ರಾಜ್ಯದಲ್ಲಿ ಮತ್ತೆ ಮೂರಂಕಿ ದಾಟಿದ ಕೊರೋನಾ ಸೊಂಕಿತರ ಸಂಖ್ಯೆ: ಇರಲಿ ಎಚ್ಚರಿಕೆ

By Suvarna News  |  First Published Dec 15, 2020, 10:45 PM IST

ರಾಜ್ಯದಲ್ಲಿಂದು ನಿನ್ನೆಗಿಂತ (ಸೋಮವಾರ) ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.


ಬೆಂಗಳೂರು, (ಡಿ.15): ಕರ್ನಾಟಕದಲ್ಲಿ ಮತ್ತೆ ಕೊರೋನಾ ಪಾಸಿಟಿವ್ ಕೇಸ್‌ ಮೂರಂಕಿ ದಾಟಿದ್ದು, ಇಂದು (ಸಮಂಗಳವಾರ) 1185 ಹೊಸ ಪ್ರಕರಣಗಳು ದೃಢಪಟ್ಟಿವೆ.

ಇದರೊಂದಿಗೆ ಸಂಖ್ಯೆ 9,03,425 ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 1594 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 875796ಕ್ಕೆ ಏರಿಕೆ ಆಗಿದೆ. 

Latest Videos

undefined

ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಸೋಮವಾರ ಮೂರಂಕಿಗೆ ಇಳಿದ ಸೋಂಕಿನ ಪ್ರಮಾಣ

11 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟಾರೇ ಪ್ರಕರಣಗಳ ಸಂಖ್ಯೆ 903425 ಆಗಿದೆ. ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1.32 ರಷ್ಟಿದ್ದರೆ, ಮೃತರ ಶೇಕಡಾವಾರು ಪ್ರಮಾಣ ಶೇ. 0.92 ರಷ್ಟಿದೆ.

ರಾಜ್ಯದಲ್ಲಿ ಸದ್ಯ 15,645 ಆಯಕ್ಟಿವ್ ಕೇಸ್​ಗಳಿವೆ. ಈ ಪೈಕಿ 253 ಸೋಂಕಿತರು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತನ್ನ ಬುಲೆಟಿನ್​ನಲ್ಲಿ ಹೇಳಿದೆ.

click me!