾಮರಾಜನ್ - ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 
ರವೀಂದ್ರ ಕಾಶಿನಾಥ್ - ಕಮ್ಯಾಂಡ್ ಸೆಂಟರ್ ಬೆಂಗಳೂರು ನಗರ
ಅಯ್ಯಪ್ಪ ಎಂ.ಎ - ಇಂಟೆಲಿಜೆನ್ಸ್

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ- 74 ಡಿವೈಎಸ್‌ಪಿ ವರ್ಗಾವಣೆ: 
ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯ ಮೊದಲೇ ರಾಜ್ಯ ಸರ್ಕಾರದಿಂದ ಬರೋಬ್ಬರಿ 74 ಡಿವೈಎಸ್‌ಪಿಗಳನ್ನು ವರ್ಗಾವಣೆಗೊಳಿಸಿ ಅದೇಶ ಹೊರಡಿಸಲಾಗಿದೆ. ಈ ವರ್ಗಾವನೆ ಆದೇಶದಿಂದ ಅಧಿಕಾರಿಗಳು ತಮ್ಮ ಸ್ಥಾನದಿಂದ ಬೇರೆಡೆ ಹೋಗಿ ರಿಪೋರ್ಟ್‌ ಮಾಡಿಕೊಳ್ಳಲಿದ್ದಾರೆ. ಸಂಬಂಧಪಟ್ಟ ಹಿರಿಯ ಮೇಲಧಿಕಾರಿಗಳು ಕೂಡಲೇ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳು ತಮ್ಮ ವರ್ಗಾವಣೆಯಾದ ಸ್ಥಳದಲ್ಲಿ ಕಾಲ ವಿಳಂಬವಿಲ್ಲದೇ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

click me!