ರಾಜ್ಯ​ದಲ್ಲಿ 207 ಮಂದಿಗೆ ಕೊರೋನಾ: ಕೇವಲ 10 ದಿನ​ದಲ್ಲಿ ಸೋಂಕಿತರು ಡಬಲ್!

By Kannadaprabha News  |  First Published Apr 11, 2020, 7:10 AM IST

ರಾಜ್ಯ​ದಲ್ಲಿ 207 ಮಂದಿಗೆ ಸೋಂಕು| ನಿನ್ನೆ 10 ಮಂದಿಗೆ ಸೋಂಕು ದೃಢ| ಮೈಸೂರಲ್ಲಿ 5, ಬೆಂಗಳೂರಲ್ಲಿ 4, ಕಲಬುರಗಿಯಲ್ಲಿ 1 ಕೇಸು| ಕೇವಲ 10 ದಿನ​ದಲ್ಲಿ 100 ಕೇಸ್‌ ದೃಢ


ಬೆಂಗಳೂರು(ಏ.11): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ದ್ವಿಶಕ ದಾಟಿದ್ದು ಶುಕ್ರವಾರ ಮತ್ತೆ 10 ಮಂದಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ಶುಕ್ರವಾರ ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಮೃತರ ಸಂಖ್ಯೆ 6 ಆಗಿದ್ದು, 34 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದು, ಮಾ.9 ರಿಂದ 31ರವರೆಗೆ ಮೊದಲ 100 ಪ್ರಕರಣ ವರದಿಯಾಗಲು 23 ದಿನ ತೆಗೆದುಕೊಂಡಿದ್ದ ಕೊರೋನಾ ಸೋಂಕು ಇದೀಗ 10 ದಿನಗಳಲ್ಲೇ 200ರ ಗಡಿ ದಾಟಿದೆ.

Tap to resize

Latest Videos

undefined

ಲಾಕ್‌ಡೌನ್ ನಡುವೆ ಲಜ್ಜೆ ಬಿಟ್ಟ ಜೋಡಿ; ಪಾರ್ಕ್‌ನಲ್ಲಿಯೇ ಬಹಿರಂಗ ಕಾಮದಾಟ!

ಶುಕ್ರವಾರ ಸಂಜೆ 5 ಗಂಟೆವರೆಗೆ ದೃಢಪಟ್ಟಿರುವ ಒಟ್ಟು ಪ್ರಕರಣಗಳಲ್ಲಿ ತಬ್ಲೀಘಿ ಜಮಾತ್‌ ಪ್ರಯಾಣಿಕರು ಹಾಗೂ ಸಂಪರ್ಕಿತರಿಗೆ 39 ಮಂದಿಗೆ ಸೋಂಕು ತಗುಲಿದೆ. ಇನ್ನು ನಂಜನಗೂಡು ಔಷಧ ಕಂಪೆನಿ ಉದ್ಯೋಗಿಗಳು ಹಾಗೂ ಪ್ರಥಮ, ದ್ವಿತೀಯ ಹಂತದ ಸೋಂಕಿತರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ಶುಕ್ರವಾರದ ಹತ್ತು ಪ್ರಕರಣಗಳು 5 ದೆಹಲಿ ಪ್ರಯಾಣದ ಹಿನ್ನೆಲೆಯವರಿಂದ ಹರಡಿದ್ದರೆ ಉಳಿದ 5 ಪ್ರಕರಣ ನಂಜನಗೂಡು ಕಂಪೆನಿ ಮೂಲದಿಂದ ಹರಡಿವೆ.

ಎಲ್ಲಿ ಎಷ್ಟು ಹೊಸ ಕೇಸು?:

10 ಪ್ರಕರಣದಲ್ಲಿ 5 ಪ್ರಕರಣ ಮೈಸೂರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 2, ಬೆಂಗಳೂರು ಗ್ರಾಮಾಂತರ 2, ಕಲಬುರಗಿಯಲ್ಲಿ 1 ಪ್ರಕರಣ ವರದಿಯಾಗಿದೆ. ಇದರಲ್ಲಿ 8 ವರ್ಷ ಹಾಗೂ 11 ವರ್ಷದ ಇಬ್ಬರು ಪುಟ್ಟಮಕ್ಕಳಿಗೂ ಸೋಂಕು ತಗುಲಿದೆ. ನಂಜನಗೂಡು ಕಂಪೆನಿಯ ಸೋಂಕು ಕ್ಲಸ್ಟರ್‌ನಿಂದ 31 ಮಂದಿಗೆ ಸೋಂಕು ಹರಡಿದ್ದು, ಈವರೆಗೂ ಸೋಂಕಿನ ಮೂಲ ಪತ್ತೆಯಾಗಿಲ್ಲ. ಹೀಗಾಗಿ ಆರೋಗ್ಯ ಇಲಾಖೆಗೆ ಇದು ಆತಂಕ ಮೂಡಿಸಿದೆ.

ಹೊಸ ಸೋಂಕಿತರ ವಿವರ:

ಶುಕ್ರವಾರ ವರದಿಯಾದ 10 ಪ್ರಕರಣದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ದೆಹಲಿ ಪ್ರಯಾಣದಿಂದ ಸೋಂಕಿತನಾಗಿದ್ದ 167ನೇ ರೋಗಿ ಸಂಪರ್ಕದಿಂದ 48 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಅಲ್ಲದೆ, ಇದೇ 167ನೇ ಸೋಂಕಿತನಿಂದ 57 ವರ್ಷದ ಮತ್ತೊಬ್ಬ ವ್ಯಕ್ತಿಗೂ ಸೋಂಕು ಹರಡಿದೆ.

ಸೀಲ್‌ಡೌನ್‌: ಹೀಗಿದೆ ನಿಮ್ಮ ಜಿಲ್ಲೆಯ ಗ್ರೌಂಡ್‌ ರಿಪೋರ್ಟ್

ಮೈಸೂರು ಜಿಲ್ಲೆಯಲ್ಲಿ ವರದಿಯಾಗಿರುವ 5 ಪ್ರಕರಣಗಳ ಪೈಕಿ ನಂಜನಗೂಡು ಔಷಧ ಕಂಪೆನಿ ಮೂಲದಿಂದ ಸೋಂಕಿತರಾಗಿದ್ದ 159ನೇ ಸೋಂಕಿತರು ಹಾಗೂ 103ನೇ ಸೋಂಕಿತರಿಂದ ಅವರ 8 ವರ್ಷದ ಪುತ್ರನಿಗೂ ಸೋಂಕು ಹರಡಿದೆ. ಅಲ್ಲದೆ, 103ನೇ ಸೋಂಕಿತರ 48 ವರ್ಷದ ಅತ್ತೆಗೂ ಸೋಂಕು ದೃಢಪಟ್ಟಿದೆ.

ಔಷಧ ಕಾರ್ಖಾನೆ ಉದ್ಯೋಗಿ (111ನೇ ರೋಗಿ) ಸಂಪರ್ಕದಿಂದ 33 ವರ್ಷದ ವ್ಯಕ್ತಿಗೆ, 85ನೇ ರೋಗಿಯಿಂದ ಆತನ 48 ವರ್ಷದ ಪತ್ನಿಗೆ ಸೋಂಕು ಹರಡಿದೆ. ಈ ಮೂಲಕ ನಂಜನಗೂಡು ಮೂಲದಿಂದ ಶುಕ್ರವಾರ 5 ಸೋಂಕು ದೃಢಪಟ್ಟಿದೆ.

ಕಲಬುರಗಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು ದೆಹಲಿಯಿಂದ ವಾಪಸಾಗಿರುವ ನೆಗೆಟಿವ್‌ ವ್ಯಕ್ತಿಯ ಸಂಪರ್ಕದಿಂದ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 169ನೇ ರೋಗಿಯ ಸಹೋದರ 35 ವರ್ಷದ ವ್ಯಕ್ತಿ ಹಾಗೂ 11 ವರ್ಷದ ಹೆಣ್ಣು ಮಗುವಿಗೂ ಸೋಂಕು ತಗುಲಿದೆ.

ಕೊರೋನಾ ಹೋರಾಟಕ್ಕೆ ಮತ್ತಷ್ಟು ನೆರವು; ಆರೋಗ್ಯ ಇಲಾಖೆ ಜೊತೆ ಕೈಜೋಡಿಸಿದ ಟೊಯೋಟಾ ಕಿರ್ಲೋಸ್ಕರ್!

ಐಸಿಯು ಘಟಕದಲ್ಲಿ 4 ಮಂದಿ:

ಒಟ್ಟು 207 ಪ್ರಕರಣದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. 34 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ನಾಲ್ಕು ಮಂದಿಗೆ ಐಸಿಯು ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಒಬ್ಬ ಗೃಹಿಣಿ ಸೇರಿ ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.

click me!